ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ, ಆಂಡರ್ಸನ್ ಇಲ್ಲ!

Posted By:
Subscribe to Oneindia Kannada

ಲಂಡನ್, ಅಕ್ಟೋಬರ್ 26: ಭಾರತ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. ತಂಡದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. ಗಾಯಾಳು ವೇಗಿ ಜೇಮ್ಸ್ ಆಂಡರ್ಸನ್ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

ಅಲಿಸ್ಟರ್ ಕುಕ್ ನೇತೃತ್ವದ 16 ಮಂದಿ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, 5 ಟೆಸ್ಟ್ ಪಂದ್ಯಗಳನ್ನಾಡಲಿದೆ. ನವೆಂಬರ್ 09ರಂದು ರಾಜ್ ಕೋಟ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಇದೇ ಮೊದಲ ಬಾರಿಗೆ ಅಂಪೈರ್ 'ಡಿಸಿಷನ್ ರಿವ್ಯೂ ಸಿಸ್ಟಮ್(ಡಿಆರ್ ಎಸ್) ಬಳಕೆ ಮಾಡಲು ಬಿಸಿಸಿಐ ಹಾಗೂ ಇಸಿಬಿ ಸಮ್ಮತಿಸಿವೆ. [ಭಾರತಕ್ಕೆ ಇಂಗ್ಲೆಂಡ್ ಪ್ರವಾಸ, ಬೆಂಗ್ಳೂರಲ್ಲಿ 1 ಟಿ20 ಪಂದ್ಯ]

ಇಂಗ್ಲೆಂಡ್ ಪರ 473 ವಿಕೆಟ್ ಪಡೆದಿರುವ ವೇಗಿ 34 ವರ್ಷ ವಯಸ್ಸಿನ ಜೇಮ್ಸ್ ಆಂಡರ್ಸನ್ ಅವರು ಭುಜದ ನೋವಿನಿಂದ ಬಳಲುತ್ತಿದ್ದು, ಈ ಸರಣಿಯಲ್ಲಿ ಆಡುವುದು ಅನುಮಾನವೆನಿಸಿದೆ. ಆದರೆ, ಅವರು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದರೆ, ಸರಣಿಯಲ್ಲಿ ಆಡಬಹುದು ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಬುಧವಾರ (ಅಕ್ಟೋಬರ್ 26) ಪ್ರಕಟಿಸಿದೆ.

England name unchanged 16-man Test squad for India tour

ಭಾರತ ವಿರುದ್ಧದ ಟೆಸ್ಟ್ ಸರಣಿ ಡಿಸೆಂಬರ್ 20ಕ್ಕೆ ಚೆನ್ನೈನಲ್ಲಿ ಕೊನೆಗೊಳ್ಳಲಿದೆ. ನಂತರ ಇಂಗ್ಲೆಂಡ್ ತಂಡ ಸ್ವದೇಶಕ್ಕೆ ತೆರಳಿ ಕ್ರಿಸ್ ಮಸೆ ರಜೆ ಅನುಭವಿಸಲಿದೆ. ನಂತರ ಜನವರಿಯಲ್ಲಿ ಭಾರತ ವಿರುದ್ಧ ಮೂರು ಏಕದಿನ ಪಂದ್ಯ ಹಾಗೂ ಟ್ವೆಂಟಿ 20 ಪಂದ್ಯಗಳನ್ನಾಡಲಿದೆ.

ಏಕದಿನ ಸರಣಿ ಪುಣೆಯಲ್ಲಿ ಜನವರಿ 15, 2017ರಂದು ಹಾಗೂ ಟಿ20ಐ ಸರಣಿ ಕಾನ್ಪುರದಲ್ಲಿ ಜನವರಿ 26ರಂದು ಆರಂಭವಾಗಲಿದೆ.

ಇಂಗ್ಲೆಂಡ್ ಟೆಸ್ಟ್ ತಂಡ ಇಂತಿದೆ:
1. ಅಲಿಸ್ಟರ್ ಕುಕ್ (ನಾಯಕ, ಎಸೆಕ್ಸ್)
2. ಮೋಯಿನ್ ಅಲಿ (ವೊರ್ಸೆಸ್ಟರ್ ಶೈರ್)
3. ಜಾಫರ್ ಅನ್ಸಾರಿ (ವೊರ್ಸೆಸ್ಟರ್ ಶೈರ್)
4. ಜಾನಿ ಬೇರ್ಸ್ಟೋ (ಯಾರ್ಕ್ ಶೈರ್)
5. ಜೇಕ್ ಬಾಲ್ (ನ್ಯಾಟಿಂಗ್ ಹ್ಯಾಮ್ ಶೈರ್)
6. ಗ್ಯಾರಿ ಬ್ಯಾಲನ್ಸ್ (ಯಾರ್ಕ್ ಶೈರ್)
7. ಗರೇತ್ ಬ್ಯಾಟಿ (ಸರೆ)
8. ಸ್ಟುವರ್ಟ್ ಬ್ರಾಡ್ (ನ್ಯಾಟಿಂಗ್ ಹ್ಯಾಮ್ ಶೈರ್)
9. ಜೋಸ್ ಬಟ್ಲರ್ (ಲಂಕಾಶೈರ್)
10. ಬೆನ್ ಡಕೆಟ್ (ನಾರ್ಥಂಪ್ಟನ್ ಶೈರ್)
11. ಸ್ಟೀವನ್ ಫಿನ್ (ಮಿಡ್ಲ್ ಸೆಕ್ಸ್)
12. ಹಸೀಬ್ ಹಮೀದ್ (ಲಂಕಾಶೈರ್)
13. ಆದೀಲ್ ರಶೀದ್ (ಯಾರ್ಕ್ ಶೈರ್)
14. ಜೋ ರೂಟ್ (ಯಾರ್ಕ್ ಶೈರ್)
15. ಬೆನ್ ಸ್ಟೋಕ್ಸ್ (ಡರ್ ಹ್ಯಾಮ್)
16. ಕ್ರಿಸ್ ವೋಕ್ಸ್ (ವಾರ್ವಿಕ್ ಶೈರ್)
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
England today (October 26) announced an unchanged 16-man Test squad for India tour with paceman James Anderson not included as he recovers from a shoulder injury.
Please Wait while comments are loading...