ಇಂಗ್ಲೆಂಡ್ ಕ್ರಿಕೆಟರ್ ಬೆನ್ ಸ್ಟೋಕ್ಸ್ ಗೆ ಜೈಲು ಭೀತಿ, ಏಕೆ?

Posted By:
Subscribe to Oneindia Kannada

ಲಂಡನ್, ಜೂನ್ 16: ಇಂಗ್ಲೆಂಡ್ ಕ್ರಿಕೆಟರ್ ಬೆನ್ ಸ್ಟೋಕ್ಸ್ ಅವರು ಜೈಲು ಭೀತಿ ಎದುರಿಸುತ್ತಿದ್ದಾರೆ. ಇನ್ನೊಂದು ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ನೇರವಾಗಿ ಜೈಲು ಸೇರಬೇಕಾಗುತ್ತದೆ. ಮುಂದಿನ ಆರು ತಿಂಗಳಿನಲ್ಲಿ ಸ್ಟೋಕ್ಸ್ ಮೇಲೆ ಕಣ್ಣಿಡುವಂತೆ ನಾಥಲರ್ಟನ್ ಮ್ಯಾಜಿಸ್ಟೇಟ್ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶಿಸಿದೆ.

ಇಂಗ್ಲೆಂಡಿನ ಪ್ರಮುಖ ಆಲ್ ರೌಂಡರ್ ಸ್ಟೋಕ್ಸ್ ಅವರು ಈಗಾಗಲೇ ನಾಲ್ಕು ಬಾರಿ ಅತಿಯಾದ ವೇಗದಲ್ಲಿ ವಾಹನ ಚಲಾಯಿಸಿ ದಂಡ ತೆತ್ತಿದ್ದಾರೆ.50 ಮೈಲಿ ಪ್ರತಿ ಗಂಟೆ ವಲಯದಲ್ಲಿ 75 ಮೈಲಿ ಪ್ರತಿ ಗಂಟೆ ವೇಗದಲ್ಲಿ ಸಂಚರಿಸಿ ಸಿಕ್ಕಿಬಿದ್ದಿದ್ದರು ಎಂದು ದಿ ಸನ್ ವರದಿ ಮಾಡಿದೆ.[10 ಸಾವಿರ ಕ್ರೀಡಾಳುಗಳಿಗೆ 4 ಲಕ್ಷ ಕಾಂಡೋಮ್ಸ್]

Know why England cricketer Ben Stokes might get jailed

ಕ್ರಿಕೆಟ್ ಅಭಿಮಾನಿಗಳಿಗೆ ಸ್ಟೋಕ್ಸ್ ಎಂದರೆ ಅವರ ಬಿರುಸಿನ ಸಿಕ್ಸರ್ ಗಳು ನೆನಪಾಗುತ್ತದೆ, ಇತ್ತೀಚೆಗೆ ಭಾರತದಲ್ಲಿ ನಡೆದ ವಿಶ್ವಟಿ20 ಫೈನಲ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸತತ ನಾಲ್ಕು ಸಿಕ್ಸರ್ ಹೊಡೆಸಿಕೊಂಡು ಸುದ್ದಿಯಾಗಿದ್ದರು. ಇದರಿಂದ ಬ್ರಥ್ ವೈಟ್ ವಿಶ್ವಕಪ್ ಹೀರೋ ಆದರು..[10 ಸಾವಿರ ಕ್ರೀಡಾಳುಗಳಿಗೆ 4 ಲಕ್ಷ ಕಾಂಡೋಮ್ಸ್]

ಸದ್ಯಕ್ಕೆ ಇಂಗ್ಲೆಂಡ್ ತಂಡದಿಂದ ವಿಶ್ರಾಂತಿ ಪಡೆದಿರುವ ಸ್ಟೋಕ್ಸ್ ಅವರು, ಶ್ರೀಲಂಕಾ ವಿರುದ್ಧದ ಮುಂಬರುವ ಏಕದಿನ ಕ್ರಿಕೆಟ್ ಸರಣಿಗಾಗಿ ತಯಾರಿ ನಡೆಸಿದ್ದಾರೆ.[ಲಂಡನ್ನಿನಲ್ಲಿ ಕ್ರಿಕೆಟರ್ ಗೆ ಭೂತ ಪ್ರೇತ ಕಾಟ!]

ಕಳೆದ ವರ್ಷ ಆಷಸ್ ಟೆಸ್ಟ್ ಸರಣಿಯಲ್ಲಿ ಮೂರು ವಿಕೆಟ್ ಪಡೆದ ನಂತರ ಆಗಸ್ಟ್ 26ರಂದು 61 ಮೈಲಿ ಪ್ರತಿಗಂಟೆ ವೇಗದಲ್ಲಿ ಕಾರು ಚಲಾಯಿಸಿದ್ದನ್ನು ಸ್ಟೋಕ್ಸ್ ಒಪ್ಪಿಕೊಂಡಿದ್ದಾರೆ. ಒಂದೆರಡು ಕೇಸ್ ಗಳಲ್ಲಿ ಸ್ಟೋಕ್ಸ್ ಅವರ ಕಾರು ಚಾಲಕ ಸಿಕ್ಕಿ ಬಿದ್ದಿದ್ದಾರೆ.(ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
England cricketer Ben Stokes might get jailed if he is caught driving again in the next six months, the Northallerton Magistrates Court has warned.
Please Wait while comments are loading...