ನೋಟು ಬ್ಯಾನ್ : ದಿನಭತ್ಯೆಗಾಗಿ ಕಾದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 21: ಭಾರತಕ್ಕೆ ಬಂದಿಳಿದು 19 ದಿನಗಳು ಕಳೆದರೂ ಇಂಗ್ಲೆಂಡ್‌ ಕ್ರಿಕೆಟ್‌ ತಂಡಕ್ಕೆ ಇನ್ನೂ ದಿನಭತ್ಯೆ ಸಿಕ್ಕಿಲ್ಲವಂತೆ.ನ್ಯಾ. ಲೋಧಾ ಸಮಿತಿ ನಿಯಮಗಳನ್ನು ಜಾರಿಗೊಳಿಸಲು ಆಗದೆ ಹೆಣಗಾಡುತ್ತಿರುವ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗ ನೋಟುಗಳ ಬ್ಯಾನ್ ಬೇನೆ ಶುರುವಾಗಿದೆ.

ನವೆಂಬರ್ 8ರಿಂದ 1000, 500 ನೋಟುಗಳ ಬಳಕೆ ರದ್ದತಿಗಿರುವ ಕಾರಣ ಇಂಗ್ಲೆಂಡ್ ತಂಡಕ್ಕೆ ಭತ್ಯೆ ನೀಡಲು ಅಗುತ್ತಿಲ್ಲ ಎಂದು ಕಾರಣ ತಿಳಿದುಬಂದಿದೆ. ಆದರೆ, ಮೂಲಗಳ ಪ್ರಕಾರ ಇಂಗ್ಲೆಂಡ್‌ ಕ್ರಿಕೆಟ್‌ ತಂಡಕ್ಕೆ ದಿನಭತ್ಯೆ ನೀಡಲು ಬೇರೆಯದ್ದೇ ಕಾರಣವಿದೆಯಂತೆ.

England cricket team still await daily allowances from BCCI

ನ್ಯಾ, ಲೋಧಾ ಶಿಫಾರಸ್ಸುಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವ ತನಕ ಬಿಸಿಸಿಐನ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಅದರಂತೆ ಬ್ಯಾಂಕುಗಳಿಂದ ಹಣ ಬಿಡುಗಡೆಯಾಗಿಲ್ಲ.

ಇಂಗ್ಲೆಂಡ್‌ ವಿರುದ್ಧದ ಮೊದಲ ಮೂರು ಟೆಸ್ಟ್‌ ಪಂದ್ಯಗಳಿಗಾಗಿ ಪ್ರತಿ ಪಂದ್ಯಕ್ಕೆ 58.6 ಲಕ್ಷ ರೂ.ನಂತೆ ಬಿಸಿಸಿಐಗೆ ನೀಡುವಂತೆ ಬ್ಯಾಂಕ್‌ಗಳಿಗೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆದರೆ ಈ ಹಣದಲ್ಲಿ ದಿನಭತ್ಯೆ ಸೇರಿಸಿಲ್ಲದ ಕಾರಣ ಇಂಗ್ಲೆಂಡ್ ತಂಡಕ್ಕೆ ಭತ್ಯೆ ಸಿಕ್ಕಿಲ್ಲ.

ಕಾರ್ಡ್ ಬಳಕೆ: ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಮುಖ್ಯವಾಗಿ ಕ್ರೆಡಿಟ್‌ ಕಾರ್ಡ್‌ ಮತ್ತು ಕೈಯಲ್ಲಿರುವ ಭಾರತೀಯ ನೋಟುಗಳ ಮೂಲಕವೇ ವ್ಯವಹರಿಸುತ್ತಿದ್ದಾರೆ.ನಿಯಮದ ಪ್ರಕಾರ ಪ್ರತಿ ಇಂಗ್ಲೆಂಡ್‌ ಸದಸ್ಯನಿಗೂ ದಿನವೊಂದಕ್ಕೆ 50 ಪೌಂಡ್‌ (4200 ರೂ) ಬಿಸಿಸಿಐ ನೀಡಬೇಕು. ಇನ್ನು ಭಾರತದಲ್ಲಿ 500 ಮತ್ತು 1000 ನೋಟುಗಳ ರದ್ದಾಗಿರುವ ಬಿಸಿ ಇಂಗ್ಲೆಂಡ್‌ ತಂಡಕ್ಕೂ ತಟ್ಟಿದೆ ಎಂದು ಹೇಳಲಾಗುತ್ತಿದೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
It's been 18 days that the England cricket team is in India and the squad members are yet to receive daily allowances from the BCCI since theMemorandum of Understanding (MoU), which covers this payment, is yet to be signed by the two Boards.
Please Wait while comments are loading...