ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದ ಕೊಹ್ಲಿ, ಸೆಹ್ವಾಗ್

Written By: Ramesh
Subscribe to Oneindia Kannada

ಕಾನ್ಪುರ್, ಸೆ. 20 : ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮ ಯೋಧರಿಗೆ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಸಂತಾಪ ಸೂಚಿಸಿ, ಗೌರವ ಸಲ್ಲಿಸಿದ್ದಾರೆ.

ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುವ 500ನೇಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಸಿದ್ಧತೆಯಲ್ಲಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉರಿ ದಾಳಿಯ ಫೋಟೋ ಪೋಸ್ಟ್ ಮಾಡಿದ್ದಾರೆ. [ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್ ಹೇಗಿದೆ ನೋಡಿ!]

Virat Kohli

ಈ ಫೋಟೋ ನನ್ನನ್ನು ಭಾವುಕನನ್ನಾಗಿ ಮಾಡಿದೆ. ಧೈರ್ಯಶಾಲಿ ಯೋಧರ ತ್ಯಾಗವನ್ನು ಹೇಗೆ ಬಣ್ಣಿಸಬೇಕೆಂದು ತಿಳಿಯುತ್ತಿಲ್ಲ. 'ಜೈ ಹಿಂದ್‌' ಎಂದು ಟ್ವೀಟ್ ಮಾಡಿ ಗೌರವ ಸಲ್ಲಿಸಿದ್ದಾರೆ.

ಇನ್ನು ವೀರೇಂದ್ರ ಸೆಹ್ವಾಗ್ ಟ್ವೀಟ್ ನಲ್ಲಿ ಊರಿ ದಾಳಿಯಲ್ಲಿ ಹುತಾತ್ಮ ಯೋಧರಿಗೆ ನಮನ. ಅವರಿಗೂ ಕುಟುಂಬಗಳಿವೆ, ತಾಯ್ನಾಡಿಗೆ ಸೇವೆ ಸಲ್ಲಿಸಿದ ಯೋಧರ ಈ ಫೋಟೋ ನೋಡಲು ನೋವಾಗುತ್ತದೆ. ಎಂದು ಟ್ವಿಟ್ಟರ್ ನಲ್ಲಿ ಕಂಬನಿ ಮಿಡಿದಿದ್ದಾರೆ.

ಜಮ್ಮು ಕಾಶ್ಮೀರದ ಊರಿ ಪ್ರದೇಶದ ಭಾರತೀಯ ಸೇನಾ ಶಿಬಿರದ ಮೇಲೆ ಭಾನುವಾರ ಬೆಳಗ್ಗೆ 5.30ರ ಸುಮಾರಿಗೆ ಉಗ್ರರು ದಾಳಿ ನಡೆಸಿದ್ದರು. ಘಟನೆಯಲ್ಲಿ ಒಟ್ಟು 17 ಯೋಧರು ಹುತಾತ್ಮರಾಗಿದ್ದರು.

ಉಗ್ರರ ಈ ಅಮಾನುಷ ಕೃತ್ಯಕ್ಕೆ ಭಾರತೀಯ ಅಥ್ಲೆಟಿಗರು, ಬಾಲಿವುಡ್ ಸ್ಟಾರ್ಸ್ ಸೇರಿದಂತೆ ಹಲವರು ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In the wake of ghastly terrorist strike in Uri, in which 17 soldiers were martyred and several others were injured, India's Test skipper Virat Kohli paid an emotional tribute to the brave soldiers who made the ultimate sacrifice for the nation.
Please Wait while comments are loading...