ಬ್ರಾವೋರಿಂದ ಸಲ್ಮಾನ್ ಖಾನ್ ಟವೆಲ್ ಡ್ಯಾನ್ಸ್ ಸ್ಟೆಪ್ಸ್

Posted By:
Subscribe to Oneindia Kannada

ಮುಂಬೈ, ಅಕ್ಟೋಬರ್ 13: ವೆಸ್ಟ್ ಇಂಡೀಸ್ ನ ಅತ್ಯಂತ ಜನಪ್ರಿಯ ಕ್ರಿಕೆಟರ್ ಡಿಜೆ ಬ್ರಾವೋ ಅವರು ಮುಂಬೈನಲ್ಲಿ ಡ್ಯಾನ್ಸ್ ರಿಯಾಲಿಟಿ ಶೋವೊಂದರಲ್ಲಿ ಕುಣಿದಿದ್ದಾರೆ.

ಆಲ್ ರೌಂಡರ್ ಬ್ರಾವೋ ಅವರು ಗಾಯಕ, ಡ್ಯಾನ್ಸರ್ ಆಗಿ ಕೂಡಾ ಹಿಂದಿ ಚಿತ್ರರಂಗಕ್ಕೆ ಹತ್ತಿರವಾಗಿದ್ದಾರೆ. ಈ ಶೋ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ಬ್ರಾವೋ ಅವರು ಸಲ್ಮಾನ್ ಖಾನ್ ಡ್ಯಾನ್ಸ್ ನಕಲು ಮಾಡಿ ಕುಣಿದಾಡಿದ್ದಾರೆ.[ಶರ್ಟ್ ಕಳಚಿ ಡ್ಯಾನ್ಸ್ ಮಾಡಿದ ಗೇಲ್, ಬ್ರಾವೋ]

ಸೂಪರ್ ಸ್ಟಾರ್ ಸಲ್ಮಾನ್ ಖಾನ ಅವರ ಟವೆಲ್ ಡ್ಯಾನ್ಸ್ ಅನುಕರಿಸಿದ ಬ್ರಾವೋ ಕುಣಿತ ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. [ಬ್ರಾವೊ ಈಗ ಬಾಲಿವುಡ್ಡಿನ ಹೊಸ ಸಿಂಗರ್!]

Dwayne Bravo does Salman Khan’s towel dance

ಸಲ್ಮಾನ್ ಖಾನ್ ಅವರ 'ಮುಜ್ಸೆ ಶಾದಿ ಕರೋಗಿ' ಚಿತ್ರದ ಟೈಟಲ್ ಹಾಡಿಗೆ ಬ್ರಾವೋ ಹೆಜ್ಜೆ ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬ್ರಾವೊ, ಖಾನ್ ತ್ರಯರು ಬಾಲಿವುಡ್ಡಿನ ಬಿಗ್ ಸ್ಟಾರ್​ಗಳು. ಇವರಲ್ಲಿ ನಾನು ಸಲ್ಮಾನ್ ಖಾನ್ ಅವರ ದೊಡ್ಡ ಅಭಿಮಾನಿ, ಅವರ ಸಕತ್ ಕೂಲ್ ಮನುಷ್ಯ ಹಾಗೂ ಅವರ ಡ್ಯಾನ್ಸ್ ಗಳನ್ನು ಅನುಕರಿಸಲು ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ.[ಬ್ರಾವೊ ಡ್ಯಾನ್ಸ್ ಗೆ ಫಿದಾ ಆಗಿದ್ದು ಒಬ್ರ, ಇಬ್ರ!]

ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ, ಡ್ಯಾನ್ಸ್ ಅಂಗಳಕ್ಕೆ ಇಳಿದರೆ ತಾನು ಆಲ್ ರೌಂಡರ್ ಎಂಬುದನ್ನು ಬ್ರಾವೋ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಡಿಜೆ ಬ್ರಾವೊ ಈಗಾಗಲೇ ಚಾಂಪಿಯನ್ ಡ್ಯಾನ್ಸ್ ಹಾಗೂ ಹಾಡಿನ ಮೂಲಕ ಭಾರತದಲ್ಲಿ ಜನಪ್ರಿಯತೆ ಗಳಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
West Indies cricketer Dwayne Bravo shot for a celebrity dance reality show. replicated the actor's towel dance from 'Mujhse Shaadi Karogi'. Dwayne says, "The three Khans are the biggest stars of Bollywood and I am a fan of all of them.
Please Wait while comments are loading...