ಸ್ಕೋರ್ ಕಾಂಡೋಮ್ ಜಾಹಿರಾತಿನಲ್ಲಿ ಬ್ರಾವೋ, ಗೇಲ್ ಸಕತ್ ಸ್ಟೆಪ್!

Written By: Ramesh
Subscribe to Oneindia Kannada

ಬೆಂಗಳೂರು, ಅಕ್ಟೋಬರ್. 25 : 2016ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಕತ್ ಸದ್ದು ಮಾಡಿದ್ದ ಚಾಂಪಿಯನ್ ಹಾಡನ್ನು ಕಾಂಡೋಮ್ ವೊಂದರ ಜಾಹೀರಾತಿಗಾಗಿ ರಿಮೇಕ್ ಮಾಡಲಾಗಿದೆ.

ಕೆರಿಬಿಯನ್ ಕ್ರಿಕೆಟರ್ ಡ್ವೇನ್ ಬ್ರಾವೋ ಹಾಗೂ ಕ್ರಿಸ್ ಗೇಲ್ ಸ್ಕೋರ್ ಕಾಂಡೋಮ್ ಗಾಗಿ ಚಾಂಪಿಯನ್ ಸಾಂಗ್ ನ್ನು ರಿಮೇಕ್ ಮಾಡಿದ್ದಾರೆ. ಚಾಂಪಿಯನ್ ಸಾಂಗ್ ಮೂಲಕ ಹವಾ ಎಬ್ಬಿಸಿದ್ದ ಡ್ವೇನ್ ಬ್ರಾವೋ ಹಾಗೂ ಗೇಲ್ ಇದೀಗ ಸ್ಕೋರ್ ಕಾಂಡೋಮ್ ಜಾಹಿರಾತು ಹಾಡಿನಲ್ಲಿ ಸಕತ್ ಸ್ಟೆಪ್ ಹಾಕಿದ್ದಾರೆ. ಅಷ್ಟೇ ಅಲ್ಲದೆ ಸ್ಕೋರ್ ಕಾಂಡೋಮ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

Dwayne Bravo, Chris Gayle promote SKORE condoms with Indian version of Champion song

2016 ರ ಟಿ-20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಡ್ವೇನ್ ಬ್ರಾವೋ ರಚಿಸಿದ್ದ ಚಾಂಪಿಯನ್ ಸಾಂಗ್ ಗೆ ನೃತ್ಯ ಮಾಡಿ ಸಾಕಷ್ಟು ಗಮನ ಸೆಳೆದಿದ್ದರು. ಅಲ್ಲದೆ ಈ ಚಾಂಪಿಯನ್ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು.

ಈಗ ಈ ಚಾಂಪಿಯನ್ ಸಾಂಗ್ ಕೋರ್ ಕಾಂಡೋಮ್ ಗಾಗಿ ರಿಮೇಕ್ ಮಾಡಿರುವ ಚಾಂಪಿಯನ್ ಹಾಡು ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಚಾಂಪಿಯನ್ ಆಗಿದ್ದು ಈ ವೇಳೆ ಬ್ರಾವೋ ಅವರ ಚಾಂಪಿಯನ್ ಸಾಂಗ್ ಭಾರೀ ಹಿಟ್ ಆಗಿತ್ತು. ಚಾಂಪಿಯನ್ ಸಾಂಗ್ ಎಫೆಕ್ಟ್ ನಿಂದ ತುಮ್ ಬಿನ್-2 ಚಿತ್ರಕ್ಕೆ ಬ್ರಾವೋ ಗಾಯಕರಾಗಿರುವುದು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
West Indies cricketers Chris Gayle and Dwayne Bravo will now seen as brand ambassadors of a condom ad. They have been roped in to promote Skore’s soon to be launched Champions condoms.
Please Wait while comments are loading...