ದುಲೀಪ್ ಟ್ರೋಫಿ: ಪೂಜಾರ ದ್ವಿಶತಕ, ಇಂಡಿಯಾ ಬ್ಲೂ ಬೃಹತ್ ಮೊತ್ತ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಗ್ರೇಟರ್ ನೊಯ್ಡಾ, ಸೆ.12 : ಚೇತೇಶ್ವರ ಪೂಜಾರಾ ಅವರ ಭರ್ಜರಿ ದ್ವಿಶತಕ ನೆರವಿನಿಂದ ಇಂಡಿಯಾ ಬ್ಲೂ ತಂಡ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಪೇರಿಸಿದೆ.

ಇಂಡಿಯಾ ಬ್ಲೂ ತಂಡ 168.2 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 693 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ನಂತರ ಬ್ಯಾಟಿಂಗ್ ಆರಂಭಿಸಿದ ಇಂಡಿಯಾ ರೆಡ್ ತಂಡ ದಿನದಾಟದ ಅಂತ್ಯಕ್ಕೆ 9 ಓವರ್‌ಗಳಲ್ಲಿ 16 ರನ್ ಗಳಿಸಿ 2 ವಿಕೆಟ್‌ ಕಳೆದುಕೊಂಡು ಒತ್ತಡದಲ್ಲಿದೆ.

ಪಂದ್ಯದ ಮೊದಲ ದಿನ ಶನಿವಾರ ಶತಕ ಬಾರಿಸಿ ಕ್ರೀಸ್ ನಲ್ಲಿದ್ದ ಚೇತೇಶ್ವರ ಎರಡನೇ ದಿನವೂ ಭರ್ಜರಿಯಾಗಿ ಬ್ಯಾಟ್ ಬೀಸಿ 363ಎ ಸೆತಗಳಲ್ಲಿ 28 ಬೌಂಡರಿ ಒಳಗೊಂಡಂತೆ 256 ದ್ವಿಶತಕ ಬಾರಿಸಿ ಅಜೇಯರಾಗಿ ಉಳಿದರು. ಈ ಮೂಲಕ ಪಿಂಕ್ ಬಾಲ್ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು.

Duleep Trophy: Pujara, Jackson put India Blue on top in final against India Red

ಪೂಜಾರ ಮತ್ತು ಶೆಲ್ಡನ್ ಜಾಕ್ಸನ್ ಅವರು ಐದನೇ ವಿಕೆಟ್ ಜೊತೆಯಾಟದಲ್ಲಿ ಬರೋಬ್ಬರಿ 243 ರನ್‌ಗಳನ್ನು ಸೇರಿಸಿ ತಂಡದ 600ರ ಗಡಿ ದಾಟಿಸಿದರು. ಜಾಕ್ಸನ್‌ 204 ಎಸೆತಗಳನ್ನು ಎದುರಿಸಿ 15ಬೌಂಡರಿ, 2ಸಿಕ್ಸರ್ ನೆರವಿನೊಂದಿಗೆ ಭರ್ಜರಿ 134 ಅಬ್ಬರದ ಶತಕದ ಸಂಭ್ರಮದಲ್ಲಿ ಆಡುವಾಗ ಅಮಿತ್ ಮಿಶ್ರಾ ಜಾಕ್ಸನ್ ಅವರನ್ನು ಬಲಿ ಪಡೆದು ಪೂಜಾರ ಮತ್ತು ಶೆಲ್ಡನ್ ಜಾಕ್ಸನ್ ಜೊತೆಯಾಟವನ್ನು ಮುರಿದರು.

ಪೂಜಾರಾ ಅವರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ದಿನೇಶ್ ಕಾರ್ತಿಕ್ (55 ರನ್) ಜೊತೆಗೆ 120 ರನ್‌ಗಳನ್ನು ಪೇರಿಸಿ ತಂಡಕ್ಕೆ ನೆರವಾದರು.

ಸ್ಕೋರ್ ವಿವರ: ಇಂಡಿಯಾ ಬ್ಲೂ, ಮೊದಲ ಇನಿಂಗ್ಸ್: 6 ಕ್ಕೆ 693 ಡಿಕ್ಲೆರ್ಡ್ : ಚೇತೇಶ್ವರ ಪೂಜಾರ ಔಟಾಗದೆ 256, ಶೆಲ್ಡನ್ ಜಾಕ್ಸನ್ 134, ಅಮಿತ್ ಮಿಶ್ರಾ 171ಕ್ಕೆ2.

ಇಂಡಿಯಾ ರೆಡ್: 9 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 16 ರನ್ : ಅಭಿನವ್ ಮುಕುಂದ್ 2, ಶಿಖರ್ ಧವನ್ ಬ್ಯಾಟಿಂಗ್ 14, ಪಂಕಜ್ ಸಿಂಗ್ 12ಕ್ಕೆ2. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Saurashtra batsman Cheteshwar Pujara remained unbeaten on 256 as India Blue declared their first innings for a monumental 693/6 against India Red on the second day on Sunday (Sep 11) of the final of the Duleep Trophy cricket tournament.
Please Wait while comments are loading...