ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದುಲೀಪ್ ಟ್ರೋಫಿ ವೇಳಾ ಪಟ್ಟಿ, ಇಂಡಿಯಾ ಬ್ಲೂಗೆ ರೈನಾ ನಾಯಕ

ನವದೆಹಲಿ, ಆಗಸ್ಟ್ 31 : ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ವೇಳಾ ಪಟ್ಟಿ ಹಾಗೂ ತಂಡಗಳನ್ನು ಪ್ರಕಟಿಸಲಾಗಿದೆ.

ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ನೇತೃತ್ವದಲ್ಲಿ ದಲ್ಲಿ ದುಲೀಪ್ ಟ್ರೋಫಿ ವೇಳಾಪಟ್ಟಿ ಹಾಗೂ ತಂಡವನ್ನು ಅಂತಿಮಗೊಳಿಸಲಾಗಿದ್ದು, ಸೆಪ್ಟೆಂಬರ್‌ 7ರಿಂದ 29ರವರೆಗೆ ದುಲೀಪ್ ಟ್ರೋಫಿ ಟೂರ್ನಿಯ ಪಂದ್ಯಗಳು ಕಾನ್ಪುರ ಹಾಗೂ ಲಖನೌದಲ್ಲಿ ನಡೆಯಲಿವೆ.

ಐದು ದಿನಗಳ ಫೈನಲ್ ಪಂದ್ಯ ಸೆಪ್ಟೆಂಬರ್‌ 25ರಿಂದ 29ರವರೆಗೆ ಉತ್ತರಪ್ರದೇಶದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಮೂರು ತಂಡಗಳು ಒಟ್ಟು 45 ಕ್ರಿಕೆಟಿಗರು ಆಡಲಿದ್ದಾರೆ.

ಇಂಡಿಯಾ ಬ್ಲೂ ತಂಡಕ್ಕೆ ಭಾರತ ತಂಡದ ಕ್ರಿಕೆಟಿಗ ಸುರೇಶ್ ರೈನಾ ಅವರನ್ನು ನೇಮಕಮಾಡಲಾಗಿದೆ. ಪಾರ್ಥಿವ್ ಪಟೇಲ್ ಇಂಡಿಯಾ ಗ್ರೀನ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಇಂಡಿಯಾ ರೆಡ್ ತಂಡದ ಸಾರಥ್ಯವನ್ನು ಅಭಿನವ್ ಮುಕುಂದ್ ವಹಿಸಲಿದ್ದಾರೆ. ಇನ್ನು ಯಾವ ತಂಡದಲ್ಲಿ ಯಾರ್ಯಾರಿದ್ದಾರೆ ಮುಂದೆ ತಿಳಿಯಿರಿ.

ಇಂಡಿಯಾ ಬ್ಲೂ

ಇಂಡಿಯಾ ಬ್ಲೂ

ಸುರೇಶ್ ರೈನಾ (ನಾಯಕ), ಸುಮಿತ್ ಗೋಯಲ್, ಕೆ.ಎಸ್.ಭರತ್. ಎ.ಆರ್ ಈಶ್ವರನ್, ಮನೋಜ್ ತಿವಾರಿ, ದೀಪಕ್ ಹೂಡಾ, ವಿಜಯ್ ಶಂಕರ್, ಇಶಾನ್ ಕಿಶನ್, ಜಯಂತ್ ಯಾದವ್‌, ಭಾರ್ಗವ್ ಭಟ್, ಕೆ.ಎಮ್ ಗಾಂಧಿ, ಇಶಾಂತ್ ಶರ್ಮಾ, ಅಂಕಿತ್ ರಜಪೂತ್, ಎಸ್.ಕಾಮತ್‌, ಜಯದೇವ್ ಉನದ್ಕತ್.

ಇಂಡಿಯಾ ರೆಡ್‌

ಇಂಡಿಯಾ ರೆಡ್‌

ಅಭಿನವ್ ಮುಕುಂದ್ (ನಾಯಕ), ಪ್ರಿಯಾಂಕ್ ಪಾಂಚಲ್, ಸುದೀಪ್ ಚಟರ್ಜಿ, ಇಶಾಂಕ್ ಜಗ್ಗಿ, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್‌, ರಿಷಭ್ ಪಂತ್‌, ಬಾಬಾ ಇಂದ್ರಜಿತ್‌, ಕೆ.ಗೌತಮ್, ಕರ್ಣ ಶರ್ಮಾ, ಬೆಸಿಲ್ ಥಂಪಿ, ಧವಳ್ ಕುಲಕರ್ಣಿ, ಅಶೋಕ್ ದಿಂಡಾ, ರಾಹುಲ್ ಸಿಂಗ್‌, ಸಿ.ವಿ ಮಿಲಿಂದ್.

ಇಂಡಿಯಾ ಗ್ರೀನ್‌

ಇಂಡಿಯಾ ಗ್ರೀನ್‌

ಮುರಳಿ ವಿಜಯ್‌, ಆರ್. ಸಮರ್ಥ್, ಪಿ. ಚೋಪ್ರಾ, ಶ್ರೇಯಸ್ ಅಯ್ಯರ್, ಕರುಣ್ ನಾಯರ್, ಅಂಕಿತ್ ಭಾವ್ನೆ, ಪಾರ್ಥಿವ್ ಪಟೇಲ್ (ನಾಯಕ), ಶಹಬಾಜ್ ನದೀಮ್, ಪರ್ವೇಜ್ ರಸೂಲ್, ನವೀಪ್ ಸೈನಿ, ಮೊಹಮ್ಮದ್ ಸಿರಾಜ್, ಸಿದ್ದಾರ್ಥ್ ಕೌಲ್, ಮಯಂಕ್ ಡಾಗರ್, ನಿತಿನ್ ಸೈನಿ, ಅಂಕಿತ್ ಚೌಧರಿ.

ಪಂದ್ಯಗಳ ವೇಳಾ ಪಟ್ಟಿ

ಪಂದ್ಯಗಳ ವೇಳಾ ಪಟ್ಟಿ

*ಸೆಪ್ಟೆಂಬರ್ 7ರಿಂದ 10ರ ವರೆಗೆ ಇಂಡಿಯಾ ರೆಡ್ ಮತ್ತು ಇಂಡಿಯಾ ಗ್ರೀನ್ ನಡುವೆ ಲಖನೌನಲ್ಲಿ ಸೆಣಸಾಟ.
* ಸೆಪ್ಟೆಂಬರ್ 13ರಿಂದ 16ರವರೆಗೆ ಇಂಡಿಯಾ ರೆಡ್ ಮತ್ತು ಇಂಡಿಯಾ ಬ್ಲೂ ಕಾನ್ಪರದಲ್ಲಿ.
* ಸೆಪ್ಟೆಂಬರ್ 19ರಿಂದ 22ರವರೆಗೆ ಇಂಡಿಯಾ ಬ್ಲೂ ಮತ್ತು ಇಂಡಿಯಾ ಗ್ರೀನ್ ಕಾನ್ಪರದಲ್ಲಿ ನಡೆಯಲಿದೆ.
* ಸೆಪ್ಟೆಂಬರ್ 25ರಿಂದ 29ರವರೆಗೆ ಪೈನಲ್ ಪಂದ್ಯ ಲಖನೌನಲ್ಲಿ ನಡೆಯಲಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X