ದುಲೀಪ್ ಕ್ರಿಕೆಟ್ ಟ್ರೋಫಿ : ಫೈನಲ್ ಪಂದ್ಯಕ್ಕೆ ರೋಹಿತ್, ಜಡೇಜ

By: ಕ್ರೀಡಾ ಡೆಸ್ಕ್
Subscribe to Oneindia Kannada

ಗ್ರೇಟರ್ ನೊಯ್ಡಾ, ಸೆಪ್ಟೆಂಬರ್ 08 : ದುಲೀಪ್ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಆಡುತ್ತಿಲ್ಲ. ಆದರೆ ರೋಹಿತ್ ಶರ್ಮ, ರವೀಂದ್ರ ಜಡೇಜ ಮತ್ತು ಶಿಖರ್ ಧವನ್ ಅವರು ಆಡಲಿದ್ದಾರೆ.

ಫೈನಲ್‌ ಪಂದ್ಯ ಸೆ. 10ರಿಂದ 14ರ ವರೆಗೆ ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ನಡೆಯಲಿದೆ. ಇಂಡಿಯಾ ರೆಡ್‌ ಮತ್ತು ಇಂಡಿಯಾ ಬ್ಲೂ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಯುವರಾಜ್ ಸಿಂಗ್ ನೇತೃತ್ವದ ಇಂಡಿಯಾ ರೆಡ್ ಪರ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಕಣಕ್ಕಿಳಿಯಲಿದ್ದಾರೆ. ಇನ್ನು ಇಂಡಿಯಾ ಬ್ಲೂ ಪರ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜ ಆಡಲಿದ್ದಾರೆ.

ಈ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ದೃಢಪಡಿಸಿದೆ. ಇದೇ ಮೊದಲ ಬಾರಿಗೆ ಹೊನಲು ಬೆಳಕಿನ ಪಿಂಕ್ ಬಾಲ್ ದುಲೀಪ್ ಟ್ರೋಫಿ ಕ್ರಿಕೆಟ್‌ ಟೂರ್ನಿಯನ್ನು ಬಿಸಿಸಿಐ ಆಯೋಜಿಸಿದೆ.

Duleep Trophy Final: No Virat Kohli but Rohit, Jadeja, Shikhar to play

ಫೈನಲ್ ಹಣಾಹಣಿಗೆ ತಂಡಗಳು ಇಂತಿವೆ.
ಇಂಡಿಯಾ ರೆಡ್ : ಯುವರಾಜ್ ಸಿಂಗ್ (ನಾಯಕ), ಅಭಿನವ್ ಮುಕುಂದಾ, ಶಿಖರ್ ಧವನ್, ಸುದೀಪ್ ಚಟರ್ಜಿ, ಗುರುಕಿರತ್ ಸಿಂಗ್, ಅಂಕುಶ್ ಬೈನ್ಸ್(ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಕುಲದೀಪ್ ಯಾದವ್, ಅಕ್ಷಯ್ ವಖಾರೆ, ಅಮಿತ್ ಮಿಶ್ರಾ, ನಾಥು ಸಿಂಗ್, ಈಶ್ವರ್ ಪಾಂಡೆ, ನಿತೀಶ್ ರಾಣಾ, ಪ್ರದೀಪ್ ಸಂಗ್ವಾನ್.

ಇಂಡಿಯಾ ಬ್ಲೂ : ಗೌತಮ್ ಗಂಭೀರ್ (ನಾಯಕ), ಮಯಾಂಕ್ ಅಗರವಾಲ್, ರೋಹಿತ್ ಶರ್ಮ, ಚೆತೇಶ್ವರ್ ಪೂಜಾರ, ಸಿದ್ದೇಶ್ ಲಡ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಪರ್ವಿಜ್ ರಸೂಲ್, ಸೂರ್ಯಕುಮಾರ್ ಯಾದವ್, ಕರಣ್ ಶರ್ಮ, ರವೀಂದ್ರ ಜಡೇಜ, ಮೋಹಿತ್ ಶರ್ಮ, ಪಂಕಜ್ ಸಿಂಗ್, ಅಭಿಮನ್ಯು ಮಿಥುನ್, ಜಾಕ್ಸನ್, ಹನುಮನ್ ವಿಹಾರಿ.

ಪಂದ್ಯ ಆರಂಭ : ಸೆ. 10ರಿಂದ 14ರ ವರೆಗೆ ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India Test captain Virat Kohli will not feature in the day-night Duleep Trophy final but Rohit Sharma, Ravindra Jadeja and Shikhar Dhawan have been selected.
Please Wait while comments are loading...