ಹೌದೇ ನಿಜವೇ? ಇಡೀ ಕ್ರಿಕೆಟ್ ತಂಡ ಶೂನ್ಯಕ್ಕೆ ಸರ್ವಪತನ

Posted By:
Subscribe to Oneindia Kannada

ಲಂಡನ್, ಫೆ.12: ಅಚ್ಚರಿ, ಅನಿರೀಕ್ಷಿತ ಫಲಿತಾಂಶಗಳನ್ನು ಹೊರ ಹಾಕುವುದರಲ್ಲಿ ಕ್ಲಬ್ ಕ್ರಿಕೆಟ್ ಪಂದ್ಯ ಕೂಡಾ ಹೊರತಾಗಿಲ್ಲ. ಇಂಗ್ಲೆಂಡಿನ ಕ್ಲಬ್ ಕ್ರಿಕೆಟ್ ತಂಡವೊಂದು ಶೂನ್ಯಕ್ಕೆ ಸರ್ವಪತನ ಕಂಡು ಅಚ್ಚರಿ ಮೂಡಿಸಿದೆ. ಎದುರಾಳಿ ತಂಡ 120 ರನ್ ಗಳ ಅಂತರದ ಜಯ ದಾಖಲಿಸಿದೆ.

ಕ್ಯಾಂಟರ್ ಬರಿ ಕ್ರೈಸ್ಟ್ ಚರ್ಚ್ ಯೂನಿವರ್ಸಿಟಿ (ಸಿಸಿಸಿಯು) ತಂಡದ ಮಾರಕ ದಾಳಿಗೆ ಬಪ್ಚೈಡ್ ಕ್ರಿಕೆಟ್ ಕ್ಲಬ್ ತಂಡವನ್ನು ಸೊನ್ನೆಗೆ ಆಲೌಟ್ ಮಾಡಿ ದಾಖಲೆ ನಿರ್ಮಿಸಿದೆ. ಫೆಬ್ರವರಿ 7ರಂದು ನಡೆದ ಪಂದ್ಯದಲ್ಲಿ ಒಳಾಂಗಣ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಹೀಗೊಂದು ಫಲಿತಾಂಶ ಹೊರ ಬಂದಿದೆ.

Cricket team bowled out for 0

ಪ್ರತಿ ತಂಡದಲ್ಲೂ ತಲಾ 6 ಮಂದಿ ಆಡುವ ಪಂದ್ಯದಲ್ಲಿ ಸಿಸಿಸಿಯು ತಂಡದ ಫ್ರೇಜಸ್ ಹಾಗೂ ಫಿಲ್ ತಲಾ 3 ವಿಕೆಟ್ ಪಡೆದು ತಂಡಕ್ಕೆ 120 ರನ್ ಗಳ ಜಯ ತಂದಿತ್ತರು.


ಬಾಪ್ ಚೈಲ್ಡ್ ನ 6 ಬ್ಯಾಟ್ಸ್ ಮನ್ ಗಳು ಶೂನ್ಯ ಸುತ್ತಿದರೆ ಮೆಕ್ ವೈನಿ ಹ್ಯಾಟ್ರಿಕ್ ಗಳಿಸಿದರು.

ಕೆಂಟ್ ಇಂಡೋರ್ ಲೀಗ್ ಅಲ್ಲದೆ ವರ್ಷಪೂರ್ತಿ ಕ್ರಿಕೆಟ್ ಆಡುವ ತಂಡ ಶೂನ್ಯ ಸುತ್ತಿದ್ದು ಅಚ್ಚರಿ ಮೂಡಿಸಿದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಎರಡು ತಂಡಗಳು ಒಳಾಂಗಣ ಹಾಗೂ ಹೊರಾಂಗಣ ಕ್ರಿಕೆಟ್ ಅಡುತ್ತವೆ. ಕೆಂಟ್ ನ ಸೈಂಟ್ ಲಾರೆನ್ಸ್ ಮೈದಾನದಲ್ಲಿ ಪಂದ್ಯಗಳು ನಡೆಯುತ್ತವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cricket is a game of glorious uncertainties. And earlier this week, a team was bowled out for zero, yes you heard it right, with the opposition winning by a 120-run margin in England.
Please Wait while comments are loading...