ರೋಹಿತ್ ಶರ್ಮಾ, ಭಾರತಕ್ಕೆ ವರವಾದ ಡಿಆರ್ ಎಸ್

Subscribe to Oneindia Kannada

ಬ್ರಿಸ್ಬೇನ್, ಜನವರಿ, 15: ಡಿಆರ್ ಎಸ್ ಸಿಸ್ಟಮ್ ಈ ಸಾರಿ ಭಾರತದ ಪಾಲಿಗೆ ಲಾಭದಾಯಕವಾಗಿದೆ. ಶತಕ ಬಾರಿಸಿದ ರೋಹಿತ್ ಶರ್ಮಾ ಅವರಿಗೆ ಮತ್ತು ಭಾರತದ ನೆರವಿಗೆ ಡಿಆರ್ ಎಸ್ ಬಂದಿದೆ.

ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 89 ರನ್ ಗಳಿಸಿ ಆಡುತ್ತಿದ್ದಾಗ ರೋಹಿತ್ ಶರ್ಮಾ ಅವರ ಬ್ಯಾಟಿಗೆ ತಾಗಿದ ಚೆಂಡು ವಿಕೆಟ್ ಕೀಪರ್ ಮಥ್ಯೂ ವಡೆ ಅವರ ಕೈ ಸೇರಿತ್ತು. ಆದರೆ ತಮ್ಮ ನಾಲ್ಕನೇ ಪಂದ್ಯದಲ್ಲಿ ಅಂಪೈರಿಂಗ್ ಮಾಡುತ್ತಿರುವ ಫೀಲ್ಡ್ ಅಂಪೈರ್ ಆಸ್ಟ್ರೇಲಿಯಾದ ಮಿಕ್ ಮಾರ್ಟೆಲ್ ಯಾವ ಸೂಚನೆಯನ್ನು ನೀಡಲಿಲ್ಲ.[ರೋಹಿತ್ ಶರ್ಮಾ ಸೆಂಚುರಿ: ಆಸ್ಟ್ರೇಲಿಯಾಕ್ಕೆ 309 ರನ್ ಗುರಿ]

DRS back in focus as Rohit Sharma given not out on 89 in Brisbane ODI

ಬೌಲರ್ ಜೊಯೆಲ್ ಪ್ಯಾರಿಸ್ ಮತ್ತು ವಿಕೆಟ್ ಕೀಪರ್ ವಡೆ ಸೇರಿದಂತೆ ಆಸ್ಟ್ರೇಲಿಯಾದ ಆಟಗಾರರು ಸಂಭ್ರಮ ವ್ಯಕ್ತಪಡಿಸಿದರು. ಆದರೆ ಅಂಪೈರ್ ಯಾವ ಸೂಚನೆಯನ್ನು ನೀಡಲಿಲ್ಲ.

31 ಓವರ್ ಗಳಲ್ಲಿ 170 ರನ್ ಗಳಿಸಿದ್ದ ಭಾರತ ಎರಡು ವಿಕೆಟ್ ಕಳೆದುಕೊಂಡು ಆಟ ಮುಂದುವರಿಸಿತ್ತು. ಕ್ಯಾಮರಾದ ದೃಶ್ಯಗಳು ಶರ್ಮಾ ಅವರ ಬ್ಯಾಟ್ ಗೆ ಚೆಂಡು ತಾಗಿದ್ದನ್ನು ಸ್ಪಷ್ಟವಾಗಿ ತೋರಿಸಿದ್ದವು. ಮೊದಲ ಏಕದಿನ ಪಂದ್ಯದಲ್ಲಿ ಜಾರ್ಜ್ ಬೈಲಿ ಸಹ ಡಿಆರ್ ಎಸ್ ಇದ್ದರೆ ಔಟ್ ಆಗುತ್ತಿದ್ದರು. ಬೈಲಿ ಮತ್ತು ಸ್ಮಿತ್ ಜೋಡಿ ಪಂದ್ಯದ ಫಲಿತಾಂಶವನ್ನು ಆಸ್ಟ್ರೇಲಿಯಾ ಪರ ವಾಲಿಸಿತ್ತು.

ದ್ವಿತೀಯ ಪಂದ್ಯದಲ್ಲೂ ಶತಕ ಸಾಧನೆ ಮಾಡಿದ ರೋಹಿತ್ ಶರ್ಮಾ 124 ರನ್ ಗಳಿಸಿ ಔಟ್ ಆದರು. ಎರಡು ಪಂದ್ಯಗಳಲ್ಲೂ ಶತಕ ಬಾರಿಸಿ ಶರ್ಮಾ ಅನೇಕ ದಾಖಲೆಗಳನ್ನು ನಿರ್ಮಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Decision Review System (DRS) was back in focus, again, as India opener Rohit Sharma had a big let-off during the 2nd ODI against Australia here today.India have always opposed the use of DRS and hence there is no third umpire assistance for the one-field officials in the ongoing 5-match ODI series. And this time, it was the hosts who suffered.
Please Wait while comments are loading...