ವಿರಾಟ್ ಕೊಹ್ಲಿಯ ಫಸ್ಟ್ ಲವ್ ಅನುಷ್ಕಾ ಅಲ್ವಂತೆ!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಮೇ 25 : ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿಹಕ್ಕಿಗಳ ಹಾಗೆ ಓಡಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ನಡುವೆ ಅದೇನಾಗಿತ್ತೊ ಗೊತ್ತಿಲ್ಲ ಸಾಮಾಜಿಕ ಜಾಲತಾಣ ಇನ್ಸ್ ಟಗ್ರಾಂನಲ್ಲಿ ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿಕೊಳ್ಳುವ ಮೂಲಕ ಮುನಿಸಿಕೊಂಡಿದ್ದ ಈ ಜೋಡಿಹಕ್ಕಿ ಈಗ ಪ್ಯಾಚ್ ಅಪ್ ಕೂಡ ಆಗಿದೆ ಎನ್ನುವುದಕ್ಕೆ ಮೊನ್ನೆ ಬೆಂಗಳೂರಿನ ರೆಸ್ಟೋರೆಂಟ್ ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವುದೇ ಉದಾಹರಣೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಇದೀಗ ಲೇಟೆಸ್ಟ್ ಸಂಗತಿ ಏನಂದ್ರೆ ವಿರಾಟ್ ಕೊಹ್ಲಿ ಪ್ರೀತಿಸಿದ ಮೊದಲ ಹುಡುಗಿ ಅನುಷ್ಕಾ ಶರ್ಮಾ ಅಲ್ಲವಂತೆ. ಹೌದು, ಇದಕ್ಕೂ ಮುನ್ನವೇ ಕೊಹ್ಲಿಗೆ ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಮೇಲೆ ಕ್ರಶ್ ಆಗಿತ್ತಂತೆ. ಹೀಗೆಂದು ಸಂದರ್ಶನವೊಂದರಲ್ಲಿ ಸ್ವತಃ ವಿರಾಟ್ ಕೊಹ್ಲಿ ಈ ಸಂಗತಿಯನ್ನ ಬಿಚ್ಚಿಟ್ಟಿದ್ದಾರೆ. [ಎಬಿಡಿ ವಿಲಿಯರ್ಸ್ ನನಗಿಂತ ಶ್ರೇಷ್ಠ ಬ್ಯಾಟ್ಸ್ ಮನ್: ವಿರಾಟ್ ಕೊಹ್ಲಿ!]

Do you know who is Virat Kohli's first love? No, it's not Anushka Sharma!

ಸಧ್ಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ಫಾರ್ಮ್ ನಲ್ಲಿರುವ ವಿರಾಟ್ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದಾರೆ. ಈ ಸಂತೋಷದಿಂದ ಅನುಷ್ಕಾ ಬೆಂಗಳೂರಿಗೆ ಬಂದು ವಿರಾಟ್ ಜೊತೆ ರೆಸ್ಟೊರೆಂಟ್ ಒಂದರಲ್ಲಿ ಕುಶಲೋಪಾರಿಗಳನ್ನು ಮಾತನಾಡಿ ಅಭಿನಂದನೆಗಳನ್ನು ತಿಳಿಸಿದ್ದಾರೆ.['ಅನುಷ್ಕಾ' ಎಂದ ಪತ್ರಕರ್ತರ ಮೇಲೆ ಬ್ಯಾಟ್ ಬೀಸಿದ ಕೊಹ್ಲಿ]

ಸ್ವಲ್ಪ ದಿನ ದೂರ ಉನ್ನು ಸ್ವಲ್ಪ ದಿನ ಹತ್ತಿರವಾಗುತ್ತಿರುವ ಈ ಜೋಡಿ ಸದಾ ಜೊತೆ-ಜೊತೆಯಾಗಿರಲಿ ಎಂಬುವುದೆ ಅಭಿಮಾನಿಗಳ ಆಶಯವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kohli’s first crush was Karishma Kapoor. Kohli revealed about his first love during an interview.
Please Wait while comments are loading...