ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಚಂಡಿಮಾಲ್, ಉಪುಲ್ ತರಂಗಾ ನಾಯಕರು

Posted By:
Subscribe to Oneindia Kannada

ಕೊಲಂಬೋ, ಜುಲೈ 12: ಜಿಂಬಾಬ್ವೆ ವಿರುದ್ಧದ ಸರಣಿ ಸೋಲಿನ ಹೊಣೆ ಹೊತ್ತು ನಾಯಕ ಸ್ಥಾನದಿಂದ ಏಂಜೆಲೋ ಮ್ಯಾಥ್ಯೂಸ್ ಕೆಳಗಿಳಿದಿರುವ ಸುದ್ದಿ ಓದಿರುತ್ತೀರಿ. ಇದಾದ ಬಳಿಕ, ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಟೆಸ್ಟ್ ಹಾಗೂ ಏಕದಿನ, ಟಿ20ಐ ತಂಡಗಳಿಗೆ ಹೊಸ ನಾಯಕರನ್ನು ನೇಮಿಸಿದೆ.

ಶ್ರೀಲಂಕಾː ನಾಯಕತ್ವದಿಂದ ಕೆಳಗಿಳಿದ ಏಂಜೆಲೋ ಮ್ಯಾಥ್ಯೂಸ್

ಶ್ರೀಲಂಕಾ ಟೆಸ್ಟ್ ತಂಡಕ್ಕೆ ದಿನೇಶ್ ಚಂಡಿಮಾಲ್ ನಾಯಕರಾಗಿದ್ದರೆ, ಏಕದಿನ ಹಾಗೂ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುವ ತಂಡಕ್ಕೆ ಉಪುಲ್ ತರಂಗಾ ನಾಯಕರಾಗಿ ನೇಮಕಗೊಂಡಿದ್ದಾರೆ. ಚಂಡಿಮಾಲ್ ಅವರು ಈ ಹಿಂದೆ ಉಪ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ತರಂಗಾ ಅವರು ಕೂಡಾ ಮ್ಯಾಥ್ಯೂಸ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದರು.

Chandimal appointed Sri Lanka Test captain

27 ವರ್ಷ ವಯಸ್ಸಿನ ವಿಕೆಟ್ ಕೀಪರ್ ಬಲಗೈ ಬ್ಯಾಟ್ಸ್ ಮನ್ ಚಂಡಿಮಾಲ್ ಅವರು 36 ಟೆಸ್ಟ್ ಪಂದ್ಯಗಳಿಂದ 2540ರನ್ ಗಳನ್ನು 42.33ರನ್ ಸರಾಸರಿಯಂತೆ ಗಳಿಸಿದ್ದಾರೆ. 128 ಏಕದಿನ ಹಾಗೂ 48 ಟಿ20ಐ ಪಂದ್ಯಗಳನ್ನಾಡಿದ್ದಾರೆ.

32 ವರ್ಷ ವಯಸ್ಸಿನ ತರಂಗಾ ಅವರು 207 ಏಕದಿನ ಪಂದ್ಯಗಳನ್ನಾಡಿ 6212ರನ್ ಕಲೆ ಹಾಕಿದ್ದಾರೆ. ಅಜೇಯ 174 ರನ್ ಇವರ ವೈಯಕ್ತಿಕ ಗರಿಷ್ಠ ಮೊತ್ತ. ಎಡಗೈ ಬ್ಯಾಟ್ಸ್ ಮನ್ 16 ಟಿ20 ಐ ಪಂದ್ಯಗಳನ್ನಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sri Lanka cricketer Dinesh Chandimal has been named the captain of the Test side while Upul Tharanga will be leading the ODI and T20I team after Angelo Mathews quit captaincy from all formats on Tuesday (July 11).
Please Wait while comments are loading...