ಬೌಲರ್ ಗಳ ಆಯ್ಕೆ, ಪೈಪೋಟಿ ಬಗ್ಗೆ ಧೋನಿ ಹೇಳಿದ್ದೇನು?

By: ರಮೇಶ್ ಬಿ
Subscribe to Oneindia Kannada

ಮೀರ್ ಪುರ್ ( ಬಾಂಗ್ಲಾದೇಶ) ಮಾರ್ಚ್.07: ಭಾರತ ಕ್ರಿಕೆಟ್ ತಂಡದ ಆಡುವ XI ರೊಳಗೆ ಸೇರಲು ಬೌಲಿಂಗ್ ವಿಭಾಗದ ಉಂಟಾಗಿರುವ ಪೈಪೋಟಿ ಬಗ್ಗೆ ನಾಯಕ ಎಂಎಸ್ ಧೋನಿ ಏನು ಹೇಳಿದ್ದಾರೆ? ಇಲ್ಲಿ ಓದಿ

ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಸ್ಥಾನಕ್ಕಾಗಿ ಆಫ್ ಸ್ಪಿನ್ ಮಾಂತ್ರಿಕ ಹರಭಜನ್ ಸಿಂಗ್ ಮತ್ತು ರವಿಚಂದ್ರನ್ ಅಶ್ವಿನ್ ನಡುವೆ ತೀವ್ರ ಪೈಪೋಟಿ ಎದುರಾಗಿದ್ದ ಬೆನ್ನಲ್ಲಿಯೇ ವೇಗದ ಬೌಲಿಂಗ್ ವಿಭಾಗದಲ್ಲಿ ಅಂತದ್ದೇ ಒಂದು ಪೈಪೋಟಿ ಎದುರಾಗಿದೆ.

ಮೀರ್ ಪುರ್ ಫೈನಲ್ ಪಂದ್ಯದ ವರದಿ | ಪಂದ್ಯದ ಸ್ಕೋರ್ ಕಾರ್ಡ್ | ಏಷ್ಯಾಕಪ್ ಚಿತ್ರಗಳು

ಗಾಯದಿಂದ ಚೇತರಿಸಿಕೊಂಡರೂ ಮುಂಬರುವ ಐಸಿಸಿ ವಿಶ್ವ ಟಿ-20 ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ ಅವರಿಗೆ ಜಸ್ಪ್ರೀತ್ ಬೂಮ್ರಾ ಅಥವಾ ಆಶಿಶ್ ನೆಹ್ರಾ ಅವರ ಬದಲಿಗೆ ತಂಡದಲ್ಲಿ ಅವಕಾಶ ಸಿಗುವುದು ಕಷ್ಟ ಎಂದು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಹೇಳಿದ್ದಾರೆ.

ಏಷ್ಯಾಕಪ್ ಫೈನಲ್‌ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧೋನಿ. ಶಮಿ ಗಾಯದಿಂದ ಚೇರಿಸಿಕೊಳ್ಳುವರೋ ಇಲ್ಲವೋ ನಮಗೆ ಈಗಲೂ ಗೊತ್ತಿಲ್ಲ. ಶಮಿ ಅವರು ತಮ್ಮ ಸಾಮರ್ಥ್ಯದಿಂದಾಗಿ ಟಿ-20 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದಾರೆ. ಹೊಸ ಹಾಗೂ ಹಳೆಯ ಚೆಂಡಿನಿಂದ ಯಾರ್ಕರ್ ಎಸೆಯುವ ಬೌಲರ್‌ ಅವರು. ಅದು ಅವರ ಬಲ ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.

Difficult to bring in Mohammed Shami in place of Nehra or Bumrah: MS Dhoni

ಆದರೆ, ಬೂಮ್ರಾ ಬದಲಿಗೆ ಶಮಿಗೆ ಅವಕಾಶ ನೀಡುವುದು ಕಷ್ಟ. ಬೂಮ್ರಾ ಕೂಡ ಹೊಸ ಚೆಂಡಿನಿಂದ ಭಾಂಗ್ಲದೇಶದಲ್ಲಿ ಈವರೆಗೆ ನಡೆದ ಟಿ-20 ಏಷ್ಯಾ ಕಪ್ ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.

ಇನ್ನು ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಜಡೇಜ ಅಥವಾ ಹಾರ್ದಿಕ್ ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ ಮೂರ್ನಾಲ್ಕು ಓವರ್‌ ರನ್ ಗತಿ ಹೆಚ್ಚಿಸಬಲ್ಲರು. ಇದರಿಂದ ತಂಡ ಸಮತೋಲನದಿಂದ ಕೂಡಿದೆ. ಶಮಿ ಅವರು ನೆಹ್ರಾ ಬದಲಿಗೆ ಮಾತ್ರವೇ ತಂಡ ಸೇರಿಕೊಳ್ಳಲು ಸಾಧ್ಯವಿದೆ ಎಂದಿದ್ದಾರೆ.

ಆದರೆ ಅದು ತುಂಬ ಕಷ್ಟ. ಅವರು ಇತ್ತೀಚಿನ ಸರಣಿಗಳಲ್ಲಿ ಅಮೋಘ ಪ್ರದರ್ಶನ ತೋರಿದ್ದಾರೆ. ಶಮಿಗೆ ಇನ್ನೂ ಅವಕಾಶವಿದೆ. ಅಭ್ಯಾಸ ಪಂದ್ಯಗಳಲ್ಲಿ ಶಮಿ ಫಿಟ್ನೆಸ್ ಸಾಬೀತು ಪಡಿಸಬೇಕಿದೆ. ಅದು ಸಾಧ್ಯವಾದರೆ ಅವರು ತಂಡದಲ್ಲಿ ಮುಂದುವರೆಯಲಿದ್ದಾರೆ ಎಂದು ಧೋನಿ ಹೇಳಿದ್ದಾರೆ.

ಹೀಗೆ ಭಾರತ ಕ್ರಿಕೆಟ್ ತಂಡದ 11 ಬಳಗದಲ್ಲಿ ಸ್ಥಾನಕ್ಕಾಗಿ ಭಾರಿ ಪೈಪೋಟಿ ಎದುರಾಗಿದ್ದು ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುವುದು ನಾಯಕ ಧೋನಿ ಅವರಿಗೆ ತಲೆ ನೋವು ಉಂಟು ಮಾಡಿದೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Even if Mohammed Shami is declared fit for the ICC World T20, skipper Mahendra Singh Dhoni feels that it will be difficult for the Bengal speedster to either replace Jasprit Bumrah or Ashish Nehra in the playing as the team presently looks "very balanced".
Please Wait while comments are loading...