ಮೊಬೈಲ್ ಕಂಪನಿ ವಿರುದ್ಧ ಎಂಎಸ್ ಧೋನಿ ಕೋರ್ಟಿಗೆ ದೂರು

Posted By:
Subscribe to Oneindia Kannada

ನವದೆಹಲಿ, ಜನವರಿ 29: ಮ್ಯಾಕ್ಸ್‌ ಮೊಬಿಲಿಂಕ್ ಕಂಪನಿ ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕ್ರಿಕೆಟರ್ ಧೋನಿ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.

ಕರಾರು ಒಪ್ಪಂದ ಮುಗಿದಿದ್ದರೂ ತಮ್ಮನ್ನು ಪ್ರಚಾರ ರಾಯಭಾರಿ ಎಂಬಂತೆ ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮ್ಯಾಕ್ಚ್ ಮೊಬೈಲ್ ಕಂಪನಿ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ದೆಹಲಿ ಹೈಕೋರ್ಟ್‍ಗೆ ಧೋನಿ ಮನವಿ ಸಲ್ಲಿಸಿದ್ದಾರೆ.

ಡಿಸೆಂಬರ್ 2012ರಲ್ಲೇ ನನ್ನ ಮತ್ತು ಮ್ಯಾಕ್ಸ್(Maxxx) ಮೊಬಿಲಿಂಕ್ಸ್ ಪ್ರೈವೇಟ್ ಕಂಪನಿ ನಡುವೆ ಉತ್ಪನ್ನ ಪ್ರಚಾರದ ಒಪ್ಪಂದ ಮುಕ್ತಾಯವಾಗಿದೆ.

Dhoni alleges misuse of name by mobile company

ಆದರೂ ಆ ಸಂಸ್ಥೆ ತಾವು ಈಗಲೂ ಮೊಬೈಲ್ ಫೋನಿನ ಪ್ರಚಾರ ರಾಯಭಾರಿ ಎಂಬಂತೆ ಬಿಂಬಿಸುತ್ತಿದೆ. ಇದರಿಂದ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ದುರ್ಬಳಕೆ ಮಾಡಿಕೊಂಡಿದೆ ಎಂದು ಧೋನಿ ಆರೋಪಿಸಿದ್ದಾರೆ.

ಕರಾರು ಒ'ಪ್ಪಂದ ಅವಧಿ ಮುಗಿದಿದ್ದರೂ ಪ್ರಚಾರಕ್ಕಾಗಿ ಖ್ಯಾತ ಕ್ರಿಕೆಟ್ ನಟನನ್ನು ಬಳಸಿಕೊಂಡಿರುವುದು ತಪ್ಪು ಎಂದು ಸಂಸ್ಥೆಯ ಅಧಿಕಾರಿಗಳಿಗೆ ಛೀಮಾರಿ ಹಾಕಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಜುಲೈ 28ಕ್ಕೆ ಮುಂದೂಡಿದೆ.

ಈ ಹಿಂದೆ ನವೆಂಬರ್‌ 17, 2016ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕಂಪನಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಆದರೆ ಕಂಪನಿಯ ಸಿಎಂಡಿ ಅಜಯ್‌ ಅಗರ್‌ವಾಲ್‌ ಅವರು ನೋಟಿಸ್ ಗೆ ಬೆಲೆ ನೀಡಿರಲಿಲ್ಲ. ಆದರೆ, ಕೋರ್ಟ್ ಮುಂದೆ ಪ್ರತಿವಾದ ಮಂಡಿಸಿದ ಕಂಪನಿ ಪರ ವಕೀಲರ, ಕಂಪನಿ ಯಾವುದೇ ಲಾಭ ಪಡೆಯುವ ಉದ್ದೇಶದಿಂದ ಧೋನಿಯವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ace cricketer and former India captain M S Dhoni has alleged before Delhi High Court that a mobile firm was still using his name by projecting him as its brand ambassador despite termination of the agreement between them way back in December 2012.
Please Wait while comments are loading...