ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧರ್ಮಶಾಲಾದಲ್ಲಿ ಟಾಸ್ ಸೋತು, ಮ್ಯಾಚ್ ಸೋತ ಭಾರತ

ಬೆಂಗಳೂರು, ಅಕ್ಟೋಬರ್ 03 : ಧರ್ಮಶಾಲಾದ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 'ಫ್ರೀಡಮ್ ಕಪ್' ಸರಣಿಯ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ನಗೆ ಬೀರಿತು. ಜೆ.ಪಿ. ಡುಮಿನಿ, ಎ.ಬಿ. ಡೆವಿಲಿಯರ್ಸ್, ಹಶಿಮ್‌ ಆಮ್ಲಾ ಅವರ ಸ್ಫೋಟದ ಆಟಕ್ಕೆ ಧೋನಿ ಹುಡುಗರು ಶರಣಾದರು.

ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ ಆರಂಭಿಸಿದ ಭಾರತ ರೋಹಿತ್ ಶರ್ಮಾ ಅವರ 106 ರನ್ ನೆರವಿನಿಂದ 20 ಓವರ್‌ಗಳಲ್ಲಿ 199 ರನ್ ಗಳಿಸಿ, ಪ್ರವಾಸಿ ದಕ್ಷಿಣ ಆಫ್ರಿಕಾಕ್ಕೆ 200 ರನ್‌ಗಳ ಗುರಿ ನೀಡಿತು. [ಸ್ಕೋರ್ ಕಾರ್ಡ್ ನೋಡಿ]

4ನೇ ಓವರ್‌ನಲ್ಲಿಯೇ ಶಿಖರ್ ಧವನ್ ಅವರ ವಿಕೆಟ್ ಕಳೆದುಕೊಂಡರೂ ಭಾರತ ಉತ್ತಮ ಮೊತ್ತ ಕಲೆ ಹಾಕಿತು. ಆರಂಭಿಕರಾಗಿ ಬಂದ ರೋಹಿತ್ ಶರ್ಮಾ ಆಸರೆಯಾಗಿ ನಿಂತರು. ವಿರಾಟ್ ಕೊಹ್ಲಿ 43 ರನ್, ಸುರೇಶ್ ರೈನಾ 13 ರನ್, ನಾಯಕ ಮಹೇಂದ್ರಸಿಂಗ್ ಧೋನಿ ಔಟಾಗದೆ 20 ರನ್ ಗಳಿಸಿ ತಂಡ ಉತ್ತಮ ಮೊತ್ತ ಕಲೆಹಾಕಲು ನೆರವಾದರು.

ಅಂತರಾಷ್ಟ್ರೀಯ ಟಿ-20 ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಕನ್ನಡಿಗ ಶ್ರೀನಾಥ್ ಅರವಿಂದ್ ಅವರು ದಕ್ಷಿಣ ಆಫ್ರಿಕಾ ತಂಡದ ನಾಯಕ ಡು ಪ್ಲೆಸಿಸ್ ಅವರನ್ನು ಬೌಲ್ಡ್‌ ಮಾಡುವ ಮೂಲಕ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು. ಆದರೆ, ಸ್ಫೋಟಕ ಆಟವಾಡಿದ ಜೆ.ಪಿ. ಡುಮಿನಿ ಅವರು 34 ಎಸೆತದಲ್ಲಿ 68 ರನ್‌ಗಳನ್ನು ಗಳಿಸಿ ದಕ್ಷಿಣ ಆಫ್ರಿಕಾಕ್ಕೆ ಗೆಲುವು ತಂದು ಕೊಟ್ಟರು. ಚಿತ್ರಗಳಲ್ಲಿ ನೋಡಿ ಮ್ಯಾಚ್ ವಿವರ..... [ಪಿಟಿಐ ಚಿತ್ರಗಳು]

ದಕ್ಷಿಣ ಆಫ್ರಿಕಾಕ್ಕೆ ಗೆಲುವಿನ ಆರಂಭ

ದಕ್ಷಿಣ ಆಫ್ರಿಕಾಕ್ಕೆ ಗೆಲುವಿನ ಆರಂಭ

ಸುದೀರ್ಘ ಭಾರತ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ 'ಫ್ರೀಡಮ್ ಕಪ್' ಸರಣಿಯ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು. ಧರ್ಮಶಾಲಾದ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತವನ್ನು ಏಳು ವಿಕೆಟ್‌ಗಳಿಂದ ಮಣಿಸಿತು.

ಟಾಸ್ ಮತ್ತು ಮ್ಯಾಚ್ ಗೆದ್ದ ದಕ್ಷಿಣ ಆಫ್ರಿಕಾ

ಟಾಸ್ ಮತ್ತು ಮ್ಯಾಚ್ ಗೆದ್ದ ದಕ್ಷಿಣ ಆಫ್ರಿಕಾ

ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಅಂತಿಮವಾಗಿ ಪಂದ್ಯವನ್ನು ಗೆದ್ದು ಬೀಗಿತು. ಟಾಸ್‌ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾಗೆ ಭಾರತದ ರೋಹಿತ್ ಶರ್ಮಾ ತಲೆ ನೋವಾದರು. 106 ರನ್ ಸಿಡಿಸಿದ ಅವರು ಭಾರತ 20 ಓವರ್‌ಗಳಲ್ಲಿ 199 ರನ್ ಗಳಿಸಲು ನೆರವಾದರು.

ಸವಾಲಿನ ಮೊತ್ತ ಕಲೆ ಹಾಕಿದ ಭಾರತ

ಸವಾಲಿನ ಮೊತ್ತ ಕಲೆ ಹಾಕಿದ ಭಾರತ

ರೋಹಿತ್ ಶರ್ಮಾ ಅವರ 106, ವಿರಾಟ್ ಕೊಹ್ಲಿ 43, ಸುರೇಶ್ ರೈನಾ 13, ಮಹೇಂದ್ರಸಿಂಗ್ ಧೋನಿ 20 ರನ್‌ಗಳ ನೆರವಿನಿಂದ ಭಾರತ 199 ರನ್ ಕಲೆ ಹಾಕಿ ದಕ್ಷಿಣ ಆಫ್ರಿಕಾಕ್ಕೆ 200 ರನ್‌ಗಳ ಟಾರ್ಗೆಟ್ ಕೊಟ್ಟರು. ಬ್ಯಾಟಿಂಗ್‌ಗೆ ಸಹಕಾರ ನೀಡಿದ ಪಿಚ್‌ನಲ್ಲಿ ಬೌಲರ್‌ಗಳು ಮಂಕಾದರು.

ಆಮ್ಲಾ, ಎಬಿಡಿ ಜೊತೆಯಾಟ

ಆಮ್ಲಾ, ಎಬಿಡಿ ಜೊತೆಯಾಟ

200 ರನ್ ಗುರಿ ಮುಟ್ಟಲು ಮೈದಾನಕ್ಕೆ ಇಳಿದ ಹಶಿಮ್ ಆಮ್ಲಾ ಮತ್ತು ಎ.ಬಿ. ಡೆವಿಲಿಯರ್ಸ್ ಅವರು ಭಾರತದ ಆರಂಭಿಕ ಬೌಲರ್‌ಗಳ ಬೆವರಿಳಿಸಿದರು. 24 ಎಸೆತದಲ್ಲಿ 36 ರನ್ ಗಳಿಸಿದ್ದ ಆಮ್ಲಾ ರನೌಟ್ ಆದರು. 32 ಎಸೆತದಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಎ.ಬಿ.ಡೆವಿಲಿಯರ್ಸ್ ಅವರು 51 ರನ್‌ಗಳಿಸಿದರು.

ಅಶ್ವಿನ್ ಸ್ಪಿನ್‌ಗೆ ವಿಕೆಟ್ ಕೊಟ್ಟ ಎಬಿಡಿ

ಅಶ್ವಿನ್ ಸ್ಪಿನ್‌ಗೆ ವಿಕೆಟ್ ಕೊಟ್ಟ ಎಬಿಡಿ

51 ರನ್‌ಗಳಿಸಿದ್ದ ಎ.ಬಿ.ಡೆವಿಲಿಯರ್ಸ್ ಅವರು ಅಶ್ವಿನ್ ಸ್ಪಿನ್ ಮೋಡಿಗೆ ವಿಕೆಟ್ ಒಪ್ಪಿಸಿದರು. ಎಬಿಡಿ ಔಟಾದಾಗ ದಕ್ಷಿಣ ಆಫ್ರಿಕಾಕ್ಕೆ ಸೋಲು ಖಚಿತ ಎಂಬ ಲೆಕ್ಕಾಚಾರ ಆರಂಭವಾಯಿತು. ಡೆವಿಲಿಯರ್ಸ್ ನಂತರ ಬಂದ ನಾಯಕ ಫಾಫ್ ಡು ಪ್ಲೆಸಿಸ್ ಕನ್ನಗಿರ ಅರವಿಂದ್ ಕೈಚಳಕಕ್ಕೆ ವಿಕೆಟ್ ಒಪ್ಪಿಸಿದರು.

ಗೆಲುವು ತಂದು ಕೊಟ್ಟ ಜೆ.ಪಿ. ಡುಮಿನಿ

ಗೆಲುವು ತಂದು ಕೊಟ್ಟ ಜೆ.ಪಿ. ಡುಮಿನಿ

ತಂಡವನ್ನು ಗೆಲ್ಲಿಸಲೇಬೇಕು ಎಂದು ಹಠ ತೊಟ್ಟಿದ್ದ ಜೆ.ಪಿ. ಡುಮಿನಿ 34 ಎಸೆತದಲ್ಲಿ 68 ರನ್‌ ಗಳಿಸಿದರು. 1 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ ದಕ್ಷಿಣ ಆಫ್ರಿಕಾಕ್ಕೆ 7 ವಿಕೆಟ್ ಜಯ ತಂದುಕೊಟ್ಟರು. ಡುಮಿನಿ ಜೊತೆಯಾದ ಬೆಹ್ರಾಡೀನ್ 23 ಎಸೆತದಲ್ಲಿ 32 ರನ್ ಸಿಡಿಸಿ ಡುಮಿನಿ ಅವರಿಗೆ ನೆರವಾದರು.

ಮುಂದಿನ ಪಂದ್ಯ ಅಕ್ಟೋಬರ್ 5

ಮುಂದಿನ ಪಂದ್ಯ ಅಕ್ಟೋಬರ್ 5

ಭಾರತ-ದಕ್ಷಿಣ ಆಫ್ರಿಕಾ ನಡುವಿನ 2ನೇ ಟಿ-20 ಪಂದ್ಯ ಅಕ್ಟೋಬರ್ 5ರ ಸೋಮವಾರ ಸಂಜೆ 7 ಗಂಟೆಗೆ ಕಟಕ್‌ನಲ್ಲಿ ನಡೆಯಲಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X