ಪುಣೆ ಸೂಪರ್ ಜಿಯಾಂಟ್ಸ್ ಗೆ ಸೋಲಿನಾಘಾತ ನೀಡಿದ ಡೆಲ್ಲಿ

Posted By:
Subscribe to Oneindia Kannada

ನವದೆಹಲಿ, ಮೇ 12: ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಶಿಸ್ತುಬದ್ಧ ಆಟ ಪ್ರದರ್ಶಿಸಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡ, ಶುಕ್ರವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜಿಯಾಂಟ್ಸ್ ವಿರುದ್ಧ ಕೇವಲ 7 ರನ್ ಗಳ ಜಯ ಸಾಧಿಸಿತು.

ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ, ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತ್ತು. ಈ ಮೊತ್ತವನ್ನು ಹಿಂದಿಕ್ಕಿದ ರೈಸಿಂಗ್ ಪುಣೆ ಸೂಪರ್ ಜಿಯಾಂಟ್ಸ್ ತಂಡ, 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಮಾತ್ರ ಗಳಿಸಿತು.[ಸ್ಕೋರ್ ವಿವರ]

Delhi Daredevils Edged past Pune Supergiants by 7 runs

ಟಾಸ್ ಗೆದ್ದಿದ್ದ ಆತಿಥೇಯ ಡೆಲ್ಲಿ ತಂಡ, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆರಂಭಿಕ ಸಂಜು ಸ್ಯಾಮ್ಸನ್ ಅವರನ್ನು ತಂಡ ಬೇಗನೇ ಕಳೆದುಕೊಂಡರೂ, ಮತ್ತೊಬ್ಬ ಆರಂಭಿಕ ಕರುಣ್ ನಾಯರ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ರಿಷಬ್ ಪಂತ್, ಮರ್ಲಾನ್ ಸ್ಯಾಮ್ಯುಯೆಲ್ಸ್ ಅವರಿಂದಾಗಿ ಉತ್ತಮ ಮೊತ್ತ ಕಲೆಹಾಕಿತು.

ಆನಂತರ ಬ್ಯಾಟಿಂಗ್ ಗೆ ಇಳಿದ ಪುಣೆಯ ಆರಂಭಿಕರು ವೈಫಲ್ಯಕ್ಕೀಡಾಗಿತ್ತು ತಂಡದ ಚೇಸಿಂಗ್ ಗೆ ಹಿನ್ನಡೆಯಾಯಿತು. ಮೂರನೇ ಕ್ರಮಾಂಕದ ಸ್ಟೀವನ್ ಸ್ಮಿತ್, ಮನೀಶ್ ತಿವಾರಿ ಹಾಗೂ ಸ್ಟೋಕ್ಸ್ ಕೊಂಚ ಆರ್ಭಟಿಸಿದರೂ ತಂಡಕ್ಕೆ ಅದು ನೆರವಾಗಲಿಲ್ಲ. ಮಧ್ಯಮ ಕ್ರಮಾಂಕದ ಮತ್ತೊಬ್ಬ ಪ್ರಮುಖ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಕೂಡ ಕೇವಲ 5 ರನ್ ಗಳಿಸಿ ಔಟಾದರು.

ಈ ಎಲ್ಲಾ ಕಾರಣಗಳಿಂದಾಗಿ ಪುಣೆ ತಂಡ, 7 ರನ್ ಗಳ ಸೋಲು ಕಂಡಿತು. ಡೆಲ್ಲಿ ತಂಡದ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಜಹೀರ್ ಖಾನ್ (ನಾಯಕ) ತಲಾ ಎರಡು ವಿಕೆಟ್ ಗಳಿಸಿ ತಮ್ಮ ತಂಡದ ಗೆಲುವಿನಲ್ಲಿ ತಮ್ಮ ಕಾಣಿಕೆ ಸಲ್ಲಿಸಿದರು.

(ಚಿತ್ರ ಕೃಪೆ: www.iplt20.com)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A disciplined performance both in batting and bowling helps Delhi Daredevils to win the match against Rising Pune Supergiants in an IPL match, played on May 12, 2017.
Please Wait while comments are loading...