ಐಪಿಎಲ್ ದಾಖಲೆ: ಡೆಲ್ಲಿಯ ಕ್ರಿಸ್ ರನ್ ಗಳಿಕೆ ಗತಿ ಅಬ್ಬಬ್ಬಾ!

Posted By:
Subscribe to Oneindia Kannada

ಪುಣೆ, ಏಪ್ರಿಲ್ 12: ಐಪಿಎಲ್ 2017ರ 9ನೇ ಪಂದ್ಯದಲ್ಲಿ ಹಲವು ದಾಖಲೆಗಳ ನಿರ್ಮಾಣವಾಯಿತು. ಕ್ರಿಸ್ ಮೊರಿಸ್ ಸ್ಟ್ರೈಕ್ ರೇಟ್ ಬಗ್ಗೆ ಮಂಗಳವಾರದಂದು [ಪುಣೆ ಪಾಲಿಗೆ ನಂಜಾದ ಸಂಜು] ಓದಿರುತ್ತೀರಿ. ಈಗ ಈ ಬಗ್ಗೆ ವಿಸ್ತಾರವಾಗಿ ಓದಿ..

ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಡೆಲ್ಲಿ ಡೆರ್ ಡೆವಿಲ್ಸ್ ತಂಡ 97ರನ್ ಗಳಿಂದ ಭರ್ಜರಿ ಜಯ ದಾಖಲಿಸಿದ್ದು, ಸಂಜು ಸಾಮ್ಸನ್ ಚೊಚ್ಚಲ ಶತಕ ಸಿಡಿಸಿದ್ದು ಮುಖ್ಯಾಂಶವಾಗಿತ್ತು. ಇದರ ಜತೆಗೆ ಕ್ರಿಸ್ ಸ್ಟ್ರೈಕ್ ರೇಟ್ ಈಗ ಚರ್ಚೆಯ ವಿಷಯವಾಗಿದೆ.

Unbelievable strike rate of 422.22: Delhi's Chris Morris sets new IPL record

ಐಪಿಎಲ್ ನಲ್ಲಿ ಶತಕ ಸಿಡಿಸಿದ ಎರಡನೇ ಅತ್ಯಂತ ಕಿರಿಯ ಎಂಬ ದಾಖಲೆ ಬರೆದ ಸಂಜು ಮುಂದೆ ಕ್ರಿಸ್ ಬಾರಿಸಿದ 38ರನ್(9 ಎಸೆತಗಳು) ಅಷ್ಟಾಗಿ ಹೈಲೇಟ್ ಆಗಲಿಲ್ಲ.

ಕ್ರಿಸ್ ಅವರು 422.22 ಸ್ಟ್ರೈಕ್ ರೇಟ್ ನಂತೆ ರನ್ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಮುಂಚೆ ಈ ದಾಖಲೆ ದಕ್ಷಿಣ ಆಫ್ರಿಕಾದವರೆ ಆದ ಅಲ್ಬಿ ಮಾರ್ಕೆಲ್ ಹೆಸರಿನಲ್ಲಿತ್ತು. ಆಲ್ಬಿ ಅವರು 400.00 ಸ್ಟ್ರೈಕ್ ರೇಟ್(7 ಎಸೆತಗಳಲ್ಲಿ 28ರನ್) ಹೊಂದಿದ್ದರು.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಆರನೇ ಕ್ರಮಾಂಕದಲ್ಲಿ ಆಡಲು ಬಂದ ಕ್ರಿಸ್ ಅವರು ಆಡಂ ಝಂಪಾ ಹಾಗೂ ಬೆನ್ ಸ್ಟೋಕ್ಸ್ ಎಸೆತಗಳನ್ನು ಬೌಂಡರಿ ಆಚೆ ಅಟ್ಟಿದರು. 4 ಬೌಂಡರಿ ಹಾಗೂ ಮೂರು ಸಿಕ್ಸರ್ ಸಿಡಿಸಿದರು.

ಆಡಂ ಝಂಪಾ ಬೌಲಿಂಗ್ ನಲ್ಲಿ ಕ್ರಮವಾಗಿ : 4,2,6,4 ಹಾಗೂ ಬೆನ್ ಸ್ಟೋಕ್ಸ್ ಓವರ್ ನ 2ನೇ ಎಸೆತಕ್ಕೆ ಸ್ಟ್ರೈಕ್ ಗೆ ಬಂದ ಕ್ರಿಸ್, 4,2,4,6,6 ಬಾರಿಸಿ ಅಚ್ಚರಿಯ ಬ್ಯಾಟಿಂಗ್ ಪ್ರದರ್ಶಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi Daredevils (DD) batsman Chris Morris set a new record during their Indian Premier League (IPL) 2017 match against Rising Pune Supergiant (RPS) here last night (April 11)
Please Wait while comments are loading...