ಮಿಶ್ರಾ ಸ್ಪಿನ್ ಮೋಡಿ, ಪ್ರೀತಿ ಹುಡುಗರಿಗೆ ಸೋಲು!

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 16 : ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ಅವರ ಸ್ಪಿನ್ ಮೋಡಿಗೆ ಸಿಲುಕಿದ ಕಿಂಗ್ಸ್ ಇಲೆವೆನ್ ಪಂಜಾಬ್ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲುಕಂಡಿದೆ. 11 ರನ್ ನೀಡಿ 4 ವಿಕೆಟ್ ಪಡೆದ ಮಿಶ್ರಾ ಪಂಜಾಬ್ ತಂಡ ಹೆಚ್ಚಿನ ರನ್‌ಗಳಿಸದಂತೆ ಕಟ್ಟಿ ಹಾಕಿದರು.

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ, ಕಿಂಗ್ಸ್ ಇಲೆವನ್ ಪಂಜಾಬ್ ನೀಡಿದ 112 ರನ್‌ಗಳ ಗುರಿಯನ್ನು 13.3 ಓವರ್‌ನಲ್ಲಿ ಮುಟ್ಟಿದ್ದ ಡೆಲ್ಲಿ ಡೇರ್ ಡೆವಿಲ್ಸ್ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಿತು. [ವೇಳಾಪಟ್ಟಿ ನೋಡಿ]

ipl 9

ಡೆಲ್ಲಿ ಡೇರ್ ಡೆವಿಲ್ಸ್ ಟಾಸ್ ಗೆದ್ದರೂ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಂಜಾಬ್ ತಂಡವನ್ನು ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ಸ್ಪಿನ್ ಮೋಡಿ ಮೂಲಕ ಕಟ್ಟಿ ಹಾಕಿದರು. ಶಾನ್ ಮಾರ್ಷ್ (13), ಡೇವಿಡ್ ಮಿಲ್ಲರ್ (9), ಗ್ಲೆನ್ ಮ್ಯಾಕ್ಸ್‌ವೆಲ್ (0), ಮನನ್ ವೋರಾ (32) ಮಿಶ್ರಾ ಸ್ಪೀನ್ ಮೋಡಿಗೆ ವಿಕೆಟ್ ಒಪ್ಪಿಸಿದರು. [ಬೆಂಗಳೂರಿನಲ್ಲಿ ಐಪಿಎಲ್ 2016 ಫೈನಲ್ ಸಮರ?]

-
-
-
-
-

20 ಓವರ್‌ಗಳಲ್ಲಿ ಪಂಜಾಬ್ 9 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿತು. ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ 112 ರನ್‌ಗಳ ಗುರಿ ನೀಡಿತು. ಡೆಲ್ಲಿ ಪರ ಜಾಹೀರ್ ಖಾನ್ 14 ರನ್ ನೀಡಿ 1 ವಿಕೆಟ್ ಪಡೆದರೆ, ಮಿಶ್ರಾ 11 ರನ್‌ಗೆ 4 ವಿಕೆಟ್ ಪಡೆದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. [ಮುಂಬೈಗೆ ಆಘಾತ. ಐಪಿಎಲ್ 9 ನಿಂದ ಲೆಂಡಲ್ ಸಿಮನ್ಸ್ ಔಟ್]

ಪಂಜಾಬ್ ನೀಡಿದ ಸುಲಭವಾದ ಗುರಿ ಬೆನ್ನಟ್ಟಿದ ಡೆಲ್ಲಿ ಡೇರ್ ಡೆವಿಲ್ಸ್ ಕ್ವಿಂಟನ್ ಡಿಕಾಕ್ ಅವರ 59, ಸಂಜು ಸ್ಯಾಮ್ಸನ್ ಅವರ 33 ರನ್ ಸಹಾಯದಿಂದ 13.3 ಓವರ್‌ಗಳಲ್ಲಿಯೇ ಜಯಗಳಿಸಿತು. ಇದರೊಂದಿಗೆ ಐಪಿಎಲ್ 9ನೇ ಆವೃತ್ತಿಯ ಪಂದ್ಯದಲ್ಲಿ ಮೊದಲ ಗೆಲುವು ಪಡೆಯಿತು.

-
-
-
-
-

ಮುಂದಿನ ಪಂದ್ಯ : ಡೆಲ್ಲಿ ಡೇರ್ ಡೆವಿಲ್ಸ್ ಏ.17ರ ಭಾನುವಾರ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಏ.19 ರಂದು ಪಂಜಾಬ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂದಿನ ಪಂದ್ಯವನ್ನು ಆಡಲಿದೆ.

ಶನಿವಾರದ ಪಂದ್ಯಗಳು : ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್. [ಪಿಟಿಐ ಚಿತ್ರಗಳು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi Daredevils beat Kings XI Punjab at Feroz Shah Kotla in Delhi on Friday. Amit Mishra's 11 for 4 helped restricted Kings XI Punjab to 111, Quinton De Kock 59 and Sanju Samson 33 helped Delhi reach the target in 13.3 overs.
Please Wait while comments are loading...