ಬ್ರಾಡ್ಮನ್ ದಾಖಲೆ ಸಮಕ್ಕೆ ನಿಂತ ವಾರ್ನರ್ ಗೆ ಬಹುಪರಾಕ್!

Posted By:
Subscribe to Oneindia Kannada

ಸಿಡ್ನಿ, ಜನವರಿ 03: ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರು ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ದಾಖಲೆಯ ಶತಕ ಬಾರಿಸಿ, ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಅಭಿಮಾನಿಗಳು, ಕ್ರಿಕೆಟ್ ವಿಶ್ಲೇಷಕರಿಂದ ವಾರ್ನರ್ ಗೆ ಹೊಗಳಿಕೆಯ ಮಹಾಪೂರವೇ ಹರಿದು ಬಂದಿದೆ.

ಪಂದ್ಯದ ಸ್ಕೋರ್ ಕಾರ್ಡ್

ಪಾಕಿಸ್ತಾನ ವಿರುದ್ಧ ಮಂಗಳವಾರ(ಜನವರಿ 03) ಮೂರನೇ ಟೆಸ್ಟ್ ಪಂದ್ಯ ಆರಂಭವಾಗಿದೆ. ವಾನರ್ ಅವರು ಪಂದ್ಯದ ಮೊದಲ ದಿನದ ಭೋಜನ ವಿರಾಮಕ್ಕೂ ಮೊದಲೇ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. [ತ್ವರಿತಗತಿಯಲ್ಲಿ ಶತಕ ಸಿಡಿಸಿ ದಾಖಲೆ ಬರೆದ ವಾರ್ನರ್]

ಎಡಗೈ ಬ್ಯಾಟ್ಸ್ ಮನ್ ವಾರ್ನರ್ ಅವರು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೂರನೇ ಹಾಗೂ ವೈಯಕ್ತಿಕ 18ನೇ ಶತಕ ಬಾರಿಸಿದರು. 117 ನಿಮಿಷಗಳಲ್ಲಿ 78 ಎಸೆತಗಳಲ್ಲಿ ನೂರು ರನ್ ಗಡಿ ದಾಟಿದ ವಾರ್ನರ್ ಅವರು 17 ಬೌಂಡರಿ ಬಾರಿಸಿದರು.

ವಾರ್ನರ್ ಅವರು ಆಸ್ಟ್ರೇಲಿಯದಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭೋಜನ ವಿರಾಮಕ್ಕೆ ಮೊದಲೇ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ದಂತಕತೆ ಸರ್ ಡೊನಾಲ್ಡ್ ಬ್ರಾಡ್ಮನ್ ಅವರು ಈ ಸಾಧನೆ ಮಾಡಿದ ಮೊದಲಿಗರು.

87 ವರ್ಷ ಹಳೆಯ ದಾಖಲೆ ಸಮಕ್ಕೆ ನಿಂತ ವಾರ್ನರ್

87 ವರ್ಷ ಹಳೆಯ ದಾಖಲೆ ಸಮಕ್ಕೆ ನಿಂತ ವಾರ್ನರ್

ಬ್ರಾಡ್ಮನ್ ಅವರ ಹೆಸರಿನಲ್ಲಿದ್ದ 87 ವರ್ಷ ಹಳೆಯ ದಾಖಲೆಯನ್ನು 30 ವರ್ಷ ವಯಸ್ಸಿನ ವಾರ್ನರ್ ಸಮಗೊಳಿಸಿದ್ದಾರೆ.1930ರಲ್ಲಿ ಲೀಡ್ಸ್ ನಲ್ಲಿ 334ರನ್ ಚೆಚ್ಚಿದ ಬ್ರಾಡ್ಮನ್ ಅವರು ಪಂದ್ಯದ ಮೊದಲ ಸೆಷನ್ ನಲ್ಲೇ ಶತಕ ಬಾರಿಸಿದ್ದರು. ಉಳಿದಂತೆ ಆಸ್ಟ್ರೇಲಿಯಾದ ವಿಕ್ಟರ್ ಟ್ರಂಪರ್, ಚಾರ್ಲಿ ಮೆಕಾರ್ಟ್ನಿ, ಪಾಕಿಸ್ತಾನದ ಮಜೀದ್ ಖಾನ್ ಈ ಸಾಧನೆ ಮಾಡಿದ್ದಾರೆ.

ಈ ಸಾಧನೆ ಮಾಡಿದ 4ನೇ ಆಸ್ಟ್ರೇಲಿಯನ್

ಡೇವಿಡ್ ವಾರ್ನರ್ ಅವರು ಈ ಸಾಧನೆ ಮಾಡಿದ ನಾಲ್ಕನೇ ಆಸ್ಟ್ರೇಲಿಯನ್ ಆಗಿದ್ದಾರೆ ಎಂದು ಅಂಕಿ ಅಂಶ ನೀಡಿದ ಮೊಹನ್ ದಾಸ್ ಮೆನನ್.

ಎಲ್ಲಾ ಮಾದರಿಯಲ್ಲೂ ವಾರ್ನರ್ ಹುಲಿ

ಎಲ್ಲಾ ಮಾದರಿ ಕ್ರಿಕೆಟ್ ನಲ್ಲೂ ಡೇವಿಡ್ ವಾರ್ನರ್ ಅವರು ಹುಲಿಯಂತೆ ಅಬ್ಬರಿಸುತ್ತಾರೆ ಎಂದು ಟ್ವೀಟ್ ಮಾಡಿರುವ ಮಾಧವ್.

ಕೊಹ್ಲಿ ನಂತರ ವಾರ್ನರ್ ಬೆಸ್ಟ್

ವಿರಾಟ್ ಕೊಹ್ಲಿ ಅವರ ನಂತರ ವಾರ್ನರ್ ಆಟ ನೋಡಲು ಚೆಂದ. ಎಷ್ಟು ಸುಲಭವಾಗಿ ಬ್ಯಾಟ್ ಮಾಡಬಹುದು ಎಂಬುದನ್ನು ವಾರ್ನರ್ ಇಂದಿನ ಪಂದ್ಯದಲ್ಲಿ ತೋರಿಸಿಕೊಟ್ಟಿದ್ದಾರೆ.

ವಾರ್ನರ್ ಗೆ ದಾಖಲೆ ಬಗ್ಗೆ ತಿಳಿದಿರಲಿಲ್ಲ

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ವಾರ್ನರ್ ಅವರು ಶತಕ ಬಾರಿಸಿ ದಾಖಲೆ ಬರೆದರೂ ಈ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ತಂಡದ ಡಾಕ್ಟರ್ ಪೀಟರ್ ಬ್ರುಕ್ನರ್ ಅವರು ತಿಳಿಸಿದರು.

ವಾರ್ನರ್ ಶತಕದ ಸಂಭ್ರಮ

ಡೇವಿಡ್ ವಾರ್ನರ್ ಅವರು ತ್ವರಿತಗತಿಯಲ್ಲಿ ಶತಕ ಸಿಡಿಸಿದ ಸಂಭ್ರಮಾಚರಣೆ ಕ್ಷಣ

ಆಸ್ಟ್ರೇಲಿಯಾದ ಸೂಪರ್ ಸ್ಟಾರ್

ಆಸ್ಟ್ರೇಲಿಯಾದ ಸೂಪರ್ ಸ್ಟಾರ್ ಡೇವಿಡ್ ವಾರ್ನರ್ ಗೆ ಎದ್ದು ನಿಂತು ಅಭಿನಂದನೆ ಸಲ್ಲಿಸಿದ ಸಿಡ್ನಿ ಪ್ರೇಕ್ಷಕರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
David Warner became the first batsman in 87 years as he slammed a century in the opening session of a Test match. Twitterati laud Australia opener
Please Wait while comments are loading...