ಗುತ್ತಿಗೆ ಕಿರಿಕ್, ಟ್ವೀಟ್ ಮಾಡಿದ್ದಕ್ಕೆ ಬ್ರಾವೋ ಔಟ್!

Posted By:
Subscribe to Oneindia Kannada

ಬಾರ್ಬಡೊಸ್, ನವೆಂಬರ್ 14: ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ (ಡಬ್ಲುಐಸಿಬಿ) ಯ ಗುತ್ತಿಗೆ ಪ್ರಕ್ರಿಯೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಬ್ಯಾಟ್ಸ್ ಮನ್ ಡರೇನ್ ಬ್ರಾವೊ ಅವರನ್ನು ಜಿಂಬಾಬ್ವೆ ತ್ರಿಕೋನ ಏಕದಿನ ಸರಣಿಯಿಂದ ಹೊರಹಾಕಲಾಗಿದೆ.

ತ್ರಿಕೋನ ಏಕದಿನ ಅಂತಾರಾಷ್ಟ್ರೀಯ ಟೂರ್ನಿಗೆ ಪ್ರಕಟಿಸಲಾದ ವೆಸ್ಟ್‌ಇಂಡೀಸ್ ತಂಡದಲ್ಲಿ ಬ್ರಾವೊ ಕೂಡಾ ಇದ್ದರು. ಆದರೆ, ಮಂಡಳಿಯ ಗುತ್ತಿಗೆ ಪ್ರಕ್ರಿಯೆ, ನೀಡುತ್ತಿರುವ ಮೊತ್ತದ ಬಗ್ಗೆ ಬ್ರಾವೊ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. [ತ್ರಿಕೋನ ಏಕದಿನ ಸರಣಿ: ಶ್ರೀಲಂಕಾ ತಂಡಕ್ಕೆ ತರಂಗ ನಾಯಕ]

Darren Bravo axed by WICB following Twitter outburst over 'big idiot' remark

ಬ್ರಾವೊ ಅವರ ಟ್ವೀಟ್ ಸ್ವೀಕರಿಸಲು ಸಾಧ್ಯವಿಲ್ಲ ಅವರನ್ನು ತಂಡದಿಂದ ಹೊರ ಹಾಕಲಾಗಿದೆ. 15 ಸದಸ್ಯರನ್ನು ಒಳಗೊಂಡ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದಲ್ಲಿ ಬ್ರಾವೊ ಬದಲಿಗೆ ಜೇಸನ್ ಮುಹಮ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ(ಡಬ್ಲುಐಸಿಬಿ) ಶನಿವಾರ ಹೇಳಿದೆ.

ನನಗೆ ಎ ದರ್ಜೆಯ ಗುತ್ತಿಗೆಯ ಪ್ರಸ್ತಾವವನ್ನೇ ನೀಡಿಲ್ಲ. ನೀವು ಕೂಡ ಕಳೆದ ನಾಲ್ಕು ವರ್ಷಗಳಿಂದ ಅಧ್ಯಕ್ಷರಾಗಿ ವಿಫಲರಾಗಿದ್ದೀರಿ. ಆದರೆ, ರಾಜೀನಾಮೆ ನೀಡಿಲ್ಲ. ನೀವು ದೊಡ್ಡ ಮೂರ್ಖರಾಗಿದ್ದೀರಿ ಎಂದು ಬ್ರಾವೊ ಟ್ವೀಟ್ ಮಾಡಿದ್ದರು.

ಗುತ್ತಿಗೆಯನ್ನು ಸಿ ದರ್ಜೆಯನ್ನು ನೀಡಿದ್ದಕ್ಕೆ ಆಕ್ರೋಶಗೊಂಡಿದ್ದ ಬ್ರಾವೊ, ಡಬ್ಲು ಐಸಿಬಿ ಅಧ್ಯಕ್ಷ ಡೇವ್ ಕ್ಯಾಮರೂನ್‌ರನ್ನು 'ಬಿಗ್ ಈಡಿಯಟ್'(ಮಹಾಮೂರ್ಖ) ಎಂದು ಟ್ವಿಟರ್‌ನಲ್ಲಿ ಟೀಕಿಸಿದ್ದರು. ಬ್ರಾವೊ ಅವರ ಕಳಪೆ ಬ್ಯಾಟಿಂಗ್ ಸರಾಸರಿಯ ಹಿನ್ನೆಲೆಯಲ್ಲಿ ಕೇಂದ್ರ ಗುತ್ತಿಗೆಯನ್ನು ಸಿ ದರ್ಜೆ ನೀಡಲಾಗಿತ್ತು ಎಂದು ಕ್ಯಾಮರೂನ್ ಪ್ರತಿಕ್ರಿಯಿಸಿದರು.

ಬ್ರಾವೊ ಇತ್ತೀಚೆಗೆ ಯುಎಇನಲ್ಲಿ ಕೊನೆಗೊಂಡ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ರಾವೊ ವಿಂಡೀಸ್‌ನ ಪರ ಎರಡನೆ ಗರಿಷ್ಠ ಸ್ಕೋರ್ ದಾಖಲಿಸಿದ್ದರು. ಆದರೆ, ಭಾರತ ವಿರುದ್ಧ ನಡೆದಿದ್ದ ಸ್ವದೇಶಿ ಟೆಸ್ಟ್ ಸರಣಿಯಲ್ಲಿ 7 ಇನಿಂಗ್ಸ್‌ಗಳಲ್ಲಿ ಕೇವಲ 139 ರನ್ ಗಳಿಸಿದ್ದರು.

ಜಿಂಬಾಬ್ವೆಯ ಹರಾರೆಯಲ್ಲಿ ನವೆಂಬರ್ 14 ರಿಂದ ತ್ರಿಕೋನ ಸರಣಿ ಆರಂಭವಾಗಲಿದೆ. ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ಜಿಂಬಾಬ್ವೆಯನ್ನು ಎದುರಿಸಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Darren Bravo was axed by the West Indies after the key batsman blasted the team's top official as "a big idiot" in row over contracts.
Please Wait while comments are loading...