ಟೆಸ್ಟ್ ಶ್ರೇಯಾಂಕ: ಡೇಲ್ ಸ್ಟೇನ್ ಮತ್ತೆ ನಂ. 1 ಪಟ್ಟ, ಅಶ್ವಿನ್ ನಂ. 3

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 31 : ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕು ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿದರೂ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಮತ್ತೊಮ್ಮೆ ನಂ. 1 ಬೌಲರ್ ಆಗಿ ಹೊರ ಹೊಮ್ಮಿದ್ದಾರೆ.

ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ಮೂವರು ಕಿವೀಸ್ ಅಟಗಾರನ್ನು ಡಕ್ ಔಟ್ ಮಾಡಿದ್ದಲ್ಲದೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸ್ಟೇನ್ ತಂಡಕ್ಕೆ 204 ರನ್ ಗಳ ಜಯ ಲಭಿಸುವಂತೆ ಮಾಡಿದರು.ಎರಡನೇ ಇನ್ನಿಂಗ್ಸ್ ನಲ್ಲಿ- 5/33 ಗಳಿಸಿದ ಸ್ಟೇನ್ ಒಟ್ಟಾರೆ ಪಂದ್ಯದಲ್ಲಿ 8/99 ಪಡೆದುಕೊಂಡು 26 ನೇ ಬಾರಿಗೆ 5 ಕ್ಕಿಂತ ಹೆಚ್ಚಿನ ವಿಕೆಟ್ ಪಡೆದ ಸಾಧನೆ ಮಾಡಿದರು.

Dale Steyn back as No. 1 Test bowler; R Ashwin slips to 3rd

2014ರಲ್ಲಿ ನಂ.1 ಪಟ್ಟಕ್ಕೇರಿದ್ದ 33 ವರ್ಷ ವಯಸ್ಸಿನ ಸ್ಟೇನ್ ಅವರು ಮತ್ತೊಮ್ಮೆ ಅಗ್ರಸ್ಥಾನ ಗಳಿಸಿದ್ದಾರೆ. ಅತಿಹೆಚ್ಚು ಅವಧಿ(2,320 ದಿನಗಳು) ಅಗ್ರಸ್ಥಾನದಲ್ಲಿ ಉಳಿದ ದಾಖಲೆ ಕೂಡಾ ಸ್ಟೇನ್ ಹೆಸರಿನಲ್ಲಿದೆ.

ಆಗಸ್ಟ್ 31, 2016ರಂತೆ ಟಾಪ್ 10 ಬೌಲರ್ ಗಳು, ದೇಶ ಹಾಗೂ ಅಂಕಗಳು:
1 (+2) ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ) 878
2 (-1) ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) 870
3 (-1) ಆರ್ ಅಶ್ವಿನ್ (ಭಾರತ) 859
4 ( - ) ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) 836
5 ( - ) ರಂಗಣ ಹೇರಾತ್ (ಶ್ರೀಲಂಕಾ) 831
6 ( - ) ಯಾಶೀರ್ ಶಾ (ಪಾಕಿಸ್ತಾನ) 806
7 ( - ) ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಯಾ) 792
8 ( - ) ರವೀಂದ್ರ ಜಡೇಜ (ಭಾರತ) 773
9 (+1) ನೀಲ್ ವಾಗ್ನರ್ (ನ್ಯೂಜಿಲೆಂಡ್) 760
10 (-1) ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್) 733
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South Africa fast bowler Dale Steyn today (August 31) stormed back to the number-one position in the ICC Player Rankings for Test Bowlers after producing a match-winning performance in the Centurion Test that helped his side complete a 204-run victory over New Zealand on Tuesday (August 30).
Please Wait while comments are loading...