ಸಮಾಜವಾದಿ ಪಕ್ಷದ ಪರ ಪ್ರವೀಣ್ ಬೌಲಿಂಗ್ ಶುರು

Posted By:
Subscribe to Oneindia Kannada

ಲಕ್ನೋ, ಸೆ. 11: ಟೀಂ ಇಂಡಿಯಾದ ಹಿರಿಯ ಕ್ರಿಕೆಟರ್ ಪ್ರವೀಣ್ ಕುಮಾರ್ ಅವರು ಹೊಸ ಸ್ಪೆಲ್ ಆರಂಭಿಸಿದ್ದಾರೆ. ಕ್ರಿಕೆಟ್ ಮೈದಾನದಿಂದ ರಾಜಕೀಯ ಅಂಗಳಕ್ಕೆ ಧುಮುಕಿದ್ದಾರೆ ಎಂಬ ಸುದ್ದಿ ಬಂದಿದೆ.

ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಪರ ಬೌಲಿಂಗ್ ಆರಂಭಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 29 ವರ್ಷ ವಯಸ್ಸಿನ ಮಧ್ಯಮ ವೇಗದ ಬೌಲರ್ ಅವರು ಆಡಳಿತಾರೂಢ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ಮೀರತ್ ನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಖುದ್ದು ಪ್ರವೀಣ್ ಕುಮಾರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ.

Cricketer Praveen Kumar joins Samajwadi Party in UP

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2016 ರಲ್ಲಿ ಸುರೇಶ್ ರೈನಾ ನೇತೃತ್ವದ ಗುಜರಾತ್ ಲಯನ್ಸ್ ತಂಡದ ಪರ ಪ್ರವೀಣ್ ಕುಮಾರ್ ಆಡಿದ್ದರು.

ಭಾರತದ ಪರ 6 ಟೆಸ್ಟ್ ಪಂದ್ಯ ಹಾಗೂ 68 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಿರುವ ಪ್ರವೀಣ್ ಕುಮಾರ್ ಅವರು ಕ್ರಮವಾಗಿ 27 ಹಾಗೂ 77 ವಿಕೆಟ್ ಗಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಸೆಲೆಬ್ರಿಟಿಗಳನ್ನು ಸೆಳೆಯುವ ತಂತ್ರ ಜಾರಿಯಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Senior India cricketer Praveen Kumar is all set to start another innings after the pacer joined Samajwadi Party in Uttar Pradesh, media reports claimed on Sunday (Sep 11).
Please Wait while comments are loading...