ನವಜಾತ ಶಿಶು ಕಂಡು ಮೂಕವಿಸ್ಮಿತನಾದ ವೇಗಿ ಇರ್ಫಾನ್!

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 20: ಹಿರಿಯ ಆಲ್ ರೌಂಡರ್ ಇರ್ಫಾನ್ ಪಠಾಣ್ ಅವರ ಪತ್ನಿ ಸಾಫಾ ಬೇಗ್ ಅವರು ಗಂಡು ಮಗು ಜನ್ಮವಿತ್ತಿದ್ದಾರೆ. ನವಜಾತ ಶಿಶುವನ್ನು ಕಂಡು ಖುಷಿಯಿಂದ ನಾನು ಮೂಕವಿಸ್ಮಿತನಾಗಿದ್ದೇನೆ, ಇಂಥ ಸಂತಸವನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಬರೋಡಾದ 32 ವರ್ಷ ವಯಸ್ಸಿನ ಆಲ್ ರೌಂಡರ್ ಇರ್ಫಾನ್ ಪಠಾಣ್ ಅವರು ಟ್ವಿಟ್ಟರ್ ಮೂಲಕ ಮಂಗಳವಾರ(ಡಿಸೆಂಬರ್ 20) ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ.ಕಳೆದ ಫೆಬ್ರವರಿ ತಿಂಗಳಿನಲ್ಲಿ ಇರ್ಫಾನ್ ಮದುವೆಯಾಗಿದ್ದರು. [ಇರ್ಫಾನ್ ಪಠಾಣ್- ಸಫಾ ಶಾದಿ ಮುಬಾರಕ್!]

Cricketer Irfan Pathan becomes a proud father, blessed with a baby boy

ಸೌದಿ ಅರೇಬಿಯಾದ ಮೂಲದ ಸಫಾ ಬೇಗ್ (21) ಅವರನ್ನು ಎರಡು ವರ್ಷಗಳ ಹಿಂದೆ ಪಠಾಣ್ ಮೊದಲ ಬಾರಿಗೆ ದುಬೈನಲ್ಲಿ ಭೇಟಿ ಮಾಡಿದ್ದರು. ನಂತರ ಇಬ್ಬರಲ್ಲಿ ಆತ್ಮೀಯತೆ ಬೆಳೆದು, ಪ್ರೀತಿಸಲು ಆರಂಭಿಸಿದ್ದರು. ಮೂರು ತಿಂಗಳ ಹಿಂದೆ ಇವರಿಬ್ಬರ ವಿವಾಹ ನಿಶ್ಚಯವಾಗಿತ್ತು. ಫೆಬ್ರವರಿ 04, 2016ರಂದು ಮದುವೆಯಾಗಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡುತ್ತಿದ್ದ ಇರ್ಫಾನ್ ರನ್ನು ಮುಂದಿನ ಅವಧಿಗೆ ಉಳಿಸಿಕೊಂಡಿಲ್ಲ. ಹೀಗಾಗಿ ಮುಂದಿನ ಹರಾಜು ಪ್ರಕ್ರಿಯೆಗೆ ಲಭ್ಯರಾಗಿರುತ್ತಾರೆ.

ಇರ್ಫಾನ್ ಆಡುವ ಬರೋಡಾ ತಂಡ ಪ್ರಸಕ್ತ ಋತುವಿನ ರಣಜಿ ಕ್ವಾರ್ಟರ್ ಫೈನಲ್ ತಲುಪಲು ವಿಫಲವಾಗಿದೆ. ಟೀಂ ಇಂಡಿಯಾ ಪರ ಏಪ್ರಿಲ್ 2008ರಲ್ಲಿ ಟೆಸ್ಟ್ ಪಂದ್ಯವಾಡಿದ್ದ ಇರ್ಫಾನ್ 2003/4ರ ಸರಣಿಯಲ್ಲಿ ಮೊದಲ ಬಾರಿಗೆ ಆಡಿದ್ದು 29 ಟೆಸ್ಟ್ ಪಂದ್ಯಗಳಿಂದ 100 ವಿಕೆಟ್ ಪಡೆದುಕೊಂಡಿದ್ದಾರೆ.

2012ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. 173 ವಿಕೆಟ್ ಹಾಗೂ 1544ರನ್ ಗಳಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Senior India all-rounder Irfan Pathan and his wife Safa Baig have welcomed a baby boy into their lives.
Please Wait while comments are loading...