ಹಲ್ಲೆ ಪ್ರಕರಣ: ಸ್ಪಿನ್ನರ್ ಅಮಿತ್ ಮಿಶ್ರಾಗೆ ಮತ್ತೆ ಸಂಕಟ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 23: ಬಾಲಿವುಡ್ ನಿರ್ಮಾಪಕಿ, ಗೆಳತಿ ವಂದನಾ ಜೈನ್ ಅವರ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತಿರುವ ಕ್ರಿಕೆಟರ್ ಅಮಿತ್ ಮಿಶ್ರಾ ಅವರಿಗೆ ಮತ್ತೆ ಸಂಕಟ ಶುರುವಾಗಿದೆ. ಈ ಪ್ರಕರಣದ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿದೆ.

ನ್ಯಾ. ಆನಂದಬೈರಾ ರೆಡ್ಡಿ ಅವರಿದ್ದ ನ್ಯಾಯಪೀಠ ಮಂಗಳವಾರ ತಡೆಯಾಜ್ಞೆಯನ್ನು ತೆರವುಗೊಳಿಸಿ, ತನಿಖೆ ಮುಂದುವರೆಸಲು ಆದೇಶಿಸಿದ್ದಾರೆ. ಕ್ರಿಕೆಟರ್ ಅಮಿತ್ ಮಿಶ್ರಾ ವಿರುದ್ಧ ಅಶೋಕನಗರ ಪೊಲೀಸರು ಈಗಾಗಲೇ ಚಾರ್ಜ್ ಶೀಟ್ ಹಾಕಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಮ್ಮೆ ಮಿಶ್ರಾರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ನಂತರ ಮಿಶ್ರಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. [ಸ್ಪಿನ್ನರ್ ಅಮಿತ್ ಮಿಶ್ರಾ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ]

India spinner Amit Mishra will now stand trial in assault case


ಅಮಿತ್ ಮಿಶ್ರಾ ಅವರು ಗೆಳತಿಯೂ ಆಗಿರುವ ಬಾಲಿವುಡ್ ನಿರ್ಮಾಪಕಿ ವಂದನಾ ಅವರು ತಮ್ಮ ಮೇಲೆ ಬೆಂಗಳೂರಿನ ಹೋಟೆಲ್ ನಲ್ಲಿ ಮಿಶ್ರಾ ಹಲ್ಲೆ ಮಾಡಿದ್ದಾರೆ ಎಂದು ಅಶೋಕ್ ನಗರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಐಪಿಸಿ ಸೆಕ್ಷನ್ 354, 323 ಹಾಗೂ 325ರ ಅನ್ವಯ ಪ್ರಕರಣ ದಾಖಲಿಸಿಕೊಂಡು, ಎಫ್ ಐಆರ್ ಹಾಕಿದ್ದರು

ಸೆಪ್ಟೆಂಬರ್ 21 ರಿಂದ 27ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾದ ಟೂರ್ನಿಗೆ ಆಯ್ಕೆಯಾಗುವುದಕ್ಕೂ ಮುನ್ನಾ ಬೆಂಗಳೂರಿನ ಎನ್ ಸಿಎಯಲ್ಲಿ ಅಭ್ಯಾಸಕ್ಕೆಂದು ಮಿಶ್ರಾ ಅವರು ಬಂದಿದ್ದ ಸಮಯದಲ್ಲಿ ರಿಟ್ಜ್ ಕಾರ್ಲಟನ್ ಹೋಟೆಲ್ ನಲ್ಲಿ ಹಲ್ಲೆ ನಡೆದಿತ್ತು ಎಂದು ವಂದನಾ ಆರೋಪಿಸಿದ್ದರು.

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಯಲ್ಲಿ ಅಮಿತ್ ಮಿಶ್ರಾ ಅವರು ಆಡುತ್ತಿದ್ದು, ನವೆಂಬರ್ 26ರಂದು ಮೊಹಾಲಿಯಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian cricketer Amit Mishra will have to face trial in an assault case. he will now need to be present before the trial court which will try him in the assault case.
Please Wait while comments are loading...