'ದಿಗ್ಗಜರ ಸಾಲಿಗೆ ನಿಂತ ಕರುಣ್ ರಕ್ತದಲ್ಲೇ ಕ್ರಿಕೆಟ್ ಹರಿಯುತ್ತಿದೆ'

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 19: ಚೊಚ್ಚಲ ತ್ರಿಶತಕ ಸಿಡಿಸಿ ದಿಗ್ಗಜರ ಸಾಲಿನಲ್ಲಿ ನಿಂತ ಮಗ ಕರುಣ್ ಸಾಧನೆ ಬಗ್ಗೆ ಅಪ್ಪ ಕಲಾಧರನ್ ನಾಯರ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಕರುಣ್ 10 ವಯಸ್ಸಿನವನಿದ್ದಾಗಿನಿಂದ ಕ್ರಿಕೆಟ್ ಬಿಟ್ಟರೆ ಬೇರೆ ಧ್ಯಾನ ಮಾಡುತ್ತಿರಲಿಲ್ಲ. ಕರುಣ್ ಸಾಧನೆ ಬಗ್ಗೆ ಹೆಮ್ಮೆಯಿದೆ ಎಂದಿದ್ದಾರೆ.

ಎಂಎ ಚಿದಂಬರ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಕರುಣ್ ನಾಯರ್ ಅಜೇಯ ತ್ರಿಶತಕ ಬಾರಿಸಿದರು. ಈ ಮೂಲಕ ಅನೇಕ ದಾಖಲೆಗಳನ್ನು ಮುರಿದರು.[303ರನ್ ಬಾರಿಸಿ, ಕರುಣ್ ಮುರಿದ ದಾಖಲೆಗಳು ಒಂದಾ, ಎರಡಾ!]

ಚೊಚ್ಚಲ ಶತಕವನ್ನು ತ್ರಿಶತಕವಾಗಿ ಪರಿವರ್ತಿಸಿದ ವಿಶ್ವದ ಮೂರನೇ ಹಾಗೂ ಭಾರತದ ಮೊದಲ ಕ್ರಿಕೆಟರ್ ಎನಿಸಿಕೊಂಡರು. ಈ ಮುಂಚೆ ಇಂಥ ಸಾಧನೆಯನ್ನು ವೆಸ್ಟ್ ಇಂಡೀಸ್ ನ ಗ್ಯಾರಿ ಸೋಬರ್ಸ್ ಹಾಗೂ ಆಸ್ಟ್ರೇಲಿಯಾದ ಬಾಬ್ ಸಿಂಪ್ಸನ್ ಮಾತ್ರ ಮಾಡಿದ್ದರು. ಇದಲ್ಲದೆ ಭಾರತದ ಪರ ಶತಕ ಸಿಡಿಸಿದ ಮೊದಲ ಮಲಯಾಳಿ ಎನಿಸಿಕೊಂಡಿದ್ದಾರೆ. [ತ್ರಿಶತಕ ಕ್ಲಬ್: ಸೆಹ್ವಾಗ್ ಜತೆ ಸೇರಿಕೊಂಡ ಕರುಣ್ ನಾಯರ್!]

2016ರ ಜೂನ್ ತಿಂಗಳಿನಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು.

ನವೆಂಬರ್ 26, 2016ರಂದು ಮೊಹಾಲಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡಿದ್ದರು. ಮೂರನೇ ಟೆಸ್ಟ್ ಪಂದ್ಯದಲ್ಲೇ, ಮೊದಲ ಟೆಸ್ಟ್ ಸರಣಿಯಲ್ಲೇ, ಅತಿ ಕಡಿಮೆ ಇನ್ನಿಂಗ್ಸ್ ಗಳಲ್ಲೇ ತ್ರಿಶತಕ ಗಳಿಸಿದ ಸಾಧನೆ ಕರುಣ್ ಅವರ ಹೆಸರಿನಲ್ಲಿ ಬರೆಯಲಾಗಿದೆ.

ಕೇರಳ ಮೂಲದ ಬೆಂಗಳೂರು ನಿವಾಸಿ

ಕೇರಳ ಮೂಲದ ಬೆಂಗಳೂರು ನಿವಾಸಿ

ಕೇರಳ ಮೂಲ: ರಾಜಸ್ಥಾನದ ಜೋಧ್ ಪುರ್ ದಲ್ಲಿ ಜನಿಸಿ, ಕರ್ನಾಟಕದ ಪರ ರಣಜಿ ಆಡುವ ಕರುಣ್ ನಾಯರ್ ಅವರ ಕುಟುಂಬದ ಮೂಲ ಕೇರಳದ ಆಳಪುಳ ಜಿಲ್ಲೆಯ ಚೆಂಗನೂರ್.

ಮೈದಾನದಲ್ಲಿ ಉಪಸ್ಥಿತರಿದ್ದ ಕರುಣ್ ಅವರ ತಂದೆ, ತಾಯಿ

ಮೈದಾನದಲ್ಲಿ ಉಪಸ್ಥಿತರಿದ್ದ ಕರುಣ್ ಅವರ ತಂದೆ, ತಾಯಿ, ಪಂದ್ಯದ ನಂತರ ಕರುಣ್ ರನ್ನು ಭೇಟಿ ಮಾಡದೆ ಹೋಟೆಲ್ ರೂಮಿನಲ್ಲೇ ಸಂಭ್ರಮಿಸುವುದಾಗಿ ಹೇಳಿದರು. ಕರುಣ್ ಜತೆ ಸಹ ಆಟಗಾರರು ಸಂಭ್ರಮಾಚರಣೆಯಲ್ಲಿ ತೊಡಗಲು ಅವಕಾಶ ಸಿಗಲಿ ಎಂಬುದು ನಮ್ಮ ಉದ್ದೇಶ ಎಂದು ಕರುಣ್ ಅವರ ತಂದೆ ಹೇಳಿದರು.

ದುರಂತದಿಂದ ಪಾರಾಗಿದ್ದ ಕರುಣ್

ದುರಂತದಿಂದ ಪಾರಾಗಿದ್ದ ಕರುಣ್

ಜುಲೈ ತಿಂಗಳಲ್ಲಿ ಕೇರಳದಲ್ಲಿ ಶ್ರೀ ಪಾರ್ಥ ಸಾರಥಿ ದೇಗುಲ 'ವಲ್ಲ ಸದ್ಯ' ಸಂಭ್ರಮಾಚರಣೆ ವೇಳೆಯಲ್ಲಿ ಕರುಣ್ ಹಾಗೂ 100 ಜನರಿದ್ದ ದೋಣಿ ಮಗುಚಿಕೊಂಡಿತ್ತು. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗದಂತೆ ಸ್ಥಳೀಯರು ರಕ್ಷಣೆ ಮಾಡಿದ್ದರು.

'ಐದು ವರ್ಷಗಳ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಉತ್ತಮ ಸಾಧನೆ ತೋರಿದ್ದಾನೆ. ರಣಜಿಯಲ್ಲಿ ಎರಡು ವರ್ಷ ತೋರಿದ ಸಾಧನೆ ಇಂದು ಈ ಮಟ್ಟಕ್ಕೆ ಅವನನ್ನು ಬೆಳೆಸಿದೆ' ಎಂದು ನಾಯರ್ ಹೇಳಿದರು.

ಕೇರಳದ ಸಂಪರ್ಕವುಳ್ಳ ಇತರೆ ಆಟಗಾರರು

ಕೇರಳದ ಸಂಪರ್ಕವುಳ್ಳ ಇತರೆ ಆಟಗಾರರು

ಇಲ್ಲಿ ತನಕ ಟಿನು ಯೋಹನನ್ ಹಾಗೂ ಎಸ್ ಶ್ರೀಶಾಂತ್ ಮಾತ್ರ ಕೇರಳ ಮೂಲದ ಆಟಗಾರರು ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಉಳಿದಂತೆ ಸುನಿಲ್ ವಿಲ್ಸನ್, ಅಜಯ್ ಜಡೇಜ ಹಾಗೂ ಅಬೇ ಕುರುವಿಲ್ಲಾ ಅವರು ಕೇರಳದ ಸಂಪರ್ಕವುಳ್ಳ ಇತರೆ ಆಟಗಾರರಾಗಿದ್ದಾರೆ

ಪೋಷಕರ ಜತೆ ಸಂಭ್ರಮದಲ್ಲಿ ಕರುಣ್ ನಾಯರ್

ಪೋಷಕರ ಜತೆ ಸಂಭ್ರಮದಲ್ಲಿರುವ ಕರುಣ್ ನಾಯರ್, ಆರ್ ಅಶ್ವಿನ್ ಕೂಡಾ ಶುಭ ಹಾರೈಸಲು ಬಂದಿದ್ದು ವಿಶೇಷ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"Cricket was in his blood from age 10," an exhilarated Kaladharan Nair said as records tumbled before his 25-year-old son, Karun Nair, at the M.A. Chidambaram Stadium here on Monday.
Please Wait while comments are loading...