ತವರಿನಲ್ಲಿ ಕ್ರಿಸ್ ಗೇಲ್ ತ್ವರಿತಗತಿ ಟಿ20 ಶತಕ!

Posted By:
Subscribe to Oneindia Kannada

ಪೋರ್ಟ್ ಆಫ್ ಸ್ಪೇನ್ (ಟ್ರಿನಿಡಾಡ್), ಜುಲೈ 05: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಕ್ರಿಸ್ ಗೇಲ್ ಅವರು ತವರಿನಲ್ಲಿ ಈಗ ಟಿ20 ಟೂರ್ನಿಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಕೆರಿಬಿಯನ್ ಕ್ರಿಕೆಟ್ ಲೀಗ್ (ಸಿಪಿಎಲ್) ನಲ್ಲಿ ದಾಖಲೆಗಳ ಧೂಳಿಪಟವಾಗುತ್ತಿದ್ದು, ಸೋಮವಾರ ರಾತ್ರಿ ಕೂಡಾ ಗೇಲ್ ಅವರು 54 ಎಸೆತಗಳಲ್ಲಿ ಅಜೇಯ ಶತಕ ಸಿಡಿಸಿದ್ದಾರೆ.

ಜೆಮೈಕಾ ತಲ್ಲಾವಾಸ್ ಪರ ಆಡುವ ಕ್ರಿಸ್ ಗೇಲ್ ಅವರು 54 ಎಸೆತಗಳಲ್ಲಿ ಅಜೇಯ 108 ರನ್ ಗಳಿಸುವ ಮೂಲಕ ಟ್ರಿನಿಡಾಡ್ ನೈಟ್ ರೈಡರ್ಸ್(ಶಾರುಖ್ ಖಾನ್ ಒಡೆತನದ ತಂಡ) ವಿರುದ್ಧ 7 ವಿಕೆಟ್ ಗಳ ಜಯ ದಾಖಲಿಸಲು ನೆರವಾದರು.

CPL: Chris Gayle smashes 54-ball 108* with 11 sixes as Jamaica Tallawahs win

ಕ್ವೀನ್ಸ್ ಪಾರ್ಕ್ ಒವಲ್ ನಲ್ಲಿ ನಡೆದ ಪಂದ್ಯದಲ್ಲಿ ಗೇಲ್ ಅವರು 11 ಸಿಕ್ಸ್ ಹಾಗೂ 6 ಬೌಂಡರಿ ಬಾರಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಈ ಮೂಲಕ ಟ್ರಿನಿಡಾಡ್ ನೀಡಿದ್ದ 191ರನ್ ಗಳ ಗುರಿಯನ್ನು 18.2 ಓವರ್ ಗಳಲ್ಲಿ 192ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಇದು ಟಿ20 ಮಾದರಿಯಲ್ಲಿ ಗೇಲ್ ಅವರ 18ನೇ ಶತಕವಾಗಿದೆ.ಟ್ರಿನಿಡಾಡ್ ಪರ ದಕ್ಷಿಣ ಆಫ್ರಿಕಾದ ಹಶೀಂ ಅಮ್ಲಾ ಅವರು 74ರನ್ ಹಾಗೂ ಕಾಲಿನ್ ಮನ್ರೋ ಅವರು 55ರನ್ ಗಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chris Gayle blasted an unbeaten 54-ball 108 to lead Jamaica Tallawahs to a 7-wicket victory over Trinbago Knight Riders in the Caribbean Premier League (CPL) Twenty20 tournament last night (July 4).
Please Wait while comments are loading...