ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರ್ಭಜನ್, ಅಶ್ವಿನ್ ಇಬ್ಬರು ಚಕ್ಕರ್ಸ್ ಎಂದ ಪಾಕಿಸ್ತಾನಿ

By Mahesh

ಬೆಂಗಳೂರು, ನ.03: ಟೀಂ ಇಂಡಿಯಾದ ಪ್ರಮುಖ ಆಫ್ ಸ್ಪಿನ್ನರ್ ಗಳಾದ ಹರ್ಭಜನ್ ಸಿಂಗ್ ಹಾಗೂ ಆರ್ ಅಶ್ವಿನ್ ಇಬ್ಬರು 'ಚಕ್ಕರ್ಸ್', ಇಬ್ಬರ ಬೌಲಿಂಗ್ ಶೈಲಿಯಲ್ಲೂ ದೋಷವಿದೆ. ಅದರೆ, ಈ ಬಗ್ಗೆ ಅರಿವಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸುಮ್ಮನಿದೆ ಎಂದು ಪಾಕಿಸ್ತಾನ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ ಆರೋಪಿಸಿದ್ದಾರೆ.

38 ವರ್ಷ ವಯಸ್ಸಿನ ಸಯೀದ್ ಅಜ್ಮಲ್ ಅವರನ್ನು ಅನುಮಾನಾಸ್ಪದ ಶೈಲಿಯ ಬೌಲಿಂಗ್ ಎಂಬ ಆರೋಪದ ಮೇಲೆ ಐಸಿಸಿ ಅವರಿಗೆ ಬೌಲಿಂಗ್ ಮಾಡದಂತೆ ನಿಷೇಧ ಹೇರಿದೆ. ಇದಾದ ಬಳಿಕ ತಮ್ಮ ಬೌಲಿಂಗ್ ಶೈಲಿ ಬದಲಿಸಿಕೊಂಡು ಮತ್ತೆ ಕಣಕ್ಕಿಳಿಯಲು ಅಜ್ಮಲ್ ಸಜ್ಜಾಗಿದ್ದಾರೆ. ಅದರೆ, ಇಂಗ್ಲೆಂಡ್ ವಿರುದ್ಧ ಆಡುತ್ತಿರುವ ಪಾಕಿಸ್ತಾನ ತಂಡಕ್ಕೆ ಆಯ್ಕೆಯಾಗಿಲ್ಲ.

Controversy: Saeed Ajmal calls Harbhajan Singh, R Ashwin 'chuckers'

ಪಾಕಿಸ್ತಾನಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಜ್ಮಲ್ ಮಾತನಾಡಿ, ಐಸಿಸಿ ನಿಯಮಾವಳಿಗಳು ಯಾವಾಗಲೂ ಏಕಪಕ್ಷೀಯವಾಗಿರುತ್ತದೆ. ಅದರಲ್ಲೂ ಪಾಕಿಸ್ತಾನಿ ಬೌಲರ್ಸ್ ಗಳನ್ನು ಟಾರ್ಗೆಟ್ ಮಾಡಲಾಗುತ್ತದೆ. 15 ಡಿಗ್ರಿ ಬೌಲಿಂಗ್ ನಿಯಮ ಪಾಕಿಸ್ತಾನಿ ಬೌಲರ್ ಗಳಿಗೆ ಮಾತ್ರ ಅನ್ವಯಿಸುವುದೇ? ಹರ್ಭಜನ್ ಹಾಗೂ ಅಶ್ವಿನ್ ಅವರಿಗೆ ಹೇಗೆ 15 ಡಿಗ್ರಿ ಕೈ ಬಗ್ಗಿಸಲು ಅನುಮತಿ ಸಿಕ್ಕಿದೆ? ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನದ ಬಿಲಾಲ್ ಆಸೀಫ್ ಅವರು ಜಿಂಬಾಬ್ವೆ ವಿರುದ್ಧ 5/25 ವಿಕೆಟ್ ಪಡೆದುಕೊಂಡಿದ್ದರು. ಆದರೆ, ತಮ್ಮ ಎರಡನೇ ಏಕದಿನ ಪಂದ್ಯದಲ್ಲೇ ಅನುಮಾನಸ್ಪದ ಬೌಲಿಂಗ್ ಶೈಲಿ ಆರೋಪ ಎದುರಿಸಿದರು. ಇದನ್ನು ಉದಾಹರಿಸಿ ಮಾತನಾಡಿದ ಅಜ್ಮಲ್, ಹರ್ಭಜನ್ ಸಿಂಗ್ ಯಾವಾಗಲೂ 60 ಡಿಗ್ರಿ ಬಗ್ಗಿಸಿ ಎಸೆಯುತ್ತಾರೆ. ಅದರೆ, ಅವರಿಗೆ ಅನುಮತಿ ಹೇಗೆ ಸಿಕ್ಕಿದೆ ಎಂದು ಕೇಳಿದ್ದಾರೆ.

ಹರ್ಭಜನ್ ಸಿಂಗ್ 103 ಟೆಸ್ಟ್, 236 ಏಕದಿನ ಕ್ರಿಕೆಟ್, 27 ಟಿ20 ಪಂದ್ಯಗಳನ್ನಾಡಿ, 417 ಟೆಸ್ಟ್, 269 ಏಕದಿನ ಕ್ರಿಕೆಟ್, 24 ಟಿ20 ವಿಕೆಟ್ ಪಡೆದಿದ್ದಾರೆ. ಅಜ್ಮಲ್ ಅವರು 35 ಟೆಸ್ಟ್ ಗಳಲ್ಲಿ 178ವಿಕೆಟ್, 113 ಏಕದಿನ ಪಂದ್ಯಗಳಲ್ಲಿ 184 ವಿಕೆಟ್ ಹಾಗೂ 64 ಪಂದ್ಯಗಳಲ್ಲಿ 85 ಟಿ20 ವಿಕೆಟ್ ಪಡೆದಿದ್ದಾರೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X