ರಾಹುಲ್ ಖಾತೆ ನಂತರ ಕಾಂಗ್ರೆಸ್ ಟ್ವಿಟ್ಟರ್ ಖಾತೆಗೂ ಕನ್ನ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 01: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಗೆ ಹ್ಯಾಕರ್ಸ್ ಕನ್ನ ಹಾಕಿದ ಬೆನ್ನಲ್ಲೇ ಕಾಂಗ್ರೆಸ್ಸಿನ ಅಧಿಕೃತ ಖಾತೆಗೆ ಕನ್ನ ಹಾಕಲಾಗಿತ್ತು. ಆದರೆ, ತಕ್ಷಣವೇ ಟ್ವಿಟ್ಟರ್ ಖಾತೆಯನ್ನು ಪುನರ್ ಸ್ಥಾಪಿಸಲಾಗಿದೆ.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿ ನಿಂದನಾತ್ಮಕ ಟ್ವೀಟ್ ಗಳನ್ನು ಹಾಕಲಾಗಿತ್ತು. ಸರಣಿ ಟ್ವೀಟ್ ಗಳಲ್ಲಿ ಅಸಂವಿಧಾನಾತ್ಮಕ ಪದಗಳನ್ನು ಬಳಕೆ ಮಾಡಲಾಗಿತ್ತು. [ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆಗೆ ಹ್ಯಾಕರ್ಸ್ ಕನ್ನ]

Congress' Twitter handle hacked, retrieved

ರಾಹುಲ್‌ ಗಾಂಧಿ ಹಾಗೂ ಅವರ ಕುಟುಂಬದ ಬಗ್ಗೆ ಕೆಲ ನಿಂದನಾತ್ಮಕ ಟ್ವೀಟ್ ಮಾಡಲಾಗಿತ್ತು. ರಾಹುಲ್ ಗಾಂಧಿ ಟ್ವೀಟರ್‌ ಬಳಸಿ "ನನ್ನ ಕುಟುಂಬ ಭ್ರಷ್ಟ" ಎಂದು ಬರೆಯಲಾಗಿತ್ತು. ಜತೆಗೆ 'We are legion' ಎಂದು ಬರೆಯಲಾಗಿತ್ತು. ಇದಾದ ಬಳಿಕ ನಿಂದನಾತ್ಮಕ ಟ್ವೀಟ್ ಗಳನ್ನು ಡಿಲೀಟ್ ಮಾಡಿ ಖಾತೆಯನ್ನು ಪುನಃ ಸಮಸ್ಥಿತಿಗೆ ತರಲಾಗಿತ್ತು. ಈ ಬಗ್ಗೆ ಸೈಬರ್ ಪೊಲೀಸರಿಗೆ ಕಾಂಗ್ರೆಸ್ ದೂರು ನೀಡಲು ಮುಂದಾಗಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Twitter account of the Congress party has been hacked. The incident comes just a day after the Twitter account of Congress Vice President Rahul Gandhi had been hacked. The account has now been retrieved.
Please Wait while comments are loading...