ಕೊಹ್ಲಿ ಸೇರಿ ಟೀಂ ಇಂಡಿಯಾ ಆಟಗಾರರ ವಿರುದ್ಧ ದೂರು

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮೊಹಾಲಿ, ಮಾರ್ಚ್ 31: ವಿಶ್ವ ಟಿ20 ಕ್ರಿಕೆಟ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಇತರೆ ಆಟಗಾರರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ದೇಶದ ಪರ ಆಡುವ ಆಟಗಾರರು ಮಾಡಿದ ತಪ್ಪಾದ್ರೂ ಏನು? ಕೇಸ್ ದಾಖಲಾಗಿದ್ದು ಯಾಕೆ? ತಿಳಿಯಲು ಮುಂದೆ ಓದಿ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಮಾರ್ಚ್ 27 ರಂದು ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದು ಕೊಟ್ಟ ವಿರಾಟ್ ಕೊಹ್ಲಿ ಈಗ ಒಂದು ವಿವಾದಲ್ಲಿ ಸಿಲುಕಿಕೊಂಡಿದ್ದಾರೆ. ಹೌದು ಫಿಲ್ಮ್ ಮೇಕರ್ ಹಾಗೂ ಸಾಮಾಜಿಕ ಕಾರ್ಯಕರ್ತ ಪಿ. ಉಲ್ಲಾಸ್ ಎನ್ನವರು ವಿರಾಟ್ ಸೇರಿದಂತೆ ಟೀಂ ಇಂಡಿಯಾದ ಕೆಲ ಆಟಗಾರರ ಮೇಲೆ ಪೊಲೀಸ್ ಕೇಸ್ ದಾಖಲಿಸಿದ್ದಾರೆ. [ಮಾತು ಉಳಿಸಿಕೊಂಡ ಬಿಗ್ ಬಿ, ಆಫರ್ ರಿಜೆಕ್ಟ್ ಮಾಡಿದ ಗೇಲ್!]

Complaint Lodged Against Virat Kohli Tri-Colour On Players' Helmets

ಕೊಹ್ಲಿ ಮತ್ತು ಇತರೆ ಆಟಗಾರರು ತಮ್ಮ ಹೆಲ್ಮೆಟ್ ಮೇಲೆ ಭಾರತದ ತ್ರಿವರ್ಣ ಧ್ವಜದ ಸ್ಟಿಕರ್ ಹಾಕಿಕೊಂಡಿರುವುದು ಕಾನೂನಿನ ಪ್ರಕಾರ ತಪ್ಪು, ಇದರಿಂದ ದೇಶಕ್ಕೆ ಅಗೌರವ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲಾಸ್ ಉಲ್ಲೇಖಿಸಿದ್ದಾರೆ.[ವಿವಾದದಲ್ಲಿ ಬಾಲಿವುಡ್ ಸ್ಟಾರ್ ಬಿಗ್ ಬಿ!]

ಈ ಹಿಂದೆ ನಾಯಕ ಧೋನಿ ಅವರು ತಮ್ಮ ಹೆಲ್ಮೆಟ್ ಮೇಲೆ ಭಾರತ ಧ್ವಜದ ಚಿಹ್ನೆಯನ್ನು ಹಾಕಿಕೊಳ್ಳುತ್ತಿದ್ದರು, ಆದರೆ ಅದನ್ನು ಈಗ ಧೋನಿ ಬಾರತದ ತ್ರಿವರ್ಣ ಧ್ವಜದ ಸ್ಟಿಕರ್ ಬಳಸುತ್ತಿಲ್ಲ ಆದ್ದರಿಂದ ಅವರ ಮೇಲೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಕೊಲ್ಕತ್ತಾದಲ್ಲಿ ನಡೆದ ಭಾರತ ಮತ್ತು ಪಾಕ್ ಪಂದ್ಯಕ್ಕೂ ಮುನ್ನದ ಅಮಿತಾಬ್ ಬಚ್ಚನ್ ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿದ್ದಾರೆಂದು ಇದೆ ಪಿ. ಉಲ್ಲಾಸ ಅವರು ಬಿಗ್ ಬಿ ವಿರುದ್ಧ ದೂರು ನೀಡಿದ್ದರು. ಈಗ ಟೀಂ ಇಂಡಿಯಾದ ಮೇಲೆ ದೂರು ನೀಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Complaint Lodged Against The Use Of Indian Tri-Colour On Players' Helmets Complaint Lodged Against The Use Of Indian Tri-Colour On Players' Helmets During World T20!
Please Wait while comments are loading...