ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ನಲ್ಲಿ ಬರಲಿದೆ ರೆಡ್ ಕಾರ್ಡ್ ನಿಯಮ

By ರಮೇಶ್ ಬಿ

ಲಂಡನ್, ಫೆ 11. ಕ್ರಿಕೆಟ್ ನಲ್ಲಿ ನಡೆಯುತ್ತಿರುವ ವಾದ-ವಿವಾದಗಳನ್ನು ತಡೆಗಟ್ಟುವ ಉದ್ದೇಶದಿಂದ ಇನ್ನು ಮುಂದೆ ಕ್ರಿಕೆಟ್ ಆಡುವ ವೇಳೆ ಅಸಭ್ಯವಾಗಿ ವರ್ತಿಸಿದರೆ ಅಂತ ಆಟಗಾರರಿಗೆ ಅಂಪೈರ್ ಗಳು ಕಾರ್ಡ್ ನೀಡಿ ಮೈದಾನದಿಂದ ಹೊರಗಟ್ಟಬಹುದಾಗಿದೆ.

ಫುಟ್ಬಾಲ್ ಮಾದರಿಯಲ್ಲೆ ರೆಡ್ ಕಾರ್ಡ್ ನೀಡಿ ಮೈದಾನದಿಂದ ಹೊರ ಕಳುಹಿಸುವ ಒಂದು ಹೊಸ ನಿಯಮವನ್ನು ಮೆರಿಯನ್ ಬೋರ್ಡ್ ಕ್ರಿಕೆಟ್ ಕ್ಲಬ್(ಎಂಸಿಸಿ) ಜಾರಿಗೆ ತರಲು ಮುಂದಾಗಿದೆ.

Coming soon: Football-style red cards in cricket for bad behaviour

ಹಾಕಿ, ಫುಟ್ ಬಾಲ್, ಕಬಡ್ಡಿ ಇನ್ನೂ ಕೆಲವು ಆಟಗಳಲ್ಲಿ ಆಟಗಾರರು ಅಸಭ್ಯವಾಗಿ ವರ್ತಿಸಿದರೆ ಮೊದಲಿಗೆ ಹಳದಿ ಕಾರ್ಡ್ ಕೊಟ್ಟು ವಾರ್ನಿಂಗ್ ನೀಡಲಾಗುತ್ತೆ ಮತ್ತೆ ಪುನರಾವರ್ತನೆಯಾದರೆ ರೆಡ್ ಕಾರ್ಡ್ ನೀಡಿ ಮೈದಾನನಿಂದ ಹೊರ ಹಾಕಲಾಗುವ ನಿಯಮಗಳು ಜಾರಿಯಲ್ಲಿವೆ. ಇದೆ ನಿಯಮವನ್ನು ಕ್ರಿಕೆಟ್ ಗೆ ಅನ್ವಹಿಸಿ ಅಸಭ್ಯ ವರ್ತನೆಗಳನ್ನು ತಡೆಗಟ್ಟಲು ಎಂಸಿಸಿ ಸಂಸ್ಥೆ ಕ್ರಮ ಕೈಗೊಂಡಿದೆ.

ಭಾರತ ತಂಡದ ಆಫ್ ಸ್ಪಿನ್ನರ್ ಹರ್ಭಜನ್ ಮತ್ತು ಆಸ್ಟೇಲಿಯಾದ ಬ್ಯಾಟ್ಸ್ ಮನ್ ಸೈಮಂಡ್ಸ್ ನಡುವೆ ಮೈದಾನದಲ್ಲಿ ನಡೆದ ಜಗಳ ಡ್ರೆಸಿಂಗ್ ರೂಂವರೆಗೆ ಹೋಗಿ ತೀವ್ರ ಸ್ವರೂಪಕ್ಕೆ ತಿರುಗಿತ್ತು. ಹಾಗು ಕಳೆದ ವರ್ಷ ಇಂಗ್ಲೆಂಡ್ ತಂಡದ ಆಟಗಾರರ ನಡುವಿನ ಜಗಳಗಳಿಂದಾಗಿ ೫ ಪಂದ್ಯಗಳು ರದ್ದುಗೊಂಡಿದ್ದವು. ಇಂತಹ ಅನೇಕ ಜಗಳಗಳು, ಕಪಾಳಮೊಕ್ಷಗಳು ನಡೆಯುತ್ತಿವೆ. ಹೀಗಾಗಿ ಕ್ರಿಕೆಟ್ ನಿಯಮಗಳನ್ನು ರೂಪಿಸುವ ಸಂಸ್ಥೆ(ಎಂಸಿಸಿ) ಹಿರಿಯ ಅಂಪೈರ್ ಗಳ ಜತೆ ಚರ್ಚಿಸಿ ಈ ನಿರ್ಧಾರವನ್ನು ಕೈಗೊಂಡಿದೆ. (ಐಎಎನ್ಎಸ್)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X