ಯೂನಿವರ್ಸ್ ಬಾಸ್ ಗೇಲ್ ಗೆ ಹೀರೋ ರೀತಿ ಸ್ವಾಗತ

Posted By:
Subscribe to Oneindia Kannada

ಚೆನ್ನೈ, ಸೆ. 06: ವೆಸ್ಟ್ ಇಂಡೀಸ್ ನ ದೈತ್ಯ ಬ್ಯಾಟ್ಸ್ ಮನ್, ಯೂನಿವರ್ಸ್ ಬಾಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ಕ್ರಿಸ್ ಗೇಲ್ ಅವರಿಗೆ ಮಂಗಳವಾರ ಇಲ್ಲಿನ ಶಾಲೆಯೊಂದರಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ.

ವೆಲಾಮ್ಮಾಲ್ ಶಾಲೆಯ ಬಳಿ ನೆರೆದಿದ್ದ ನೂರಾರು ಜನ ವಿದ್ಯಾರ್ಥಿಗಳು ಜಮೈಕಾದ ಎಡಗೈ ಬ್ಯಾಟ್ಸ್ ಮನ್ ಗೇಲ್ ರಿಗೆ ಭವ್ಯವಾದ ಸ್ವಾಗತ ನೀಡಿದರು. ಚೆನ್ನೈನ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಜೊತೆ ಗೇಲ್ ಕೆಲ ಹೊತ್ತು ಸಂವಾದ ನಡೆಸಿದರು.

Watch: Chris Gayle gets hero's welcome, Dwayne Bravo dances with female fans in Chennai

ತಮಿಳುನಾಡು ಪ್ರೀಮಿಯರ್ ಲೀಗ್(ಟಿಎನ್ ಪಿಎಲ್) ಟಿ20 ಟೂರ್ನಮೆಂಟ್ ಪ್ರಚಾರಕ್ಕಾಗಿ ಸ್ಟಾರ್ ಆಟಗಾರರನ್ನು ಕರೆಸಲಾಗುತ್ತಿದ್ದು, ವೆಸ್ಟ್ ಇಂಡೀಸ್ ನ ಡ್ವಾಯ್ನೆ ಬ್ರಾವೋ ಹಾಗೂ ಕ್ರಿಸ್ ಗೇಲ್ ಅವರು ತಮಗೆ ಸಿಕ್ಕ ಸ್ವಾಗತದಿಂದ ಥ್ರಿಲ್ ಆಗಿದ್ದಾರೆ.

ಶಾಲಾ ವಿದ್ಯಾರ್ಥಿಗಳು ಡಿಜೆ ಬ್ರಾವೋ ಅವರ ಚಾಂಪಿಯನ್ ಡ್ಯಾನ್ಸ್ ಆಡಿ ಕುಣಿದಾಡಿದರು. ಈ ನಡುವೆ ಸ್ಟೆಲ್ಲಾ ಮೇರಿಸ್ ಕಾಲೇಜಿಗೆ ತೆರಳಿದ್ದ ಬ್ರಾವೋ ಅವರು ಅಲ್ಲಿನ ವಿದ್ಯಾರ್ಥಿನಿಯರ ಜೊತೆ ಕುಣಿದಾಡಿದ ವಿಡಿಯೋವನ್ನು ಟಿಎನ್ ಪಿಎಲ್ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಹಂಚಲಾಗಿದೆ.

ಟಿಎನ್ ಪಿಎಲ್ ಪ್ರಚಾರಕ್ಕಾಗಿ ಬ್ರೆಟ್ ಲೀ, ಮ್ಯಾಥ್ಯೂ ಹೇಡನ್, ಡೀನ್ ಜೋನ್ಸ್ ಮುಂತಾದವರನ್ನು ಕರೆಸಲಾಗಿದೆ. ಟಿಎನ್ ಪಿಎಲ್ ನಲ್ಲಿ ಆರ್ ಅಶ್ವಿನ್, ಮುರಳಿ ವಿಜಯ್, ದಿನೇಶ್ ಕಾರ್ತಿಕ್ ಮುಂತಾದ ಸ್ಟಾರ್ ಆಟಗಾರರಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'Universe Boss' and explosive batsman Chris Gayle was overwhelmed by the hero's welcome he received from hundreds of school students at Velammal in Chennai on Tuesday (Sept 6).
Please Wait while comments are loading...