ಕ್ರಿಸ್ ಗೇಲ್ ವೇಗದ ಶತಕ ದಾಖಲೆ ಪುಡಿ ಪುಡಿ

Subscribe to Oneindia Kannada

ನವದೆಹಲಿ, ಏಪ್ರಿಲ್, 28: ಕ್ರಿಕೆಟ್ ಲೋಕಕ್ಕೆ ಹೊಸ ಸ್ಫೋಟಕ ಆಟಗಾರನ ಆಗಮನವಾಗಿದೆ. ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಅತಿ ವೇಗದ ಶತಕದ ದಾಖಲೆಯನ್ನು ಪುಡಿಮಾಡಿ ಹಾಕಿದ್ದಾನೆ.

ಈತ ಸಹ ವೆಸ್ಟ್ ಇಂಡೀಸ್ ನ ಆಟಗಾರ ಎನ್ನುವುದು ವಿಶೇಷ. ಟ್ರಿನಿಡಾಡ್ ಅಂಡ್ ಟಬೋಗೊ ತಂಡದ ಆಟಗಾರ ಇರಾಕ್ ಥಾಮಸ್ ಟಿ-20 ಕ್ರಿಕೆಟ್'ನಲ್ಲಿ ವೇಗದ ಶತಕವನ್ನು ದಾಖಲಿಸಿದ್ದು ಕೇವಲ 21 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ.[ಶತಕ ದಾಖಲಿಸಲು ಡೆವಿಲಿಯರ್ಸ್ ಗೆ 31 ಬಾಲ್ ಸಾಕು!]

cricket

23 ವರ್ಷದ ಇರಾಕ್ ಥಾಮಸ್ ಭಾನುವಾರ ಟಬ್ಯಾಗೋ ಕ್ರಿಕೆಟ್ ಆಸೋಷಿಯನ್ ಆಯೋಜಿಸಿದ್ದ ಟಿ-20 ಟೂರ್ನಮೆಂಟ್ ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಕೇವಲ 21 ಎಸೆತಗಳಲ್ಲಿ ಶತಕ ಪೂರೈಸಿದರು. ಅಂತಿಮವಾಗಿ ಥಾಮಸ್ 31 ಎಸೆತಗಳಲ್ಲಿ 131 ರನ್ ದಾಖಲಿಸಿ ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡರು.[ಮೆಕಲಮ್ ದಾಖಲೆ ಮುರಿದ ಗೇಲ್ ಈಗ ಟಿ20 'ಸಿಕ್ಸರ್ ಕಿಂಗ್']

2013ರಲ್ಲಿ ಐಪಿಎಲ್ ನಲ್ಲಿ ಆರ್ ಸಿಬಿ ಪರ ಬ್ಯಾಟ್ ಬೀಸಿದ್ದ ಕ್ರಿಸ್ ಗೇಲ್ ಪುಣೆ ವಿರುದ್ಧ 30 ಎಸೆತಗಳಲ್ಲಿ 100 ರನ್ ಗಳಿಸಿದ್ದು ಹಿಂದಿನ ದಾಖಲೆಯಾಗಿತ್ತು. ತಂಡ 150 ರನ್ ಚೇಸಿಂಗ್ ಮಾಡುವ ವೇಳೆ ಏಕಾಂಗಿಯಾಗಿ ಇಷ್ಟು ರನ್ ಬಾರಿಸಿದ ಥಾಮಸ್ ಎಲ್ಲರ ಗಮನ ಸೆಳೆದಿದ್ದಾರೆ. ಇದಕ್ಕೂ ಹಿಂದಿನ ಪಂದ್ಯದಲ್ಲಿ 53 ಎಸೆತ ಎದುರಿಸಿದ್ದ ಥಾಮಸ್ 97 ರನ್ ಗಳಿಸಿ ಮಿಂಚಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Trinidad and Tobago batsman, Iraq Thomas, smashed the fastest Twenty20 century when he reached the feat in just 21 balls, thereby breaking Chris Gayle's record of 30-ball century in T20 cricket. The 23-year-old cricketer from Tobago hit the hundred during a match in the Tobago Cricket Association's T20 tournament.
Please Wait while comments are loading...