ತನ್ನ ಮಗುವಿಗೆ 'ಬ್ಲಶ್' ಎಂದು ಹೆಸರಿಟ್ಟ ಕ್ರಿಸ್ ಗೇಲ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 21: ಸೀಸನ್ ನಿಂದ ತಾತ್ಕಾಲಿಕ ಬ್ರೇಕ್ ಪಡೆದು ಜಮೈಕಾಕ್ಕೆ ಮರಳಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಸಕತ್ ಖುಷಿಯಲ್ಲಿದ್ದಾರೆ. ಗೇಲ್ ದಂಪತಿಗೆ ಮುದ್ದಾ ಹೆಣ್ಣು ಮಗು ಜನಿಸಿದೆ. ತನ್ನ ಮಗುವಿಗೆ 'ಬ್ಲಶ್' ಎಂದು ಹೆಸರಿಟ್ಟಿದ್ದೇವೆ ಎಂದು ಗೇಲ್ ಅವರು ಗುರುವಾರ ಹೇಳಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕ್ರಿಸ್ ಗೇಲ್ ಅವರು ತಮ್ಮ ಸಂಗಾತಿ ನಟಾಶಾ ಬೆರಿಡ್ಜ್ ಅವರು ಫೋಟೊ, ವಿಡಿಯೋ ಹಂಚಿಕೆ ತಾಣ ಇನ್ಸ್ಟಾಗ್ರಾಂ ನಲ್ಲಿ ಜೊತೆಗೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ. [ಗೇಲ್ ಬಗ್ಗೆ ಯಾರು ಮೂಗು ಮುರಿಯುವಂತಿಲ್ಲ]

Chris Gayle names his daughter as 'Blush'


'ನಮ್ಮ ಕುಟುಂಬಕ್ಕೆ ಹೊಸ ಸದಸ್ಯೆಯ ಆಗಮನವಾಗಿದೆ. ನಮ್ಮ ಸುಂದರ ಮಗುವಿಗೆ 'Blush' ಎಂದು ಹೆಸರಿಟ್ಟಿದ್ದೇವೆ. ನನ್ನ ಪತಿ ತಾಶಾ ಶಕ್ತಿಯುತ ಮಹಿಳೆ, ಅಪ್ಪನಾದ ಖುಷಿ ವರ್ಣಿಸಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದಾರೆ. [ಫಾರ್ಮ್ ಕಳಕೊಂಡ ಗೇಲ್ ಬೆನ್ನಿಗೆ ನಿಂತವರು ಯಾರು?]

ಏಪ್ರಿಲ್ 20 ಹಾಗೂ ಏಪ್ರಿಲ್ 22ರ ಪಂದ್ಯಗಳನ್ನು ಮಿಸ್ ಮಾಡಿಕೊಂಡಿರುವ ಗೇಲ್ ಅವರು ಪುನಃ ಐಪಿಎಲ್ ಗೆ ಯಾವಾಗ ಬರುತ್ತಾರೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. [ಶರ್ಟ್ ಕಳಚಿ ಡ್ಯಾನ್ಸ್ ಮಾಡಿದ ಗೇಲ್, ಬ್ರಾವೋ]

ಏಪ್ರಿಲ್ 20ರಂದು ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯವನ್ನು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳಿಂದ ಕಳೆದುಕೊಂಡಿದೆ.

ಏಪ್ರಿಲ್ 22ರಂದು ಪುಣೆ ರೈಸಿಂಗ್ ಜೈಂಟ್ಸ್ ವಿರುದ್ಧ ಆರ್ ಸಿಬಿ ಆಡಲಿದೆ. ಏಪ್ರಿಲ್ 24ರಂದು ಗುಜರಾತ್ ಲಯನ್ಸ್ ತಂಡವನ್ನು ರಾಜ್ ಕೋಟ್ ನಲ್ಲಿ ಎದುರಿಸಲಿದೆ. ಏಪ್ರಿಲ್ 25ರ ವೇಳೆಗೆ ಆರ್ ಸಿಬಿ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ. 'ಸಿರಿ' ಜತೆ 'ಸೆಕ್ಸಿ' ಗೇಲ್ ತುಂಟಾಟ ವಿಡಿಯೋ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Chris Gayle names his daughter as 'Blush' , He is likely to join Royal Challengers Bangalore (RCB) squad from April 25 for IPL 2016.
Please Wait while comments are loading...