ಬಿಗ್ ಬಿ ಅಮಿತಾಬ್ ಗೆ ಅಚ್ಚರಿಯ 'ಗಿಫ್ಟ್' ಕೊಟ್ಟ ಗೇಲ್

Posted By:
Subscribe to Oneindia Kannada

ಮುಂಬೈ, ಫೆ. 28: ವೆಸ್ಟ್ ಇಂಡೀಸ್​ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಬಾಲಿವುಡ್ ನ ಮೆಗಾ ಸ್ಟಾರ್ ಬಿಗ್ ಬಿ ಅಮಿತಾಬ್ ಅವರಿಗೆ ಅಚ್ಚರಿಯ ಉಡುಗೊರೆಯನ್ನು ಕಳಿಸಿದ್ದಾರೆ. ವಿಶೇಷ ಗಿಫ್ಟ್ ಪಡೆದ ಬಿಗ್ ಬಿ ಅವರು ಗೇಲ್ ರನ್ನು ಹಾಡಿ ಹೊಗಳಿದ್ದಾರೆ.

ಕ್ರಿಕೆಟ್ ಅಭಿಮಾನಿಗಳು ಹಾಗೂ ಸಿನಿಮಾ ಅಭಿಮಾನಿಗಳಿಗೆ ಅಚ್ಚರಿಯಾಗುವ ಚಿತ್ರವೊಂದು ಕಾಣಿಸಿಕೊಂಡಿತ್ತು. ಅಮಿತಾಬ್ ಅವರು ಗೇಲ್ ಅವರು ರಾಯಭಾರಿಯಾಗಿರುವ ಸ್ಪಾರ್ಟನ್ ಸಂಸ್ಥೆಯ ಪ್ರತಿನಿಧಿ ಜೊತೆ ಬ್ಯಾಟೊಂದನ್ನು ಹಿಡಿದುಕೊಂಡು ನಿಂತಿರುತ್ತಾರೆ. ಇದು ಅಂತಿಂಥ ಬ್ಯಾಟ್ ಅಲ್ಲ. ಚಿನ್ನ ಲೇಪಿತ ಬ್ಯಾಟ್. ಸ್ಪಾರ್ಟನ್ ಕಂಪನಿಯ ಈ ಬ್ಯಾಟ್​ನಲ್ಲಿ ಗೇಲ್​ರ ಹಸ್ತಾಕ್ಷರವೂ ಇದೆ.

ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ ಬಿಗ್ ಬಾಷ್ ಲೀಗ್ ಟಿ20 ಟೂರ್ನಿಯಲ್ಲಿ ಈ ಬ್ಯಾಟನ್ನು ಗೇಲ್ ಬಳಸಿದ್ದರು.‘ನನ್ನ ಸ್ಪಾರ್ಟನ್ ಬ್ಯಾಟ್​ಅನ್ನು ದಂತಕಥೆಯಾಗಿರುವ ಅಮಿತಾಬ್ ಬಚ್ಚನ್​ಗೆ ನೀಡುತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ. ಅವರ ಸಿನಿಮಾಗಳು, ಸ್ಟೈಲ್​ಅನ್ನು ನಾನು ಇಷ್ಟಪಡುತ್ತೇನೆ. ನಿಜವಾಗಿಯೂ ಅವರೊಬ್ಬ ದಂತಕಥೆ' ಎಂದು ಗೇಲ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮಿತಾಬ್ ಅವರು ಸರಣಿ ಟ್ವೀಟ್ ಮಾಡಿ ನಾವು ನಿಮ್ಮ ಅಭಿಮಾನಿ ಎಂದಿದ್ದಾರೆ.

ಮಿಸ್ಟರ್ ಗೇಲ್ ಇದೊಂದು ಅದ್ಭುತ ಗೌರವ

ಮಿಸ್ಟರ್ ಗೇಲ್ ಇದೊಂದು ಅದ್ಭುತ ಗೌರವ

‘ಮಿಸ್ಟರ್ ಗೇಲ್ ಇದೊಂದು ಅದ್ಭುತ ಗೌರವ. ನಾನು ನಿಮಗೆ ಗೊತ್ತಿರಬಹುದೆಂದೇ ಅಂದುಕೊಂಡಿರಲಿಲ್ಲ. ನಾವೆಲ್ಲರೂ ನಿಮ್ಮ ದೊಡ್ಡ ಅಭಿಮಾನಿಗಳು' ಎಂದು ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿ ವೇಳೆ ದಿಗ್ಗಜರ ಭೇಟಿ

ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ವಿಶ್ವ ಟಿ20 ಟೂರ್ನಿ ವೇಳೆ ಈ ಇಬ್ಬರು ದಿಗ್ಗಜರು ಭೇಟಿಯಾಗುವ ನಿರೀಕ್ಷೆಯಿದೆ.

ಗುರುವಾರದಂದು ಗಿಫ್ಟ್ ಹಂಚಿಕೆ ಕಾರ್ಯದಲ್ಲಿ ಗೇಲ್

ಗುರುವಾರದಂದು ಗಿಫ್ಟ್ ಹಂಚಿಕೆ ಕಾರ್ಯದಲ್ಲಿ ಗೇಲ್ ತೊಡಗಿದ್ದರು. ಸ್ಪಾರ್ಟನ್ ಸಂಸ್ಥೆಯಿಂದ #ThrowbackThursday ಅಭಿಯಾನದ ಮೂಲಕ ಗಿಫ್ಟ್ ಗಳನ್ನು ಗೇಲ್ ನೀಡುತ್ತಿದ್ದಾರೆ.

ಗೇಲ್ ಅವರು ಸಿನಿಮಾ ಫ್ಯಾನ್ ಎಂಬುದು ತಿಳಿದಿರಲಿಲ್ಲ

ಕ್ರಿಸ್ ಗೇಲ್ ಅವರು ಹಿಂದಿ ಸಿನಿಮಾ ಫ್ಯಾನ್ ಎಂಬುದು ತಿಳಿದಿರಲಿಲ್ಲ. ನನಗೆ ಅಚ್ಚರಿಯ ಗಿಫ್ಟ್ ಇದಾಗಿದೆ ಎಂದ ಬಿಗ್ ಬಿ.

ಶೀಘ್ರವೇ ಭಾರತಕ್ಕೆ ಬರುತ್ತಿದ್ದೇನೆ ಎಂದ ಗೇಲ್

ಅಮಿತಾಬ್ ಅವರ ಟ್ವೀಟ್ ಗೆ ಉತ್ತರಿಸಿ, ಶೀಘ್ರವೇ ಭಾರತಕ್ಕೆ ಬರುತ್ತಿದ್ದೇನೆ ಎಂದ ಗೇಲ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Amitabh Bachchan was stumped when he was presented an autographed bat by cricketer Chris Gayle. The 73-year-old took to various social media platforms to express his happiness over getting the token of love from the international batting sensation.
Please Wait while comments are loading...