ಸೆಕ್ಸಿ ಕಾಮೆಂಟ್ ಮಾಡಿ ಸ್ಸಾರಿ ಎಂದ ಪ್ಲೇ ಬಾಯ್ ಗೇಲ್

Posted By:
Subscribe to Oneindia Kannada

ಮೆಲ್ಬೋರ್ನ್, ಜ. 05: ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ವರದಿಗಾರ್ತಿಯೊಬ್ಬರಿಗೆ ಕಿಚಾಯಿಸಲು ಹೋಗಿ ಬೆಲೆ ತೆತ್ತಿದ್ದಾರೆ. ವರದಿಗಾರ್ತಿಗೆ ಕೇಳಬಾರದ್ದು ಕೇಳಿದ್ದಕ್ಕೆ ಗೇಲ್ ಅವರಿಗೆ 10 ಸಾವಿರ ಆಸ್ಟ್ರೇಲಿಯನ್ ಡಾಲರ್ ದಂಡ ವಿಧಿಸಲಾಗಿದೆ.

ಬಿಗ್ ಬಾಷ್ ಲೀಗ್ ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡುತ್ತಿರುವ ಎಡಗೈ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು 'ನೆಟ್ವರ್ಕ್ ಟೆನ್' ಪತ್ರಕರ್ತೆ ಮೆಲ್ ಮೆಕ್ ಲಾಫ್ಲಿನ್ ಅವರಿಗೆ ಪಂದ್ಯದ ನಂತರ ನಾವಿಬ್ಬರು ಡ್ರಿಂಕ್ಸ್ ಗೆ ಹೋಗಬೇಕು ಎಂದು ಹೇಳಿದ್ದಾರೆ. ಇದು ಲೈವ್ ನಲ್ಲಿ ಬಂದಿದೆ. ನಂತರ 'don't blush, baby' ಎಂದಿದ್ದಾರೆ. [ಈಗ 600 ಟಿ20 ಬೌಂಡರಿ, ಸಿಕ್ಸರ್ ಗಳ ಕಿಂಗ್!]

Chris Gayle fined $10,000 for 'inappropriate' comments to female TV reporter

ಈ ಬಗ್ಗೆ ಭಾರಿ ಆಕ್ಷೇಪ ಕೇಳಿ ಬಂದಾಗ, ನಾನು ಸುಮ್ನೆ ಜೋಕ್ ಮಾಡಿದೆ ಎಂದು ಜನವರಿ 5 ರಂದು ಕ್ಷಮಾಪಣೆ ಕೋರಿದ್ದಾರೆ. ಆದರೆ, ಸ್ಸಾರಿ ಎಂದಿದ್ದು ಸಾಕಾಗಲಿಲ್ಲ. ಮೆಲ್ಬೋರ್ನ್ ರೆನೆಗೇಡ್ಸ್ ತಂಡ ಕ್ರಿಸ್ ಗೇಲ್ ಅವರಿಗೆ 10,000 ಆಸ್ಟ್ರೇಲಿಯನ್ ಡಾಲರ್ ದಂಡ ವಿಧಿಸಿದೆ. ಹೋಬಾರ್ಟ್ ಹರಿಕೇನ್ ವಿರುದ್ಧ ಪಂದ್ಯ ನಡೆಯುವಾಗ ಈ ಘಟನೆ ನಡೆದಿದೆ.[ಗೇಲ್ ಧೂಳಿಪಟ ಮಾಡಿದ ವಿಶ್ವ ದಾಖಲೆಗಳ ಪಟ್ಟಿ]

ಈ ರೀತಿ ಘಟನೆಗೆ ನಾವು ಕ್ಷಮಾಪಣೆ ಕೋರುತ್ತೇವೆ. ಮೇಲ್ ಅವರು ಉತ್ತಮ ಕ್ರೀಡಾ ವರದಿಗಾರ್ತಿ, ನಮ್ಮ ಕ್ಲಬ್ ಬಗ್ಗೆ ಗೌರವಯುತ ಇಮೇಜ್ ಹಾಳಾಗಲು ನಾವು ಬಿಡುವುದಿಲ್ಲ. ಗೇಲ್ ಈ ರೀತಿ ಹೇಳಬಾರದಿತ್ತು ಎಂದು ಮೆಲ್ಬೋರ್ನ್ ತಂಡದ ಸಿಇಒ ಸ್ಟುವರ್ಟ್ ಕೋವೆಂಟ್ರಿ ಪ್ರತಿಕ್ರಿಯಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
West Indies' explosive batsman Chris Gayle has been fined Australian dollars 10,000 for "inappropriate" and "disrespectful" comments to a female TV reporter during a Big Bash League Twenty20 match on Monday (January 4).
Please Wait while comments are loading...