ಮೆಕಲಮ್ ದಾಖಲೆ ಮುರಿದ ಗೇಲ್ ಈಗ ಟಿ20 'ಸಿಕ್ಸರ್ ಕಿಂಗ್'

Posted By:
Subscribe to Oneindia Kannada

ಮುಂಬೈ, ಮಾರ್ಚ್ 17: ನ್ಯೂಜಿಲೆಂಡಿನ ಸ್ಫೋಟಕ ಬ್ಯಾಟ್ಸ್ ಮನ್ ಬ್ರೆಂಡನ್ ಮೆಕಲಮ್ ಅವರ ಸಡನ್ ನಿವೃತ್ತಿಯಿಂದಾಗಿ ಕ್ರಿಸ್ ಗೇಲ್ ಅವರು ಈಗ ಟಿ20 ಕ್ಷೇತ್ರದ 'ಸಿಕ್ಸರ್ ಕಿಂಗ್' ಎನಿಸಿಕೊಳ್ಳಲು ಸಾಧ್ಯವಾಗಿದೆ. ವಿಶ್ವ ಟಿ20 2016ರ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿದ ಗೇಲ್ ಅತ್ಯಧಿಕ ಸಿಕ್ಸರ್ ದಾಖಲೆ ಬರೆದಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ವೆಸ್ಟ್ ಇಂಡಿಸ್ ನ ಆರಂಭಿಕ ಆಟಗಾರ ಕ್ರಿಸ್ ಗೇಲ್ ಅವರು 46 ಪಂದ್ಯಗಳಿಂದ 31.12 ರನ್ ಸರಾಸರಿಯಂತೆ 98 ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ಟಿ20ಯಲ್ಲಿ ಗೇಲ್ ಸ್ಟ್ರೈಕ್​ರೇಟ್ 145.30 ರಷ್ಟಿದೆ. ಈ ಪಂದ್ಯಕ್ಕೂ ಮುನ್ನ ಬ್ರೆಂಡನ್ ಮೆಕಲಮ್ ಅವರು 91 ಟಿ20 ಅಂತಾರಾಷ್ಟ್ರೀಯ ಸಿಕ್ಸರ್ ಗಳ ಮೂಲಕ ಮುಂಚೂಣಿಯಲ್ಲಿದ್ದರು.[ಟಿ20 ಹಿಸ್ಟರಿ ರಿಪೀಟ್ಸ್ : ಗೇಲ್ ಆರಂಭ ಪಂದ್ಯದಲ್ಲೇ ಶತಕ]

Chris Gayle breaks McCullum's record of hitting most T20I sixes

ಇಂಗ್ಲೆಂಡ್ ವಿರುದ್ದ ನಡೆದ ವಿಶ್ವಟಿ20 ಸೂಪರ್ 10 ಹಂತದ ಪಂದ್ಯದಲ್ಲಿ 11 ಸಿಕ್ಸರ್​ಗಳ ಸುರಿಮಳೆಗೈದ ಗೇಲ್ 48 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದಲ್ಲದೆ ಅಜೇಯರಾಗಿ ಉಳಿದು ತಂಡಕ್ಕೆ 6 ವಿಕೆಟ್ ಗಳ ಜಯ ತಂದಿತ್ತರು. ಗೇಲ್ ಆರ್ಭಟದ ಮುಂದೆ ಇಂಗ್ಲೆಂಡ್ ಬಾರಿಸಿದ್ದ 182ರನ್ ಟಾರ್ಗೆಟ್ ಅತ್ಯಲ್ಪ ಎನಿಸಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chris Gayle breaks McCullum's record of hitting most T20I sixes. powering West Indies to a six-wicket win over England in their Super 10 match of sixth World Twenty20.
Please Wait while comments are loading...