ಕುಣಿಯುತ್ತಾ ಬಂದ ಗೇಲ್, ನಲಿದಾಡಿದ ಕೊಹ್ಲಿ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 29: ಅಂತಾರಾಷ್ಟ್ರೀಯ ನೃತ್ಯ ದಿನಕ್ಕೆ ಅರ್ಪಣೆ ಎಂಬಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರರು ಸಕತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ವಿಂಡೀಸ್ ನಿಂದ ಬಂದ ಕ್ರಿಸ್ ಗೇಲ್ ಕುಣಿತಕ್ಕೆ ನಾಯಕ ಕೊಹ್ಲಿ ಸಾಥ್ ನೀಡಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಐಪಿಎಲ್ 9ರಲ್ಲಿ ಇಲ್ಲಿ ತನಕ 5 ಪಂದ್ಯಗಳಲ್ಲಿ ಮೂರು ಪಂದ್ಯಗಳ್ಖನ್ನು ಸೋತಿದೆ. ಶನಿವಾರ ಹೈದರಾಬಾದ್​ನಲ್ಲಿ ಆತಿಥೇಯ ಸನ್​ರೈಸರ್ಸ್ ವಿರುದ್ಧ ಸೆಣಸಲಿದ್ದು, ಸ್ಪೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್ ಕಣಕ್ಕಿಳಿಯಲಿದ್ದಾರೆ. [ಮಗುವಿಗೆ 'ಬ್ಲಶ್' ಎಂದು ಹೆಸರಿಟ್ಟ ಕ್ರಿಸ್ ಗೇಲ್]

Chris Gayle back in India, dances up a storm with Virat Kohli

ಗೆಳತಿ ನತಾಶಾ ರಿಂದ ಹೆಣ್ಣುಶಿಶು ಪಡೆದು 'ಬ್ಲಶ್' ಎಂದು ಹೆಸರಿಟ್ಟ ಗೇಲ್ ಜಾಲಿ ಮೂಡ್ ನಲ್ಲಿದ್ದಾರೆ.

ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವ ಆರ್ ಸಿಬಿಯನ್ನು ಮತ್ತೆ ಮೇಲಕ್ಕೇರಿಸಲು ಗೇಲ್ ಪಣತೊಟ್ಟಿದ್ದಾರೆ. ಆಟಕ್ಕೂ ಮುನ್ನ ನೃತ್ಯ ಪ್ರತಿಭೆಯನ್ನು ಕೊಹ್ಲಿ ಹಾಗೂ ಗೇಲ್ ತೋರಿದ್ದಾರೆ. [ಕ್ರಿಸ್ ಗೇಲ್ ವೇಗದ ಶತಕ ದಾಖಲೆ ಪುಡಿ ಪುಡಿ]

ವಿಶೇಷ ವೆಂದರೆ ಆಲ್ ರೌಂಡರ್ ಶೇನ್ ವಾಟ್ಸನ್ ಅವರು ಮ್ಯೂಸಿಕ್ ಬ್ಯಾಂಡ್ ಸೇರಿಕೊಂಡು ಗಿಟಾರ್ ನುಡಿಸಿದ್ದಾರೆ. ಎಬಿ ಡಿವಿಲಿಯರ್ಸ್ ಪತ್ನಿ ಡೇನಿಯಲ್ ಡಿವಿಲಿಯರ್ಸ್ ಅವರು ಹಾಡುಗಾರಿಕೆ ಮೂಲಕ ರಂಜಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chris Gayle returned to India after his partner Natasha Berridge gave birth to the couple's baby daughter, who was named Blush.
Please Wait while comments are loading...