ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದಲ್ಲಿ ಇತಿಹಾಸ ಬರೆದ ಚೀನಾದ ಕ್ರಿಕೆಟರ್

By Mahesh

ಸಿಡ್ನಿ, ನ.23: ಚೀನಾ ಮೂಲದ ಕ್ರಿಕೆಟರ್ ಮಿಂಗ್ ಲಿ ಅವರು ಸೋಮವಾರ ಹೊಸ ಇತಿಹಾಸ ಬರೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಲೀಗ್ ನಲ್ಲಿ ಆಡಲು ಆಯ್ಕೆಯಾದ ಪ್ರಪ್ರಥಮ ಚೀನಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನ ಪ್ರಮುಖ ತಂಡ ಸಿಡ್ನಿ ಸಿಕ್ಸರ್ ನಲ್ಲಿ ಆಡಲು ಮಿಂಗ್ ಲೀ ಅವರು ಸಹಿ ಹಾಕಿದ್ದಾರೆ. 24 ವರ್ಷ ವಯಸ್ಸಿನ ಲೆಗ್ ಸ್ಪಿನ್ನರ್ ಲೀ ಅವರು ಕ್ರಿಕೆಟ್ ವಿಡಿಯೋ ನೋಡಿ ಕ್ರಿಕೆಟ್ ಕಲಿತು ಈಗ ಅಂತಾರಾಷ್ಟ್ರೀಯ ಮಟ್ಟದ ಲೀಗ್ ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿದ್ದಾರೆ.

ಶೇನ್ ವಾರ್ನ್ ಅವರ ಬೌಲಿಂಗ್ ನೋಡುತ್ತಾ ಬೆಳೆದ ಲೀ ಅವರು ಹಾಂಗ್ ಕಾಂಗ್ ನಿಂದ ಸಿಡ್ನಿಗೆ ಹಾರಲು ಕಾತುರದಿಂದ ಕಾಯುತ್ತಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ರೂಕಿ ಕಾರ್ಯಕ್ರಮದ ಅಡಿಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತದೆ.

Chinese cricketer Ming Li creates history in Australia


2004ರಿಂದ ಕ್ರಿಕೆಟ್ ಆಡುತ್ತಾ ಬಂದಿರುವ ಮಿಂಗ್ ಅವರು 2010ರಲ್ಲಿ ಹಾಂಕ್ ಕಾಂಗ್ ಪರ ಆಡುತ್ತಾ ಪಪುವಾ ನ್ಯೂ ಗಿನಿಯ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ನಂತರ ಗ್ವಾಂಗ್ ಜೊ ಹಾಗೂ ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.

ನನಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕಾತುರದಿಂದ ಕಾದಿದ್ದೇನೆ. 2012ರ ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡುವ ಮೂಲಕ ಚೀನಾ ಯುವಕನ ಕನಸು ನನಸಾಗಿತ್ತು. ವಿಶೇಷವೆಂದರೆ ಲೀ ಅವರ ಸೋದರಿ ಗೋಡಿವಾ ಅವರು ಹಾಂಗ್ ಕಾಂಗ್ ಮಹಿಳಾ ತಂಡದ ಸದಸ್ಯೆಯಾಗಿದ್ದಾರೆ.

ಲೀ ಅವರು ಆಯ್ಕೆಯಾಗಿರುವುದು ನಮಗೆ ಸಂತಸ ತಂದಿದೆ. ಇದು ಹಾಂಕ್ ಕಾಂಗ್ ಯುವ ಪ್ರತಿಭೆಗಳಿಗೆ ಸಂದ ಉತ್ತಮ ರಹದಾರಿಯಾಗಿದೆ ಎಂದು ಹಾಂಗ್ ಕಾಂಗ್ ಕ್ರಿಕೆಟ್ ಅಸೋಸಿಯೇಷನ್ ಸಿಇಒ ಟಿಮ್ ಕಟ್ಲರ್ ಹೇಳಿದ್ದಾರೆ.

5ನೇ ಆವೃತ್ತಿಯ ಬಿಬಿಎಲ್ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳಿದ್ದು ಡಿಸೆಂಬರ್ 17ರಿಂದ ಟೂರ್ನಿ ಆರಂಭಗೊಳ್ಳಲಿದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X