ಮ್ಯಾರಥಾನ್ ಇನ್ನಿಂಗ್ಸ್ : ದ್ರಾವಿಡ್ ದಾಖಲೆ ಮುರಿದ ಪೂಜಾರ

Posted By:
Subscribe to Oneindia Kannada

ರಾಂಚಿ, ಮಾರ್ಚ್ 20: ಅಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ದಾಖಲಿಸಿ ಮ್ಯಾರಥಾನ್ ಇನ್ನಿಂಗ್ಸ್ ಆಡಿದ ಚೇತೇಶ್ವರ್ ಪೂಜಾರ ಅವರು ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ದಾಖಲೆ ಮುರಿದಿದ್ದಾರೆ.

ಪೂಜಾರ 4ನೇ ದಿನದಾಟದಲ್ಲಿ 525 ಎಸೆತಗಳನ್ನು ಎದುರಿಸಿ 202 ರನ್(21 ಬೌಂಡರಿ) ಬಾರಿಸುವ ಮೂಲಕ ಪಾಕ್ ವಿರುದ್ಧ ದ್ರಾವಿಡ್ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. [ಗ್ಯಾಲರಿ: ಆಸೀಸ್ ಗೆ ಭಾರತದಿಂದ ದಿಟ್ಟ ಉತ್ತರ]

Cheteshwara Pujara becomes first Indian to face 500 balls in Tests

ಮೂರನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಅವರು 521 ಎಸೆತಗಳಲ್ಲಿ ದ್ವಿಶತಕ ಪೂರೈಸಿ ನಂತರ 525 ನೇ ಎಸೆತದಲ್ಲಿ ಔಟಾದರು. ಈ ಮೂಲಕ ಟೆಸ್ಟ್ ಇನ್ನಿಂಗ್ಸ್ ವೊಂದರಲ್ಲಿ 500ಕ್ಕೂ ಅಧಿಕ ಎಸೆತಗಳನ್ನು ಎದುರಿಸಿದ ಮೊದಲ ಭಾರತೀಯ ಬ್ಯಾಟ್ಸ್ ಮನ್ ಎನಿಸಿಕೊಂಡರು.[ಚಿತ್ರಗಳಲ್ಲಿ : ಆಸೀಸ್ ಏಟಿಗೆ ಎದಿರೇಟು ಕೊಟ್ಟ ಇಂಡಿಯಾ]

2004ರಲ್ಲಿ ರಾಹುಲ್ ದ್ರಾವಿಡ್ ಅವರು ಪಾಕಿಸ್ತಾನ ವಿರುದ್ಧ ರಾವಲ್ಪಿಂಡಿಯಲ್ಲಿ ನಡೆದ ಮೂರನೇ ಟೆಸ್ಟ್ ನ ಮೊದಲನೇ ಇನ್ನಿಂಗ್ಸ್ ನಲ್ಲಿ 270 ರನ್(495 ಎಸೆತ, 34 ಬೌಂಡರಿ, 1 ಸಿಕ್ಸರ್) ಬಾರಿಸಿದ್ದರು. ದ್ರಾವಿಡ್ ದ್ವಿಶತಕ ಸಾಧನೆಯಿಂದಾಗಿ ಭಾರತ ಈ ಪಂದ್ಯವನ್ನು ಇನ್ನಿಂಗ್ಸ್ ಮತ್ತು 131 ರನ್‍ಗಳಿಂದ ಗೆದ್ದುಕೊಂಡಿತ್ತು.

ಆಟಗಾರ ಗಳಿಸಿದ ರನ್
ಎಸೆತಗಳು ಎದುರಾಳಿ
ವರ್ಷ
ಚೇತೇಶ್ವರ್ ಪೂಜಾರ
202 525 Aus 2017
ರಾಹುಲ್ ದ್ರಾವಿಡ್
270 495 Pak 2004
ನವಜ್ಯೋತ್ ಸಿಧು
201 491 WI 1997
ರವಿಶಾಸ್ತ್ರಿ 206 477 Aus 1992
ಸುನಿಲ್ ಗವಾಸ್ಕರ್
172 472 Eng 1981

1938ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 847 ಎಸೆತಗಳಲ್ಲಿ ಇಂಗ್ಲೆಂಡಿನ ಲೆನ್ ಹಟ್ಟನ್ 364 ರನ್ ಗಳಿಸಿದ್ದು, ಇನ್ನೂ ದಾಖಲೆಯಾಗಿ ಉಳಿದಿದೆ.

ಆಸೀಸ್ ವಿರುದ್ಧ ದ್ವಿಶತಕ: ಪೂಜಾರ ಅವರು ಆಸೀಸ್ ವಿರುದ್ಧ ಒಟ್ಟು ಎರಡು ದ್ವಿಶತಕ ಸಿಡಿಸಿದ್ದಾರೆ. ಪೂಜಾರ ಅವರಿಗೂ ಮೊದಲು ಸಚಿನ್ ತೆಂಡೂಲ್ಕರ್ ಹಾಗು ವಿವಿಎಸ್ ಲಕ್ಷ್ಮಣ್ ಅವರು ಈ ಸಾಧನೆ ಮಾಡಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's most consistent middle-order batsman Cheteshwar Pujara stormed his way into record books after playing a marathon innings against Australia on fourth day of the third Test match here on Sunday (March 19).
Please Wait while comments are loading...