ಸಚಿನ್ ಗೆ ಹೋಟೆಲ್ ವೇಟರ್ ನೀಡಿದ ಸಲಹೆ ಏನು?

Posted By:
Subscribe to Oneindia Kannada

ಮುಂಬೈ, ಫೆಬ್ರವರಿ 01: ಚೆನ್ನೈನ ಹೊಟೇಲ್‌ ವೇಟರ್‌ ರೊಬ್ಬರು ನೀಡಿದ ಸಲಹೆ ಪಡೆದ ಮೇಲೆ ನನ್ನ ಆಟದಲ್ಲಿ ಸುಧಾರಣೆ ಕಾಣಲು ಸಾಧ್ಯವಾಯಿತು ಎಂದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ವೇಟರ್ ನೀಡಿದ ಸಲಹೆ ಏನು ಮುಂದೆ ಓದಿ...

ಒಮ್ಮೆ ಹೊಟೇಲ್ ವೊಂದರ ವೇಟರ್ ಆಟಕ್ಕೆ ಸಂಬಂಧಿಸಿದಂತೆ ನೀಡಿದ ಸಲಹೆಯೊಂದನ್ನು ವಿನಮ್ರತೆಯಿಂದ ಕೇಳಿಸಿಕೊಂಡು, ಆ ಸಲಹೆಯನ್ನು ಆಟದಲ್ಲಿ ಅಳವಡಿಸಿಕೊಂಡಿದ್ದರಂತೆ. ಈ ವಿಷಯವನ್ನು ಸಚಿನ್ ಅವರೇ ಹೇಳಿಕೊಂಡಿದ್ದಾರೆ. ನಾವು ಯಾರದ್ದೇ ಸಲಹೆಯನ್ನು ಸ್ವೀಕರಿಸಲು ಸಿದ್ಧವಾಗಿದ್ದರೆ ನಾವು ಇಂಪ್ರೂವ್ ಆಗ್ತೇವೆ. ನಾನು ಚೆನ್ನೈನಲ್ಲಿದ್ದಾಗ ಓರ್ವ ಹೊಟೇಲ್‌ ವೇಟರ್‌ ನನ್ನ ಬಳಿಗೆ ಬಂದು 'ನೀವು ಅನ್ಯಥಾ ಭಾವಿಸದಿದ್ದರೆ ಒಂದು ಮಾತು ಹೇಳ್ತೀನಿ'ಎಂದ್ರು. ನಾನು ಹೇಳಿ ಅಂದೆ.

Chennai waiter's advice helped me in improving my batting technique: Sachin Tendulkar

ನಿಮ್ಮ elbow guard ನಿಂದ ನಿಮ್ಮ ಬ್ಯಾಟಿಂಗ್ ಸ್ವಿಂಗ್ ಅಡ್ಡಿಯಾಗುತ್ತೆ ಎಂದ್ರು. ಅವರು ಹೇಳಿದ್ದು ಸತ್ಯ ಎನಿಸಿತು. ಅದಕ್ಕೆ ಮುನ್ನ ನನಗೆ ಅದು ಅಸೌಕರ್ಯವಾಗಿತ್ತು. ಅವರು ಹೇಳಿದ ತಕ್ಷಣ ನಾನು ನನ್ನ elbow guard ಬದಲಿಸಿದೆ. ನಮ್ಮ ದೇಶದಲ್ಲಿ ಪಾನ್‌ ಬೀಡ ಮಾರುವವರಿಂದ ದೊಡ್ಡ ದೊಡ್ಡ ಸಿಇಒಗಳವರೆಗೆ ಸಾಕಷ್ಟು ಸಲಹೆ ಸೂಚನೆ ನೀಡುವವರು ಇದ್ದಾರೆ. ನಾವು ಅವುಗಳನ್ನು ಸ್ವೀಕರಿಸಲು ಸಿದ್ಧರಿರಬೇಕು ಎಂದು ಸಚಿನ್ ಹೇಳಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's cricketing legend Sachin Tendulkar has revealed that he was always open to advices for good and it was a waiter's suggestion that helped the former captain improve his batting technique.
Please Wait while comments are loading...