ಬಿಸಿಸಿಐನಿಂದ ಚೆನ್ನೈ, ರಾಜಸ್ಥಾನ ತಂಡಕ್ಕೆ ಬಾಕಿ ಮೊತ್ತ ಪಾವತಿ!

Posted By:
Subscribe to Oneindia Kannada

ಮುಂಬೈ, ಸೆ. 30: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ನಿಂದ ಎರಡು ವರ್ಷ ನಿಷೇಧಕ್ಕೊಳಗಾಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ತಾನ ರಾಯಲ್ಸ್‌ ಫ್ರಾಂಚೈಸ್‌ ಗಳಿಗೆ ಸಲ್ಲಬೇಕಾಗಿದ್ದ ಬಾಕಿ ಮೊತ್ತವನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಪಾವತಿಸಿದೆ.

ಐಪಿಎಲ್ ಆರಂಭಕ್ಕೂ ಮುನ್ನ ನಿಯಮದಂತೆ ಈ ಎರಡು ತಂಡಗಳು ಫ್ರಾಂಚೈಸಿ ಫ್ರಾಂಚೈಸಿ ಶುಲ್ಕ ಪಾವತಿ ಮಾಡಿದ್ದವು. ನಿಷೇಧಕ್ಕೊಳಗಾದ ಬಳಿಕ ಮೊತ್ತವನ್ನು ಕಂತುಗಳಲ್ಲಿ ಪಾವತಿಸುವಂತೆ ಬಿಸಿಸಿಐಗೆ ಬಾಂಬೆ ಹೈಕೋರ್ಟ್ ಸೂಚಿಸಿತ್ತು.

ಅದರಂತೆ, ಕಳೆದ ತಿಂಗಳು ಮೊದಲ ಕಂತಿನ ರೂಪದಲ್ಲಿ ಸೂಪರ್‌ ಕಿಂಗ್ಸ್‌ಗೆ 11ಕೋಟಿ 41.14 ಲಕ್ಷ ರು ಹಾಗೂ ರಾಯಲ್ಸ್‌ ಗೆ 8 ಕೋಟಿ 40.18 ಲಕ್ಷ ರು ಹಣವನ್ನು ಬಿಸಿಸಿಐ ಬಿಡುಗಡೆ ಮಾಡಿತ್ತು.

ಈಗ ಎರಡನೇ ಕಂತಿನ ರೂಪದಲ್ಲಿ ಸೂಪರ್‌ ಕಿಂಗ್ಸ್‌ನ ಒಡೆತನ ಹೊಂದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಕ್ರಿಕೆಟ್‌ ಲಿಮಿಟೆಡ್‌ ಗೆ 11.4 ಕೋಟಿ ಹಾಗೂ ರಾಯಲ್ಸ್‌ ಮಾಲೀಕತ್ವ ಪಡೆದಿರುವ ಜೈಪುರ ಐಪಿಎಲ್‌ ಕ್ರಿಕೆಟ್‌ ಪ್ರೈವೇಟ್‌ ಲಿಮಿಟೆಡ್‌ ಫ್ರಾಂಚೈಸಿಗೆ 8.4 ಕೋಟಿ ಹಣ ರು ನೀಡಲಾಗಿದೆ.

ಇದೇ ವೇಳೆ 2016ರ ಐಪಿಎಲ್‌ ಟೂರ್ನಿಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಕ್ರೀಡಾಂಗಣ ಒದಗಿಸಿದ್ದಕ್ಕಾಗಿ ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆಗೆ ಬಿಸಿಸಿಐ 28.75 ಲಕ್ಷ ರು ನಗದು ಬಹುಮಾನ ಪ್ರಕಟಿಸಿದೆ(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Board of Control for Cricket in India (BCCI) has refunded 30 per cent of franchise fees paid for IPL 2016 by suspended teams, Chennai Super Kings (CSK) and Rajasthan Royals (RR), amounting to Rs 11.4 crore and 8.4 crore respectively.
Please Wait while comments are loading...