ಇಂಗ್ಲೆಂಡ್ ಸರಣಿಗಾಗಿ ಟೀಂ ಇಂಡಿಯಾಕ್ಕೆ ಸಿಕ್ತು ಸೂಪರ್ ಜರ್ಸಿ!

Posted By:
Subscribe to Oneindia Kannada

ಬೆಂಅಗಳೂರು, ಜನವರಿ 12: ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಕ್ಕೆ ಹೊಸ ಜರ್ಸಿ ಸಿಕ್ಕಿದೆ.

ಅತ್ಯುನ್ನತ ತಂತ್ರಜ್ಞಾನ ಬಳಕೆ ಮಾಡಿರುವ ಈ ದಿರಿಸುಗಳನ್ನು ನೈಕ್ ಸಂಸ್ಥೆ ವಿನ್ಯಾಸಗೊಳಿಸಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಪ್ರಕಟಿಸಿದೆ.

ಹೊಸ ವರ್ಷಕ್ಕೆ ಹೊಸ ಬಟ್ಟೆ ಎಂಬಂತೆ, ಟೀಂ ಇಂಡಿಯಾದ ಏಕದಿನ ಹಾಗೂ ಟಿ20 ತಂಡಕ್ಕೆ ಹೊಸ ನಾಯಕ ಲಭಿಸಿದ್ದಾರೆ. ಈಗ ನೈಕ್ ಸಂಸ್ಥೆ ವಿನ್ಯಾಸದ ಹೊಸ ಜರ್ಸಿಗಳನ್ನು ಪರಿಚಯಿಸಲಾಗಿದೆ.[ವಿಶ್ವ ಟಿ20ಗಾಗಿ ಟೀಂ ಇಂಡಿಯಾಕ್ಕೆ ಸಕತ್ ಟ್ರೆಂಡಿ ದಿರಿಸು]

ಈ ಜರ್ಸಿಗಳಲ್ಲಿ "4D Quickness" ಹಾಗೂ "Zero distractions ಪ್ರಮುಖ ಅಂಶಗಳಾಗಿವೆ. ಆತ್ಮವಿಶ್ವಾಸದಿಂದ ಜಯದತ್ತ ಸಾಗಲು ಈ ಜರ್ಸಿ ಸಹಕಾರಿ ಎಂದು ನೈಕ್ ಹೇಳಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ನಾಯಕ ಎಂಎಸ್ ಧೋನಿ, ಬದಲಾವಣೆಗೆ ತಕ್ಕಂತೆ ಟೀಂ ಮ್ಯಾನೇಜ್ಮೆಂಟ್ ಹಾಗೂ ನೈಕ್ ಉತ್ತಮ ಜರ್ಸಿಗಳನ್ನು ನೀಡುತ್ತಾ ಬಂದಿದೆ. ಹೊಸ ತಂತ್ರಜ್ಞಾನ ಆಟಗಾರರಿಗೆ ನಿಜಕ್ಕೂ ನೆರವಾಗಲಿದೆ ಎಂದಿದ್ದಾರೆ.

ನಾಯಕ ವಿರಾಟ್ ಕೊಹ್ಲಿ

ನಾಯಕ ವಿರಾಟ್ ಕೊಹ್ಲಿ

ಕ್ರೀಡೆ ಹಾಗೂ ಜೀವನ ಎರಡು ಬೇರೆ ಬೇರೆ ಅಲ್ಲ, ನಮ್ಮ ಜೀವನ ಶೈಲಿಗೆ ತಕ್ಕಂತೆ ಆಟವನ್ನು ರೂಪಿಸಬೇಕು, ಈ ಎರಡರ ನಡುವಿನ ಅಂತರವನ್ನು ಕಡಿಮೆ ಮಾಡ್ಬೇಕು. ಕ್ರಿಕೆಟ್ ನಮಗೆ ಎಲ್ಲವನ್ನು ಹೇಳಿಕೊಡುತ್ತದೆ. ಹೀಗಾಗಿ ನಮ್ಮ ಲುಕ್, ಶೈಲಿ ಎಲ್ಲವೂ ಮುಖ್ಯವಾಗುತ್ತದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಚಿತ್ರದಲ್ಲಿ ಎಡದಿಂದ ಬಲಕ್ಕೆ: ಮಿಥಾಲಿ ರಾಜ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಅಜಿಂಕ್ಯ ರಹಾನೆ, ಹರ್ಮನ್ ಪ್ರೀತ್ ಕೌರ್. Photos from BCCI

ನೈಕ್ ಸಂಸ್ಥೆ

ನೈಕ್ ಸಂಸ್ಥೆ

ವಿಶೇಷ ವಿನ್ಯಾಸ ತಾಪಮಾನಕ್ಕೆ ತಕ್ಕಂತೆ ಹಿತ ಅನುಭವ ನೀಡುವ ಬಟ್ಟೆ ಬಳಕೆ ಮಾಡಲಾಗಿದೆ ಎಂದು ನೈಕ್ ಸಂಸ್ಥೆ ಹೇಳಿದೆ. ಹೊಸ ತಂತ್ರಜ್ಞಾನದ ಬಗ್ಗೆ ತನ್ನ ವೆಬ್ ಸೈಟ್ ನಲ್ಲಿ ವಿವರಣೆ ನೀಡಿದೆ.

ವಿಶ್ವಟಿ20ಗಾಗಿ ಬಳಸಿದ ಟ್ರೆಂಡಿ ಜರ್ಸಿ

ವಿಶ್ವಟಿ20ಗಾಗಿ ಬಳಸಿದ ಟ್ರೆಂಡಿ ಜರ್ಸಿ

ವಿಶ್ವಟಿ20ಗಾಗಿ ಬಳಸಿದ ಟ್ರೆಂಡಿ ಜರ್ಸಿಗಳ ಚಿತ್ರಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪುರುಷ ಹಾಗೂ ಮಹಿಳಾ ತಂಡದ ಪ್ರಮುಖ ಆಟಗಾರರು ಹೊಸ ಜರ್ಸಿ ಹಾಗೂ ಟ್ರ್ಯಾಕ್ ಪ್ಯಾಂಟ್ ಧರಿಸಿ ಪೋಸ್

ವಿಶ್ವಕಪ್ 2015 ಕ್ಕಾಗಿ ಪರಿಸರ ಪ್ರೇಮ ಜಾಗೃತಿ

ವಿಶ್ವಕಪ್ 2015 ಕ್ಕಾಗಿ ಪರಿಸರ ಪ್ರೇಮ ಜಾಗೃತಿ ಮಾಡುವ ಇಂಥ ಶರ್ಟ್ ನೀಡಲಾಗಿತ್ತು, ಪ್ರತಿಯೊಂದು ಶರ್ಟ್ 33 ಪ್ಲಾಸ್ಟಿಕ್ ಬಾಟಲ್ ಬಳಸಿ ತಯಾರಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A new year has given way to a new Team India blue jersey which includes "4D Quickness" and "Zero distractions" features.Nike designers engaged with the Indian cricket team athletes to help understand their demands to create the most innovative team kit for Team India," BCCI said today (January 12).
Please Wait while comments are loading...