ವಿಡಿಯೋ: ಯುವರಾಜ್ ಸಿಂಗ್ ಗೆ 'ಸೂಪರ್ ಪವರ್' ಇದೆಯಂತೆ

Posted By:
Subscribe to Oneindia Kannada

ಲಂಡನ್, ಜೂನ್ 14: ಟೀಂ ಇಂಡಿಯಾದ ಆಲ್ ರೌಂಡರ್ ಯುವರಾಜ್ ಸಿಂಗ್‌‌ ಅವರಿಗೆ ಅತೀಂದ್ರೀಯ ಶಕ್ತಿಗಳಿವೆ ಇದೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಯುವರಾಜ್ ಅವರು ತಮ್ಮ ಇನ್ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಒಂದು ವಿಡಿಯೋ ಹಾಕಿದ್ದಾರೆ.

ಒವಲ್ ಕ್ರಿಕೆಟ್ ಮೈದಾನದ ಬಳಿಯ ಒಂದು ಕಟ್ಟಡದ ಬಳಿ ಹೋಗುತ್ತಾರೆ. ಆ ಕಟ್ಟಡದ ಬಾಗಿಲುಗಳು ತನ್ನಕ್ಕಷ್ಟೇ ತಾನೇ ತೆಗೆದುಕೊಳ್ಳುವ ದೃಶ್ಯ ವಿಡಿಯೋದಲ್ಲಿದೆ.

Champions Trophy: Yuvraj Singh shows his 'super powers' in video shot by Virat Kohli

ಬರ್ಮಿಂಗ್ ಹ್ಯಾಮ್ ನಲ್ಲಿ ಜೂನ್ 15ರಂದು ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯವಾಡಲು ಯುವರಾಜ್ ಸಿಂಗ್ ಸೇರಿದಂತೆ ಟೀಂ ಇಂಡಿಯಾ ಆಟಗಾರರು ತಯಾರಿ ನಡೆಸುತ್ತಿದ್ದಾರೆ.

ಈ ನಡುವೆ, ಮೈದಾನದ ಬಳಿಯ ಕಟ್ಟಡಕ್ಕೆ ಬಂದ ಯುವರಾಜ್ ಅವರು ಕೈಸನ್ನೆ ಮಾಡುತ್ತಿದ್ದಂತೆ, ಬಾಗಿಲುಗಳು ತನ್ನಷ್ಟಕ್ಕೆ ತಾನೇ ಓಪನ್ ಆಗುತ್ತದೆ. ಬಾಗಿಲಿನಿಂದ ಒಳ ಪ್ರವೇಶಿಸಿದ ಯುವರಾಜ್, ನಂತರ ಹೊರ ಬಂದು ಕೈಸನ್ನೆ ಮಾಡಿದಾಗ ಬಾಗಿಲು ಮುಚ್ಚಿಕೊಳ್ಳುತ್ತದೆ. ಈ ವಿಡಿಯೋ ಈಗ ಸಕತ್ ವೈರಲ್ ಆಗುತ್ತಿದೆ.

When u think u have super powers 💥! 🤣🤣 video courtesy @virat.kohli

A post shared by Yuvraj Singh (@yuvisofficial) on Jun 13, 2017 at 10:00am PDT

'ನಿಮ್ಮ ಬಳಿ ಸೂಪರ್ ಪವರ್ ಇದೆ ಎಂದು ನಿಮಗನಿಸಿದಾಗ' ಎಂದು ಅಡಿ ಬರಹ ಕೊಟ್ಟು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅಂದ ಹಾಗೆ ಈ ವಿಡಿಯೋ ಶೂಟ್ ಮಾಡಿದ್ದು ವಿರಾಟ್ ಕೊಹ್ಲಿ.

ತಮ್ಮ ವೃತ್ತಿ ಬದುಕಿನ 300ನೇ ಪಂದ್ಯವನ್ನು ಆಡಲು ಸಿದ್ಧವಾಗಿರುವ ಯುವರಾಜ್ ಅವರು ಅಜರುದ್ದೀನ್, ಸಚಿನ್, ಗಂಗೂಲಿ, ದ್ರಾವಿಡ್ ಅವರ ಸಾಲಿಗೆ ಸೇರುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Does India all-rounder Yuvraj Singh have supernatural powers? The answer could be yes for his supporters as a new video shot by captain Virat Kohli proves this.
Please Wait while comments are loading...