CT2017 : ಶಿಖರ್ ಗೆ ಚಿನ್ನದ ಬ್ಯಾಟು, ಹಸನ್ ಗೆ ಚಿನ್ನದ ಚೆಂಡು

Posted By:
Subscribe to Oneindia Kannada

ಲಂಡನ್, ಜೂನ್ 18 : ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರಲ್ಲಿ ಉತ್ತಮ ನಿರ್ವಹಣೆ ತೋರಿದ ಬ್ಯಾಟ್ಸ್ ಮನ್ ಹಾಗೂ ಬೌಲರ್ ಗೆ ಗೋಲ್ಡನ್ ಬ್ಯಾಟ್ ಹಾಗೂ ಬಾಲ್ ಪ್ರಶಸ್ತಿ ನೀಡಲಾಗಿದೆ.

ಭಾರತದ ಶಿಖರ್ ಧವನ್ ಅವರು ಅತಿಹೆಚ್ಚು ರನ್ ಗಳಿಸಿದ್ದಕ್ಕಾಗಿ ಗೋಲ್ಡನ್ ಬ್ಯಾಟ್ ಹಾಗೂ ಅತಿ ಹೆಚ್ಚು ವಿಕೆಟ್ ಗಳಿಸಿದ ಪಾಕಿಸ್ತಾನದ ಹಸನ್ ಅಲಿ ಗೋಲ್ದನ್ ಬಾಲ್ ಗೆದ್ದಿದ್ದಾರೆ. ಹಸನ್ ಅಲಿ ಅವರು ಗೋಲ್ಡನ್ ಬಾಲ್ ಜತೆಗೆ ಟೂರ್ನಮೆಂಟ್ ನ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.

Champions Trophy: Shikhar Dhawan wins Golden Bat, Hassan Ali bags Golden Ball

ಐಸಿಸಿ ಆಯೋಜನೆಯ 50 ಓವರ್ ಟೂರ್ನಮೆಂಟ್ ಪೈಕಿ ಪಾಕಿಸ್ತಾನ ತಂಡವು 1992ರ ನಂತರ ಇದೇ ಟೂರ್ನಮೆಂಟ್ ಗೆದ್ದಿದ್ದು, 2009ರಲ್ಲಿ ಐಸಿಸಿ ವಿಶ್ವ ಟಿ20 ಕಪ್ ಎತ್ತಿತ್ತು. ಈ ಮೂಲಕ ಭಾರತ, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ನಂತರ ಪಾಕಿಸ್ತಾನವು ಐಸಿಸಿ ಆಯೋಜನೆಯ ಎಲ್ಲಾ ಮೂರು ಪ್ರಮುಖ ಟೂರ್ನಮೆಂಟ್(ವಿಶ್ವಕಪ್, ವಿಶ್ವ ಟಿ20 ಹಾಗೂ ಚಾಂಪಿಯನ್ಸ್ ಟ್ರೋಫಿ) ಗೆದ್ದ ತಂಡ ಎನಿಸಿಕೊಂಡಿದೆ.

2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 338ರನ್ ಕಲೆ ಹಾಕಿರುವ ಭಾರತದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಅತಿ ಹೆಚ್ಚು ರನ್ ಗಳಿಸುವ ಮೂಲಕ ಗೋಲ್ಡನ್ ಬ್ಯಾಟ್ ಗೆದ್ದಿದ್ದಾರೆ. 2013ರಲ್ಲಿ ಟೂರ್ನಮೆಂಟ್ ನ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದಿದ್ದರು.

ಪಾಕಿಸ್ತಾನದ ಯುವ ವೇಗಿ ಹಸನ್ ಅಲಿ 13ವಿಕೆಟ್ ಗಳಿಸಿ ಗೋಲ್ಡನ್ ಬಾಲ್ ತನ್ನದಾಗಿಸಿಕೊಂಡಿದ್ದಾರೆ. 4.29 ಎಕಾನಾಮಿಯಂತೆ 14.29 ಸ್ಟ್ರೈಕ್ ರೇಟ್ ನಂತೆ ಅಲಿ ವಿಕೆಟ್ ಪಡೆದಿದ್ದಾರೆ. ಭಾರತ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ ಒಂದು ವಿಕೆಟ್ ಮಾತ್ರ ಗಳಿಸಿದ್ದ ಅಲಿ ನಂತರ ಎಲ್ಲಾ ಪಂದ್ಯಗಳಲ್ಲಿ ತಲಾ 3 ವಿಕೆಟ್ ಗಳಿಸಿದ್ದು ವಿಶೇಷ.

ಟೂರ್ನಮೆಂಟ್ ನ ಶ್ರೇಷ್ಠ ಆಟಗಾರರು :
1998: ಜಾಕ್ ಕಾಲಿಸ್
2000: **** ಆಯೋಜನೆಯಾಗಿಲ್ಲ
2002:****
2004: ರಾಮ್ ನರೇಶ್ ಸರವಣ್
2006: ಕ್ರಿಸ್ ಗೇಲ್

2009: ರಿಕಿ ಪಾಂಟಿಂಗ್

2013: ಶಿಖರ್ ಧವನ್

2017: ಹಸನ್ ಅಲಿ
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Fast bowler Hasan Ali was named player of the ICC Champions Trophy 2017 after he bowled Pakistan to their maiden ICC Champions Trophy title at The Oval.
Please Wait while comments are loading...