'ಸಚಿನ್' ಸ್ಫೂರ್ತಿ ಕೂಡಾ ಟೀಂ ಇಂಡಿಯಾದ ತಲೆ ಕಾಯಲಿಲ್ಲ!

Posted By:
Subscribe to Oneindia Kannada

ಲಂಡನ್, ಜೂನ್ 19: ಟೀಂ ಇಂಡಿಯಾ ಡ್ರೆಸಿಂಗ್ ರೂಮಿನಲ್ಲಿ ನಿನ್ನೆ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜ ಕಿತ್ತಾಡಿಕೊಂಡರೋ ಇಲ್ಲವೋ ಗೊತ್ತಿಲ್ಲ. ಆದರೆ, ಸಚಿನ್ ಅವರ ಸ್ಫೂರ್ತಿಗೆ ಬೆಲೆ ಸಿಗಲಿಲ್ಲ. ಸಚಿನ್ ಅವರ ಆಸೆಗೆ ನಿರಾಶೆ ಮೂಡಿಸಿದ್ದಕ್ಕಾಗಿ ಟೀಂ ಇಂಡಿಯಾದ ಹಲವು ಸದಸ್ಯರು ನಿರಾಶೆಯಲ್ಲಿದ್ದಾರೆ.

CT2017 : ಶಿಖರ್ ಗೆ ಚಿನ್ನದ ಬ್ಯಾಟು, ಹಸನ್ ಗೆ ಚಿನ್ನದ ಚೆಂಡು

ಚಾಂಪಿಯನ್ಸ್ ಟ್ರೋಫಿ : ಗ್ಯಾಲರಿ

ಭಾರತದ ಯುವ ಆಟಗಾರರಿಗೆ ಸ್ಫೂರ್ತಿ ತುಂಬಲು ಸಚಿನ್ ತೆಂಡೂಲ್ಕರ್ ಅವರೇನೂ ಓವಲ್ ಮೈದಾನಕ್ಕೆ ಬಂದಿರಲಿಲ್ಲ. ಆದರೆ, ಸಚಿನ್ ಅವರ ಬದಲಿಗೆ ಅವರ ಹೆಲ್ಮೆಟ್ ವೊಂದನ್ನು ಟೀಂ ಇಂಡಿಯಾ ಡ್ರೆಸಿಂಗ್ ರೂಮಿನಲ್ಲಿರಿಸಲಾಗಿತ್ತು.

Champions Trophy: Sachin Tendulkar's Helmet In Team India Dressing Room Inspires Players

ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಟ್ವೀಟ್ ಕೂಡಾ ಮಾಡಿತ್ತು. ಡ್ರೆಸಿಂಗ್ ರೂಮಿನಲ್ಲಿ ಏನು ಸಿಕ್ಕಿದೆ ನೋಡಿ ಎಂದು ಟ್ವೀಟ್ ನಲ್ಲಿ ಹೇಳಲಾಗಿತ್ತು..

ಪಾಕಿಸ್ತಾನ ವಿರುದ್ಧ ಹೀನಾಯ ಸೋಲು: ಭಾರತ ಮಾಡಿದ 5 ತಪ್ಪುಗಳು

ಡ್ರೆಸಿಂಗ್ ರೂಮಿನ ಗೋಡೆಯೊಂದರ ಮೇಲೆ ಸಚಿನ್ ಅವರು ಬಳಸುತ್ತಿದ್ದ ಹೆಲ್ಮೆಟ್ ತೂಗು ಹಾಕಲಾಗಿತ್ತು. ಅದರ ಕೆಳಗಡೆ 1996-2000 ಎಂದು ಬರೆಯಲಾಗಿದ್ದು, ಸಚಿನ್ ಅವರ ಹಸ್ತಾಕ್ಷರವೂ ಇದೆ. ಅದರ ಕೆಳಗೆ 23 ಟೆಸ್ಟ್ ಕ್ರಿಕೆಟ್ ಪಂದ್ಯ ಹಾಗೂ 730 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಎಂದು ಬರೆಯಲಾಗಿದೆ.

ಈ ಹೆಲ್ಮೆಟ್ ನಿಂದ ಟೀಂ ಇಂಡಿಯಾ ಸದಸ್ಯರು ಸ್ಫೂರ್ತಿ ಪಡೆದು ಮೈದಾನಕ್ಕೆ ಇಳಿಯುತ್ತಿದ್ದರು ಎನ್ನಲಾಗಿದೆ. ಆದರೆ, ಪಾಕ್ ವಿರುದ್ಧದ ಪಂದ್ಯದಲ್ಲಿ ಮಾತ್ರ 'ಸಚಿನ್ ಸ್ಫೂರ್ತಿ' ಸೇರಿದಂತೆ ಯಾವ ಸ್ಫೂರ್ತಿಯೂ ತಂಡಕ್ಕೆ ಗೆಲುವು ತಂದುಕೊಡಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ICC Champions Trophy: Sachin Tendulkar's Helmet In Team India Dressing Room Inspires Players. Master blaster was not present with the team his helmet, which has a place of prominence in the Team India dressing room, definitely inspires the side. But, Team India failed to live up to expectation.
Please Wait while comments are loading...