ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿಗಿಂತ ಮುಂಚಿತವಾಗಿ ಪಾಂಡ್ಯ ಕಣಕ್ಕಿಳಿದ ರಹಸ್ಯ ಬಹಿರಂಗ!

ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ 2017ರ ಪಂದ್ಯದಲ್ಲಿ ಎಂಎಸ್ ಧೋನಿ ಅವರಿಗಿಂತ ಮುಂಚಿತವಾಗಿ ಹಾರ್ದಿಕ್ ಪಾಂಡ್ಯ ಅವರು ಕಣಕ್ಕಿಳಿದ ರಹಸ್ಯ ಈಗ ಬಹಿರಂಗವಾಗಿದೆ.

By Mahesh

ಬರ್ಮಿಂಗ್ ಹ್ಯಾಮ್, ಜೂನ್ 06: ಚಾಂಪಿಯನ್ಸ್ ಟ್ರೋಫಿ 2017ರ ಭಾರತ ಹಾಗೂ ಪಾಕಿಸ್ತಾನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಗೆ ಬ್ಯಾಟಿಂಗ್ ನಲ್ಲಿ ಬಡ್ತಿ ಸಿಕ್ಕಿದ್ದು ನೆನಪಿರಬಹುದು.

ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು

ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಹಾರ್ದಿಕ್ ಪಾಂಡ್ಯ ಸಿಕ್ಸರ್ ಗಳನ್ನು ಸಿಡಿಸಿ ಎಲ್ಲರ ಗಮನ ಸೆಳೆದರು. ಪಾಂಡ್ಯ ಅವರನ್ನು ಹುರಿದುಂಬಿಸಿ, ಕಣಕ್ಕಿಳಿಯುವಂತೆ ಮಾಡಿದ್ದು ಕೋಚ್ ಅನಿಲ್ ಕುಂಬ್ಳೆ ಎಂದು ಇದೀಗ ತಿಳಿದು ಬಂದಿದೆ.[ಭಾರತ ವಿರುದ್ಧ ಸತತ ಟಾಸ್ ಗೆದ್ದಿದ್ದಷ್ಟೇ ಪಾಕಿಸ್ತಾನದ ಸಾಧನೆ]

ಎಂಎಸ್ ಧೋನಿಗಿಂತ ಮುಂಚಿತವಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಆಡಿಸಲು ಕಾರಣವೇನು? ಎಂಬ ಪ್ರಶ್ನೆ ಭಾನುವಾರದಿಂದ ಅಭಿಮಾನಿಗಳನ್ನು ಕಾಡುತ್ತಿತ್ತು. ಆಡುವ XI ಆಯ್ಕೆ ಕೋಚ್ ಅಥವಾ ಕ್ಯಾಪ್ಟನ್ ಜವಾಬ್ದಾರಿಯಾಗಿರುತ್ತದೆ. ಅದರಂತೆ, ಕೋಚ್ ಅನಿಲ್ ಕುಂಬ್ಳೆ ಅವರು ಸೂಚಿಸಿದಂತೆ ಹಾರ್ದಿಕ್ ಪಾಂಡ್ಯ ಅವರು ಮೈದಾನಕ್ಕಿಳಿದರು ಎಂಬುದು ಈಗ ಬಹಿರಂಗವಾಗಿದೆ.[ಭಾರತದ ಗೆಲುವಿಗೆ ಕಾರಣವಾದ 5 ಅಂಶಗಳು]

ಹಾಲಿ ಚಾಂಪಿಯನ್ಸ್ ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಜೂನ್ 08(ಗುರುವಾರ)ರಂದು ಶ್ರೀಲಂಕಾ ವಿರುದ್ಧ ಹಾಗೂ ಜೂನ್ 11(ಭಾನುವಾರ)ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ತಮ್ಮ ಅನುಭವವನ್ನು ಪಾಂಡ್ಯ ಹಂಚಿಕೊಂಡಿದ್ದು, ಈ ಬಗ್ಗೆ ಮುಂದೆ ಓದಿ..

46ನೇ ಓವರ್ ನಲ್ಲಿ ಕರೆ

46ನೇ ಓವರ್ ನಲ್ಲಿ ಕರೆ

ನನಗೆ ಪಂದ್ಯದ 46ನೇ ಓವರ್ ನಡೆಯುವಾಗ ಕೋಚ್ ಕುಂಬ್ಳೆಯಿಂದ ಕರೆ ಬಂತು, ಪ್ಯಾಡ್ ಧರಿಸಿ ಮೈದಾನಕ್ಕಿಳಿಯುವಂತೆ ಸೂಚಿಸಿದರು. ನಾನು ಅಷ್ಟು ತ್ವರಿತವಾಗಿ ಎಂದೂ ಪ್ಯಾಡ್, ಗ್ಲೋವ್ಸ್ ಹಾಕಿಕೊಂಡಿರಲಿಲ್ಲ. ಯುವಿ ಔಟಾದ ಬಳಿಕ ನಾನು ಅದೇ ರೀತಿ ಬಿರುಸಿನ ಬ್ಯಾಟಿಂಗ್ ಮಾಡುವಂತೆ ಸೂಚಿಸಲಾಗಿತ್ತು ಎಂದು ಪಾಂಡ್ಯ ಅವರು ಪಂದ್ಯದ ನಂತರದ ಸಂದರ್ಶನದಲ್ಲಿ ಹೇಳಿದರು.[ಭಾರತ- ಪಾಕ್ ಕ್ರಿಕೆಟ್ ಕದನ ಟಾಪ್ 5 ಪಂದ್ಯಗಳು]

ಪಂದ್ಯದ ಬಗ್ಗೆ ಪಾಂಡ್ಯ

ಪಂದ್ಯದ ಬಗ್ಗೆ ಪಾಂಡ್ಯ

' ನಿಜ ಹೇಳಬೇಕೆಂದರೆ ನಾನು ಕ್ರೀಸ್ ಗೆ ಹೋಗುವ ತನಕ ನನ್ನ ಎದೆ ಜೋರಾಗಿ ಬಡಿದುಕೊಳ್ಳುತ್ತಿತ್ತು. ಒತ್ತಡದಲ್ಲೇ ಕಣಕ್ಕಿಳಿದೆ. ಆದರೆ, ಅನಗತ್ಯ ಒತ್ತಡ ಏಕೆ., ಇರುವ ಕೆಲ ಓವರ್ ಗಳಲ್ಲಿ ಎಂಜಾಯ್ ಮಾಡುತ್ತಾ ಬ್ಯಾಟ್ ಬೀಸುವ ಎಂದೆನಿಸಿ ಬ್ಯಾಟಿಂಗ್ ಶುರು ಮಾಡಿದೆ'. ಕೊಹ್ಲಿ ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಯುವಿ ಅವರು ಹಾಕಿಕೊಟ್ಟ ಅಡಿಪಾಯಕ್ಕೆ ತಕ್ಕಂತೆ ಇನ್ನಿಂಗ್ಸ್ ಬೆಳೆಸಲು ಸಹಕಾರಿಯಾಯಿತು.

ಕುಂಬ್ಳೆ ಇಟ್ಟ ಭರವಸೆ ಹುಸಿಯಾಗಲಿಲ್ಲ

ಕುಂಬ್ಳೆ ಇಟ್ಟ ಭರವಸೆ ಹುಸಿಯಾಗಲಿಲ್ಲ

ಪಾಂಡ್ಯ ಅವರ ಮೇಲೆ ಕುಂಬ್ಳೆ ಇಟ್ಟ ಭರವಸೆ ಹುಸಿಯಾಗಲಿಲ್ಲ. ಪಂದ್ಯದ ಕೊನೆ ಓವರ್ ನಲ್ಲಿ ಪಾಂಡ್ಯ ಸತತ ಮೂರು ಸಿಕ್ಸರ್ ಸಿಡಿಸಿದರು. 8 ಎಸೆತಗಳಲ್ಲಿ 20ರನ್ ಚೆಚ್ಚಿದ ಪಾಂಡ್ಯ ಭಾರತದ ಮೊತ್ತವನ್ನು 48 ಓವರ್ ಗಳಲ್ಲಿ 319/3 ಸ್ಕೋರ್ ಮಾಡಿತು. ಪಾಕಿಸ್ತಾನ ತಂಡ 164ಸ್ಕೋರಿಗೆ ಆಲೌಟ್ ಆಗಿ ಭಾರತಕ್ಕೆ 124ರನ್ ಜಯ ಸಿಕ್ಕಿತು.ಮಳೆಯ ಕಾರಣ ಅನೇಕ ಬಾರಿ ಪಂದ್ಯ ನಿಲ್ಲಿಸಬೇಕಾಯಿತು.

ಧೋನಿ ಬ್ಯಾಟಿಂಗ್

ಧೋನಿ ಬ್ಯಾಟಿಂಗ್

ಅನಿಲ್ ಕುಂಬ್ಳೆ ಅವರ ನಿರ್ಣಯವನ್ನು ಪಾಂಡ್ಯ ಅವರು ಸಮರ್ಥಿಸಿಕೊಂಡಿದ್ದಾರೆ. ಪಾಂಡ್ಯ ಅವರು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಬ್ಯಾಟ್ ಬೀಸುವುದನ್ನು ಕಂಡಿರಬಹುದು. ಮುಂಬೈ ತಂಡ ಕೋಚ್ ಆಗಿ ಕುಂಬ್ಳೆ ಅವರು ಪಾಂಡ್ಯ ಅವರ ಸಾಮರ್ಥ್ಯದ ಬಗ್ಗೆ ಅರಿವಿದ್ದರಿಂದ ಧೋನಿಗೂ ಮುನ್ನ ಪಾಂಡ್ಯರನ್ನು ಕಣಕ್ಕಿಳಿಸಿ, ಯಶಸ್ಸು ಕಂಡಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X