ಭಾರತ vs ಪಾಕಿಸ್ತಾನ ಪಂದ್ಯದ AD ದರ 1 ಕೋಟಿ ರು!

Posted By:
Subscribe to Oneindia Kannada

ಲಂಡನ್, ಜೂನ್ 18: ಭಾರತ- ಪಾಕಿಸ್ತಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ನೇರ ಪ್ರಸಾರದ ಮೂಲಕ ಸ್ಟಾರ್ ನೆಟ್ವರ್ಕ್ ಭರ್ಜರಿ ವ್ಯಾಪಾರ ಮಾಡುತ್ತಿದೆ.

ಕೇವಲ 30 ಸೆಕೆಂಡ್‌ಗಳ ಜಾಹೀರಾತು ದರ 1 ಕೋಟಿ ರು ಮೀರಿದೆ. ಹೌದು ಇದು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಎಫೆಕ್ಟ್. ಭಾರತ- ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ನೇರ ಪ್ರಸಾರದ ಸಮಯದ ಜಾಹೀರಾತು ದರ ಗಗನಕ್ಕೇರಿದೆ.

India-Pakistan blockbuster final at the ICC Champions Trophy 2017 tomorrow (June 18) has resulted in advertsement rates on TV to skyrocket.

30 ಸೆಕೆಂಡ್‌ಗಳ ಜಾಹೀರಾತಿಗೆ 75 ಲಕ್ಷದಿಂದ ಒಂದು ಕೋಟಿ ರೂಪಾಯಿವರೆಗೆ ದರ ನಿಗದಿಪಡಿಸಲಾಗಿದೆ ಎಂದು ಮಾರುಕಟ್ಟೆಯಲ್ಲಿ ಸುದ್ದಿಯಿದೆ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ- ಪಾಕಿಸ್ತಾನ ಫೈನಲ್ ಪ್ರವೇಶಿಸುವ ಮುನ್ನವೇ ಶೇಕಡ 95ರಷ್ಟು ಜಾಹೀರಾತಿನ ಸ್ಲಾಟ್ ಗಳು ಮಾರಾಟವಾಗಿದ್ದವು. ಉಳಿದ ಶೇಕಡ 5ರಷ್ಟು ಸ್ಲಾಟ್‌ ಗಳಿಗೆ ಪೈಪೋಟಿ ನಡೆದಿದ್ದು, ಭಾರಿ ಬೆಲೆಗೆ ಸ್ಲಾಟ್ ಸೇಲ್ ಆಗಿವೆ.

ಚಾಂಪಿಯನ್ಸ್ ಟ್ರೋಫಿ ಲೀಗ್ ಪಂದ್ಯವನ್ನು 20.1 ಕೋಟಿ ಮಂದಿ ವೀಕ್ಷಿಸಿದ್ದರು. ಈಗ ಫೈನಲ್ ಪಂದ್ಯವನ್ನು ಸುಮಾರು 22.5 ಕೋಟಿ ಮಂದಿ ಈ ಪಂದ್ಯ ವೀಕ್ಷಿಸುತ್ತಾರೆ ಎಂದು ಅಂದಾಜು ಮಾಡಲಾಗಿದೆ.

ಭಾರತ- ಪಾಕಿಸ್ತಾನ ಫೈನಲ್ ಹಿನ್ನೆಲೆಯಲ್ಲಿ ಟಿವಿ ಉದ್ಯಮದಲ್ಲಿ ಈ ಪರಿಸ್ಥಿತಿಯನ್ನು ಇಂಗ್ಲೆಂಡ್‌ನ ಮಾಜಿ ನಾಯಕ ಹಾಗೂ ವೀಕ್ಷಕ ವಿವರಣೆಕಾರ ಮೈಕಲ್ ವಾನ್ ಅಂದಾಜಿಸಿದ್ದರು, ಸಾಮಾನ್ಯವಾಗಿ ಜನಪ್ರಿಯ ಪಂದ್ಯಗಳ ನೇರಪ್ರಸಾರ ವೇಳೆ ಜಾಹೀರಾತು ದರ 30 ಸೆಕೆಂಡ್‌ಗೆ 10 ಲಕ್ಷ ಇರುತ್ತದೆ. ಇದೀಗ ಹತ್ತು ಪಟ್ಟು ಹೆಚ್ಚಿದೆ. ಈ ಪಂದ್ಯ ಎಲ್ಲ ಜಾಹೀರಾತು ಆದಾಯ ದಾಖಲೆಗಳನ್ನೂ ಮುರಿಯಲಿದೆ ಎಂದು ವಿಶ್ಲೇಷಕರು ಅಂದಾಜು ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India-Pakistan blockbuster final at the ICC Champions Trophy 2017 tomorrow (June 18) has resulted in advertsement rates on TV to skyrocket.
Please Wait while comments are loading...