ಫೈನಲ್ ಪಂದ್ಯದಲ್ಲಿ ತ್ವರಿತ ಅರ್ಧಶತಕ, ದಾಖಲೆ ಬರೆದ ಪಾಂಡ್ಯ

Posted By:
Subscribe to Oneindia Kannada

ಲಂಡನ್, ಜೂನ್ 18 : ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಬ್ಯಾಟಿಂಗ್ ಬೀಸಿದ್ದಲ್ಲದೆ ಹಾರ್ದಿಕ್ ಪಾಂಡ್ಯ ಅವರು ಹೊಸ ದಾಖಲೆ ಬರೆದಿದ್ದಾರೆ.

CT2017 : ಶಿಖರ್ ಗೆ ಚಿನ್ನದ ಬ್ಯಾಟು, ಹಸನ್ ಗೆ ಚಿನ್ನದ ಚೆಂಡು

ಚಾಂಪಿಯನ್ಸ್ ಟ್ರೋಫಿ : ಗ್ಯಾಲರಿ

ಐಸಿಸಿ ಆಯೋಜನೆಯ ನಿಗದಿತ ಓವರ್ ಗಳ ಪಂದ್ಯಗಳ ಟೂರ್ನಿಯ ಫೈನಲ್ ಗಳಲ್ಲಿ ಅತ್ಯಂತ ತ್ವರಿತ ಗತಿ ಅರ್ಧಶತಕವನ್ನು ಪಾಂಡ್ಯ ಸಿಡಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಡಂ ಗಿಲ್ ಕ್ರಿಸ್ಟ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

Champions Trophy Final: Hardik Pandya breaks Adam Gilchrist's record

ಪಾಕಿಸ್ತಾನದ ವಿರುದ್ಧ ಹಾರ್ದಿಕ್ ಪಾಂಡ್ಯ ಅವರು 32 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಗಿಲ್ ಕ್ರಿಸ್ಟ್ ದಾಖಲೆ ಮುರಿದರು. ಐಸಿಸಿ ಕ್ರಿಕೆಟ್ ವಿಶ್ವಕಪ್ 1999ರಲ್ಲಿ ಗಿಲ್ ಕ್ರಿಸ್ಟ್ ಅವರು 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದರು.

ಪಾಕಿಸ್ತಾನ ವಿರುದ್ಧ ಹೀನಾಯ ಸೋಲು: ಭಾರತ ಮಾಡಿದ 5 ತಪ್ಪುಗಳು

ಕೆಳ ಕ್ರಮಾಂಕದಲ್ಲಿ ಆಡಲು ಬಂದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು 43 ಎಸೆತಗಳಲ್ಲಿ 76ರನ್(4 ಬೌಂಡರಿ, 6 ಸಿಕ್ಸರ್) ಬಾರಿಸಿ ಉತ್ತಮ ಹೋರಾಟ ತೋರಿದರು. ಆದರೆ, ರವೀಂದ್ರ ಜಡೇಜರಿಂದ ಆದ ಪ್ರಮಾದಕ್ಕೆ ರನೌಟ್ ಆಗಿ ಆಕ್ರೋಶಭರಿತರಾಗಿ ಪೆವಿಲಿಯನ್ ಗೆ ತೆರಳಿದರು.
ಸೋತ ಪಂದ್ಯದಲ್ಲೂ ದಾಖಲೆ ಬರೆದ ಯುವರಾಜ್ ಸಿಂಗ್

ಫರಾಖ್ ಜಮಾನ್ ಶತಕದ ನೆರವಿನಿಂದ 338ರನ್ ಗಳಿಸಿದ್ದ ಪಾಕಿಸ್ತಾನದ ಎದುರು ಭಾರತ 158ರನ್ನಿಗೆ ಆಲೌಟ್ ಆಗಿ 180ರನ್ ಗಳ ಭಾರಿ ಅಂತರದ ಸೋಲು ಕಂಡಿತು. ಚೊಚ್ಚಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದ ಪಾಕಿಸ್ತಾನವು ವಿಜಯೋತ್ಸವ ಆಚರಿಸಿತು. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The only good that happened to India in the Champions Trophy 2017 final was Hardik Pandya slamming the fastest fifty in ICC event final.
Please Wait while comments are loading...