ಕೊಹ್ಲಿ ನಾಲಗೆ ಹೊರಹಾಕಿ ಸಂಭ್ರಮಿಸಿದ್ದಕ್ಕೆ ಏನರ್ಥ?

Posted By:
Subscribe to Oneindia Kannada

ಬರ್ಮಿಂಗ್ ಹ್ಯಾಮ್, ಜೂನ್ 16 : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉಗ್ರ ಪ್ರತಾಪಿ ಎನಿಸಿಕೊಂಡರೂ ಅಭಿಮಾನಿಗಳ ಪಾಲಿನ ಅಚ್ಚುಮೆಚ್ಚಿನ ಆಟಗಾರ.

ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ ಫೀಲ್ಡಿಂಗ್ ಮಾಡುವಾಗ ವಿಶಿಷ್ಟ, ವಿಚಿತ್ರ ಸಂಭ್ರಮಾಚರಣೆ ಮೂಲಕ ಗಮನ ಸೆಳೆದಿದ್ದಾರೆ.

ಎಬಿಡಿ ಏಕದಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಅವರು 'ನಾಲಗೆ ಹೊರ ಹಾಕಿ' ಸಂಭ್ರಮಿಸಿದ್ದು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ. ಕೊಹ್ಲಿ ಅವರ ಈ ಸಂಭ್ರಮಾಚರಣೆಗೆ ಪರ-ವಿರೋಧ ಪ್ರತಿಕ್ರಿಯೆಗಳು ಬಂದಿವೆ.

ಭಾರತ vs ಇಂಗ್ಲೆಂಡ್ ಫೈನಲ್, ಇದು ಜನರ ಬಯಕೆ: ಕೊಹ್ಲಿ

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೊಹ್ಲಿ ಅವರು ಬಾಂಗ್ಲಾದೇಶದ ಮೊದಲ ಕೆಲ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ತಮೀಮ್ ಇಕ್ಬಾಲ್ (70) ಹಾಗೂ ಮುಷ್ಫಿಕರ್ ರಹೀಂ(61) ವಿಕೆಟ್ ಮಹತ್ವದ್ದಾಗಿತ್ತು. ಕೇದಾರ್ ಜಾಧವ್ ಬೌಲಿಂಗ್ ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ರಹೀಂ ಔಟಾದಾಗ ಕೊಹ್ಲಿ ಈ ರೀತಿ ಒಂದು ಸಂಭ್ರಮಾಚರಣೆ ಮಾಡಿದರು.

ಕೊಹ್ಲಿ ಸೆಲೆಬ್ರೇಷನ್

ಕೊಹ್ಲಿ ಸೆಲೆಬ್ರೇಷನ್

ಸಾಮಾನ್ಯವಾಗಿ ನಾಲಗೆ ಹೊರ ಹಾಕಿರುವ ಎಮೋಜಿಗಳ ಅರ್ಥವನು ಅನುಸರಿಸಿದರೆ, ಇದು ಎದುರಾಳಿಯನ್ನು ಕಿಚಾಯಿಸಲು ತೋರುವ ಹಾವ ಭಾವ ಎನಿಸುತ್ತದೆ.

ಅನುಷ್ಕಾ ಕಂಡಿರಬಹುದು

ಬಹುಶಃ ಪ್ರೇಕ್ಷಕರ ಗ್ಯಾಲರಿಯಲ್ಲಿ ಅನುಷ್ಕಾ ಶರ್ಮ ಕುಳಿತಿರುವುದು ಕಂಡಿರಬೇಕು. ಅದಕ್ಕೆ ಕೊಹ್ಲಿ ಈ ರೀತಿ ಆಡುತ್ತಿದ್ದಾರೆ. Tongue out

ಕೊಹ್ಲಿಗೆ ಉಪದೇಶ

ಕ್ರಿಕೆಟ್ ಎಂದರೆ ಸಭ್ಯಸ್ಥರ ಆಟ, ಈ ರೀತಿ ನಡೆ ಸರಿ ಇಲ್ಲ ಎಂದು ಬೋಧಿಸಿದ ಫ್ಯಾನ್.

ಬೆಲೆ ಕಟ್ಟಲಾಗದು

ವಿರಾಟ್ ಕೊಹ್ಲಿ ಅವರ ಸೆಲೆಬೇಷನ್ ಗೆ ಬೆಲೆ ಕಟ್ಟಲಾಗದು ಎಂಬ ಅಭಿಮಾನಿಗಳು, ಖುಷಿಯಿಂದ ಸ್ಕ್ರೀನ್ ಶಾಟ್, ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ.

ಇದೇನು ಹೊಸದಲ್ಲ

ಆದರೆ, ಕ್ರಿಕೆಟ್ ಜಗತ್ತಿಗೆ ನಾಲಗೆ ಹೊರಹಾಕಿ ಸಂಭ್ರಮಿಸುವುದು ಹೊಸ ಸಂಗತಿಯಲ್ಲ. ನ್ಯೂಜಿಲೆಂಡಿನ ಬ್ಯಾಟ್ಸ್ ಮನ್ ರಾಸ್ ಟೇಲರ್ ಅವರು ಶತಕ ಬಾರಿಸಿದಾಗ ಇದೇ ರೀತಿ ಮಾಡುತ್ತಾರೆ. ಆ ರೀತಿ ಸಂಭ್ರಮಿಸುವುದು ಅವರ ಮಗಳಿಗಾಗಿ ಎಂದು ಟೇಲರ್ ಹೇಳಿಕೊಂಡಿದ್ದಾರೆ.

ನಾಲಗೆ ಹೊರ ಹಾಕುವುದು

ನಾಲಗೆ ಹೊರ ಹಾಕುವ ಹಾವ ಭಾವಕ್ಕೆ ನಾನಾ ಅರ್ಥಗಳಿವೆ. ಇದು ಕಾಲ ದೇಶಗಳಲ್ಲಿ ಬದಲಾವಣೆ ಹೊಂದುತ್ತಾ ಬಂದಿದೆ. ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ಅವರ ನಾಲಗೆ ಹೊರಹಾಕಿರುವ ಚಿತ್ರ ಮರೆಯಲು ಸಾಧ್ಯವಿಲ್ಲ. ಈ ಬಗ್ಗೆ ವಿವರಣೆ ನೀಡಿದ್ದ ಐನ್ ಸ್ಟೈನ್, ನನ್ನ ರಾಜಕೀಯ ನಿಲುವನ್ನು ತೋರುತ್ತದೆ ಎಂದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Whatever India captain Virat Kohli does on the field, it attracts huge attention. It was no different when fans saw a different kind of celebrations from him during India's Champions Trophy semi-final against Bangladesh today (June 15).
Please Wait while comments are loading...